ತ್ರಿಶ್ಶೂರ್ (ಕೇರಳ) ಜನವರಿ 03: ಕೇರಳದ (Kerala) ತ್ರಿಶೂರ್‌ನಲ್ಲಿ (Thrissur)ಇಂದು (ಬುಧವಾರ) ಪ್ರಧಾನಿ ನರೇಂದ್ರ ಮೋದಿ (Narendra Modi) ರೋಡ್ ಶೋ ನಡೆಸಿದ್ದಾರೆ. ಬಿಜೆಪಿ ರಾಜ್ಯ ಘಟಕ ಆಯೋಜಿಸಿರುವ ಎರಡು ಲಕ್ಷಕ್ಕೂ ಅಧಿಕ ಮಹಿಳೆಯರು ಭಾಗವಹಿಸುವ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಇಂದು ಮಧ್ಯಾಹ್ನ ಕೇರಳಕ್ಕೆ ಬಂದಿಳಿದ ಪ್ರಧಾನಿ ಮೋದಿ ರೋಡ್‌ಶೋ ನಡೆಸಿ ನಂತರ ತೆಕ್ಕಿಂಕಾಡ್ ಮೈದಾನದಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಪ್ರಧಾನಿಯವರನ್ನು ಸ್ವಾಗತಿಸಲು ಪಟ್ಟಣವನ್ನು ಬ್ಯಾನರ್ ಮತ್ತು ಹೋರ್ಡಿಂಗ್‌ಗಳಿಂದ ಅಲಂಕರಿಸಲಾಗಿದೆ. ಪ್ರಧಾನಿ ಮೋದಿ ಅವರ ದರ್ಶನಕ್ಕಾಗಿ ಮಹಿಳೆಯರು ಕಾದು ಕುಳಿತಿರುವುದು ಕಂಡುಬಂತು. ಅವರಲ್ಲಿ ಒಬ್ಬರು, “ನಮ್ಮ ಪ್ರಧಾನಿ ಮೋದಿ ಅತ್ಯಂತ ಗೌರವಾನ್ವಿತ ನಾಯಕ, ಅವರು ಇಲ್ಲಿನ ಮಹಿಳೆಯನ್ನು ಉದ್ದೇಶಿಸಿ ಕೇರಳಕ್ಕೆ ಬರುತ್ತಿದ್ದಾರೆ. ನಾವು ಅವರನ್ನು ನೋಡಲು ಇಲ್ಲಿದ್ದೇವೆ” ಎಂದು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
#WATCH | People shower flower petals on Prime Minister Narendra Modi as he holds a roadshow in Thrissur, Kerala. pic.twitter.com/VwVVUOzBbX
— ANI (@ANI) January 3, 2024
ಸಂಸತ್ತಿನ ಉಭಯ ಸದನಗಳಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಯಶಸ್ವಿಯಾಗಿ ಅಂಗೀಕರಿಸಿದ್ದಕ್ಕಾಗಿ ಪ್ರಧಾನಿ ಮೋದಿಯವರನ್ನು ಶ್ಲಾಘಿಸಲು ‘ಸ್ತ್ರೀ ಶಕ್ತಿ ಮೋದಿಕ್ಕ್ ಒಪ್ಪಂ’ (ಮೋದಿಯೊಂದಿಗೆ ಸ್ತ್ರೀ ಶಕ್ತಿ ) ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಅಂಗನವಾಡಿ ಶಿಕ್ಷಕಿಯರು , ಆಶಾ ಕಾರ್ಯಕರ್ತೆಯರು, ಉದ್ಯಮಿಗಳು, ಕಲಾವಿದರು, ಎಂಜಿಎನ್‌ಆರ್‌ಇಜಿಎ ಮತ್ತು ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕರ್ತರು ಸೇರಿದಂತೆ ವಿವಿಧ ಹಿನ್ನೆಲೆಯ ಮಹಿಳೆಯರು ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
We accord immense priority to empowering Nari Shakti and making them the drivers of India’s progress. Speaking at Sthree Shakti Modikkoppam in Kerala. https://t.co/R5HmJU1v6Y
— Narendra Modi (@narendramodi) January 3, 2024
ನಟಿ-ನೃತ್ಯ ಕಲಾವಿದೆ ಶೋಭನಾ, ಕ್ರಿಕೆಟರ್ ಮಿನ್ನು ಮಣಿ, ಉದ್ಯಮಿ ಬೀನಾ ಕಣ್ಣನ್, ಗಾಯಕಿ ವೈಕಂ ವಿಜಯಲಕ್ಷ್ಮಿ ಮತ್ತು ಭ್ರಷ್ಟಾಚಾರ ಮತ್ತು ಕಮ್ಯೂನಿಸ್ಟ್ ಸರ್ಕಾರದ ವಿರುದ್ಧ ಧ್ವನಿ ಎತ್ತಿದ ಹಿರಿಯ ಮಹಿಳೆ ಮರಿಯಕುಟ್ಟಿ ಸೇರಿದಂತೆ ಹಲವಾರು ಪ್ರಮುಖ ವ್ಯಕ್ತಿಗಳು ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಪ್ರಧಾನಿ ಮೋದಿ ಜನವರಿ 2-3 ರಿಂದ ತಮಿಳುನಾಡು, ಲಕ್ಷದ್ವೀಪ ಮತ್ತು ಕೇರಳಕ್ಕೆ ಎರಡು ದಿನಗಳ ಭೇಟಿ ನೀಡಲಿದ್ದಾರೆ. ಮಂಗಳವಾರ, ಅವರು ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ₹ 20,000 ಕೋಟಿಗೂ ಹೆಚ್ಚು ಮೌಲ್ಯದ ಹಲವಾರು ಯೋಜನೆಗಳಿಗೆ ಮೋದಿ ಚಾಲನೆ ನೀಡಿದ್ದರು. ನಂತರ ಅವರು ಲಕ್ಷದ್ವೀಪ ತಲುಪಿ ಕೇಂದ್ರಾಡಳಿತ ಪ್ರದೇಶದ ಪ್ರಗತಿಗೆ ಸಂಬಂಧಿಸಿದ ಅಂಶಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕವರತ್ತಿಯಲ್ಲಿ ಅವರು ₹1,156 ಕೋಟಿ ಮೊತ್ತದ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು.
ಇದನ್ನೂ ಓದಿ: ಅಯೋಧ್ಯೆಯ ರಾಮಮಂದಿರಕ್ಕೆ ಗುಲಾಬಿ ಬಣ್ಣ ಬಂದಿದ್ದು ಭರತ್‌ಪುರದಿಂದ; ಮಹಾಭಾರತ, ರಾಮಾಯಣಕ್ಕೂ ಇದೆ ನಂಟು
ಪ್ರಸ್ತುತ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಪ್ರಾಬಲ್ಯ ಹೊಂದಿರುವ ಕೇರಳದಲ್ಲಿ ರಾಜಕೀಯ ಪ್ರವೇಶವನ್ನು ಮಾಡಲು ಬಿಜೆಪಿ ಪ್ರಯತ್ನಿಸುತ್ತಿರುವುದರಿಂದ ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ ಚುನಾವಣಾ ಪ್ರಚಾರದ ಅಧಿಕೃತ ಪ್ರಾರಂಭ ಎಂದು ಈ ಕಾರ್ಯಕ್ರಮವನ್ನು ಬಿಂಬಿಸಲಾಗುತ್ತಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:43 pm, Wed, 3 January 24