ಉಕ್ರೇನ್ನ ಸುಮಿ (Sumy) ಯುದ್ಧವಲಯದಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ಬಗ್ಗೆ ನಮಗೆ ಕಾಳಜಿಯಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ತೀವ್ರತೆ ಹೆಚ್ಚಾಗಿರುವ ಸುಮಿಯಲ್ಲಿ ಇರುವ ವಿದ್ಯಾರ್ಥಿಗಳು ಯಾವ ಕಾರಣಕ್ಕೂ ಹೊರಬೀಳಬೇಡಿ. ಸಾಧ್ಯವಾದಷ್ಟು ಮುನ್ನೆಚ್ಚರಿಕಾ ಕ್ರಮ ಕೈಗೊಂಡು, ಶೆಲ್ಟರ್ಗಳ ಒಳಗೇ ಇರಿ. ಎಲ್ಲರನ್ನೂ ರಕ್ಷಣೆ ಮಾಡುವ ಸಲುವಾಗಿ, ಕದನ ವಿರಾಮ ಘೋಷಿಸಿ ಸುರಕ್ಷಿತ ಕಾರಿಡಾರ್ ಸೃಷ್ಟಿಸಿಕೊಡುವಂತೆ ಭಾರತ ರಷ್ಯಾ ಮತ್ತು ಉಕ್ರೇನ್ಗೆ ನಾವು ಒತ್ತಾಯಿಸಿದ್ದೇವೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಹೇಳಿದೆ.
ಉಕ್ರೇನ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಟ್ವೀಟ್ ಮಾಡಿ, ಸುಮಿ ಯುದ್ಧ ವಲಯದಲ್ಲಿರುವ ವಿದ್ಯಾರ್ಥಿಗಳು ಇದ್ದಲ್ಲೇ ಸುರಕ್ಷಿತವಾಗಿರಿ. ಧೈರ್ಯಗೆಡಬೇಡಿ. ನಿಮ್ಮನ್ನು ಸ್ಥಳಾಂತರ ಮಾಡಲು ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ. ಪ್ರತಿಯೊಬ್ಬರನ್ನೂ ರಕ್ಷಣೆ ಮಾಡುವವರೆಗೂ ನಮ್ಮ ಕಂಟ್ರೋಲ್ ರೂಂ ಸಕ್ರಿಯವಾಗಿಯೇ ಇರುತ್ತದೆ ಎಂದು ತಿಳಿಸಿದೆ.
Exploring all possible mechanisms to evacuate ??n citizens in Sumy, safely & securely.
Discussed evacuation & identification of exit routes with all interlocuters including Red Cross.
Control room will continue to be active until all our citizens are evacuated.
Be Safe Be Strong— India in Ukraine (@IndiainUkraine) March 4, 2022
ಸುಮಿ ಎಂಬುದು ಉಕ್ರೇನ್ನ ಈಶಾನ್ಯ ವಲಯದಲ್ಲಿರುವ ಒಂದು ನಗರ. ಇಲ್ಲಿ ಭಾರತೀಯ ವಿದ್ಯಾರ್ಥಿಗಳು ಸುಮಾರು 800 ಮಂದಿ ಇದ್ದಾರೆ. ಅಲ್ಲೀಗ ಸದ್ಯ ಯುದ್ಧದ ತೀವ್ರತೆಯೂ ಜಾಸ್ತಿಯಾಗಿದೆ. ಬಂಕರ್, ಶೆಲ್ಟರ್ಗಳಲ್ಲಿರುವ ವಿದ್ಯಾರ್ಥಿಗಳು ಸೋಷಿಯಲ್ ಮೀಡಿಯಾಗಳಲ್ಲಿ ವಿವಿಧ ವಿಡಿಯೋಗಳನ್ನು ಹಾಕುತ್ತಿದ್ದಾರೆ. ರಾಯಭಾರಿ ಕಚೇರಿಗೆ ಎಸ್ಒಎಸ್ ಮೆಸೇಜ್ಗಳನ್ನು ಕಳಿಸಿ, ತಮ್ಮನ್ನು ಕಾಪಾಡುವಂತೆ ಕೇಳಿಕೊಳ್ಳುತ್ತಿದ್ದಾರೆ. ಇನ್ನು ವಿವಿಧ ದೇಶಗಳ ನಾಗರಿಕರು, ವಿದ್ಯಾರ್ಥಿಗಳ ರಕ್ಷಣೆಗಾಗಿ ಮಾನವೀಯ ಕಾರಿಡಾರ್ಗಳನ್ನು ಅನುವು ಮಾಡಿಕೊಡಲು ರಷ್ಯಾ ತಾತ್ಕಾಲಿಕವಾಗಿ ಕದನ ವಿರಾಮ ಘೋಷಿಸಿದೆ.
ಇದನ್ನೂ ಓದಿ: Milk Price Hike: ಭಾನುವಾರದಿಂದ ಮದರ್ ಡೈರಿ ಹಾಲಿನ ಬೆಲೆ 1 ಲೀಟರ್ಗೆ 2 ರೂ. ಏರಿಕೆ
Published On - 4:58 pm, Sat, 5 March 22