ಮಧ್ಯ ಪ್ರದೇಶ: ಕೊವಿಡ್ ಲಸಿಕೆ ಕೇಂದ್ರದಲ್ಲಿ ನೂಕು ನುಗ್ಗಲು; ಕಾಲ್ತುಳಿತ ರೀತಿಯ ಪರಿಸ್ಥಿತಿ ನಿರ್ಮಾಣ

| Updated By: ರಶ್ಮಿ ಕಲ್ಲಕಟ್ಟ

Updated on: Jul 02, 2021 | 2:17 PM

Covid-19 Vaccination: ಸೌಸರ್ ಬ್ಲಾಕ್‌ನ ಲೋಡಿಖೇಡಾ ಪ್ರದೇಶದ ಸಮುದಾಯ ಭವನವನ್ನು ಇಮ್ಯುನೈಸೇಷನ್ ಕೇಂದ್ರವನ್ನಾಗಿ ಮಾಡಲಾಗಿದೆ. ಗುರುವಾರ ಬೆಳಿಗ್ಗೆ 8 ಗಂಟೆಗೆ ತೆರೆಯುವ ಮೊದಲು ಜನರು ಇಲ್ಲಿ ಜಮಾಯಿಸಿದ್ದಾರೆ. ನಂತರ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರನ್ನು ನಿಯೋಜಿಸಲಾಯಿತು ಎಂದು ಜಿಲ್ಲಾ ಇಮ್ಯುನೈಜೇಷನ್ ಅಧಿಕಾರಿ ಎಲ್. ಎನ್. ಸಾಹು ಹೇಳಿದ್ದಾರೆ.

ಮಧ್ಯ ಪ್ರದೇಶ: ಕೊವಿಡ್ ಲಸಿಕೆ ಕೇಂದ್ರದಲ್ಲಿ ನೂಕು ನುಗ್ಗಲು; ಕಾಲ್ತುಳಿತ ರೀತಿಯ ಪರಿಸ್ಥಿತಿ ನಿರ್ಮಾಣ
ಮಧ್ಯಪ್ರದೇಶದ ಕೊವಿಡ್ ಲಸಿಕೆ ಕೇಂದ್ರದಲ್ಲಿ ನೂಕು ನುಗ್ಗಲು
Follow us on

ಚಿಂದ್ವಾರ (ಮಧ್ಯ ಪ್ರದೇಶ): ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯ ಲಸಿಕೆ ಕೇಂದ್ರದಲ್ಲಿ ಗುರುವಾರ ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಲಸಿಕೆ ಸ್ವೀಕರಿಸುವುದಕ್ಕಾಗಿ ಸುಮಾರು 600 ಜನರು ಲೋಡಿಖೇಡಾದಲ್ಲಿರುವ ಲಸಿಕೆ ಕೇಂದ್ರಕ್ಕೆ ತೆರಳದ್ದರು . ಆದಾಗ್ಯೂ, ಕೇವಲ 280 ಡೋಸ್ ಗಳು ಮಾತ್ರ ಲಭ್ಯವಿದ್ದು, 300 ಕ್ಕೂ ಹೆಚ್ಚು ಜನರನ್ನು ಹಿಂತಿರುಗಿ ಬರಬೇಕಾಯಿತು.

ಗುರುವಾರ ಬೆಳಿಗ್ಗೆ ಸಂಭವಿಸಿದ ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ, ವ್ಯಾಕ್ಸಿನೇಷನ್ ಕೇಂದ್ರದ ಶಟರ್ ಮೇಲಕ್ಕೆ ಹೋಗುವುದನ್ನು ಜನರು ಕಾಯುತ್ತಿರುವುದನ್ನು ಕಾಣಬಹುದು. ಅವರು ಅರ್ಧ ತೆರೆದಿರುವಾಗ, ಜನರು ಒಳಗೆ ನುಗ್ಗಿ ಅಲ್ಲಿರುವ ಕುರ್ಚಿಗಳಲ್ಲಿ ಕುಳಿತುಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು.

ಸೌಸರ್ ಬ್ಲಾಕ್‌ನ ಲೋಡಿಖೇಡಾ ಪ್ರದೇಶದ ಸಮುದಾಯ ಭವನವನ್ನು ಇಮ್ಯುನೈಸೇಷನ್ ಕೇಂದ್ರವನ್ನಾಗಿ ಮಾಡಲಾಗಿದೆ. ಗುರುವಾರ ಬೆಳಿಗ್ಗೆ 8 ಗಂಟೆಗೆ ತೆರೆಯುವ ಮೊದಲು ಜನರು ಇಲ್ಲಿ ಜಮಾಯಿಸಿದ್ದಾರೆ. ನಂತರ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರನ್ನು ನಿಯೋಜಿಸಲಾಯಿತು ಎಂದು ಜಿಲ್ಲಾ ಇಮ್ಯುನೈಜೇಷನ್ ಅಧಿಕಾರಿ ಎಲ್. ಎನ್. ಸಾಹು ಹೇಳಿದ್ದಾರೆ.

ಅಲ್ಲಿ ಸೇರಿರುವ ಜನರೇ ಶಟರ್ ತೆರೆಯಲು ಮತ್ತು ಒಳಗೆ ಹೋಗಿ ಲಸಿಕೆ ಹಾಕಿಸಿಕೊಳ್ಳಲು ಯತ್ನಿಸಿದರು. 15 ನಿಮಿಷಗಳಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಯಿತು. ಒಂದು ನಿರ್ದಿಷ್ಟ ಸಮಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದಾಗ ಈ ರೀತಿ ಸಂಭವಿಸುತ್ತದೆ. ಹೊಲಗಳಲ್ಲಿ ಕೆಲಸ ಮಾಡುವ ಜನರು ಬೆಳಗ್ಗೆಯೇ ಲಸಿಕೆ ಹಾಕಲು ಬಂದಿದ್ದರು ಎಂದು ಸಾಹು ಹೇಳಿದ್ದಾರೆ.


ಲೋಡಿಖೇಡಾವು ಚಿಂದ್ವಾರಾದ ಜಿಲ್ಲಾ ಕೇಂದ್ರದಿಂದ ಸುಮಾರು 60 ಕಿ.ಮೀ ದೂರದಲ್ಲಿದೆ, ಅಲ್ಲಿನ ಲಸಿಕೆ ಕೇಂದ್ರಗಳಲ್ಲಿ ಎಲ್ಲಾ ವಯಸ್ಸಿನ ಜನರಿಗೆ ಉಚಿತ ಲಸಿಕೆ ನೀಡುತ್ತವೆ. ಲಸಿಕೆ ಕೇಂದ್ರಗಳಿಗೆ ಹೋಗಿ ಅಲ್ಲಿ ಲಸಿಕೆ ಪಡೆಯಬಹುದು. ಗ್ರಾಮೀಣ ಬ್ಲಾಕ್ ಗಳಿಗೆ 3,000 ಡೋಸ್ ಹಂಚಿಕೆ ಮಾಡಲಾಗಿದ್ದರೆ, ನಗರ ಬ್ಲಾಕ್ ಗಳಿಗೆ 4,000 ಡೋಸ್ ನೀಡಲಾಗುತ್ತಿದೆ. ಇವು ಕೇಂದ್ರಗಳಲ್ಲಿ ಸಮಾನವಾಗಿ ವಿತರಿಸಲ್ಪಡುತ್ತವೆ. ಚಿಂದ್ವಾರದಲ್ಲಿ ಗುರುವಾರ 22,469 ಡೋಸ್‌ಗಳನ್ನು ನೀಡಲಾಗಿದೆ.

ಲಸಿಕೆ ಪಡೆಯದಿದ್ದರೆ ಜನರು ಉಚಿತ ಪಡಿತರ ಸಿಗುವುದಿಲ್ಲ ಎಂದು ಆಡಳಿತವು ಘೋಷಿಸಿದ್ದರಿಂದ ಜನಸಮೂಹವು ಒಟ್ಟುಗೂಡಿದೆ ಎಂಬ ವದಂತಿಗಳು ಆಧಾರರಹಿತ ಎಂದು ಸೌಸರ್ ಬ್ಲಾಕ್‌ನ ತಹಶೀಲ್ದಾರ್ ಮಹೇಶ್ ಅಗರ್‌ವಾಲ್ ಸ್ಪಷ್ಟಪಡಿಸಿದರು.

“ವ್ಯಾಕ್ಸಿನೇಷನ್ ಸೆಂಟರ್ ತೆರೆಯಲು ಜನರು ಕಾಯುತ್ತಿದ್ದರು. ಅವರಿಗೆ ಕೆಲವು ಟೋಕನ್ ಗಳನ್ನು
ನೀಡಲಾಯಿತು.ಟೋಕನ್ ಇಲ್ಲದ ಜನರಿಗೆ ಹಿಂತಿರುಗುವಂತೆ ಹೇಳಲಾಯಿತು .ಸೌಸರ್ ಮಹಾರಾಷ್ಟ್ರಕ್ಕೆ ಹತ್ತಿರದಲ್ಲಿರುವುದರಿಂದ ಜನರು ಮೂರನೇ ಅಲೆಯ ಬಗ್ಗೆ ಭಯಭೀತರಾಗಿದ್ದಾರೆ. ಆದ್ದರಿಂದ ಅವರು ಲಸಿಕೆ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು ಎಂದು ಅಗರ್‌ವಾಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ:  Coronavirus cases in India: ದೇಶದಲ್ಲಿ 46,617 ಹೊಸ ಕೊವಿಡ್ ಪ್ರಕರಣ ಪತ್ತೆ, 853 ಮಂದಿ ಸಾವು

Published On - 2:14 pm, Fri, 2 July 21