Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದ್ಯಾರ್ಥಿಯನ್ನು ಮದುವೆಯಾದ 40 ವರ್ಷದ ಮೇಡಂ! ವೈರಲ್ ಆಯ್ತು ವಿಡಿಯೋ

ಇದು ಬಿಹಾರದ ಸಮಸ್ತಿಪುರದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಶಿಕ್ಷಕಿ ಮತ್ತು ವಿದ್ಯಾರ್ಥಿಯು ಮದುವೆಯ ವಿಧಿವಿಧಾನಗಳಲ್ಲಿ ಭಾಗವಹಿಸುತ್ತಿರುವುದನ್ನು ವೀಡಿಯೊ ತುಣುಕಿನಲ್ಲಿ ತೋರಿಸಲಾಗಿದೆ ಮತ್ತು ವೀಡಿಯೊ ಕ್ಷಿಪ್ರ ವೇಗದಲ್ಲಿ ವೈರಲ್ ಆಗಿದೆ

ವಿದ್ಯಾರ್ಥಿಯನ್ನು ಮದುವೆಯಾದ 40 ವರ್ಷದ ಮೇಡಂ! ವೈರಲ್ ಆಯ್ತು ವಿಡಿಯೋ
ವಿದ್ಯಾರ್ಥಿ ಜೊತೆ ಮದುವೆಯಾದ ಮೇಡಂ!
Follow us
ಸಾಧು ಶ್ರೀನಾಥ್​
|

Updated on:Jan 03, 2024 | 3:25 PM

40 ವರ್ಷದ ಶಿಕ್ಷಕಿಯೊಬ್ಬರು ( teacher) ಮತ್ತು 20 ವರ್ಷದ ವಿದ್ಯಾರ್ಥಿಯನ್ನು (student) ಆಶ್ಚರ್ಯಕರ ರೀತಿಯಲ್ಲಿ ದೇವಾಲಯದಲ್ಲಿ ಮದುವೆ ಮಾಡಿಕೊಂಡರು. ಅದನ್ನು ವೀಡಿಯೊ ಮೂಲಕ ಸೆರೆಹಿಡಿಯಲಾಗಿದ್ದು, ಅದೀಗ ವೈರಲ್ ಆಗಿದೆ. ಆದರೆ ಇದು ಸಾಮಾಜಿಕ ಕಟ್ಟುಪಾಡುಗಳು ಮತ್ತು ಮನುಷ್ಯರ ನಡುವಣ ಸಂಬಂಧಗಳ (relationship) ಸಂಕೀರ್ಣತೆಗಳ ಬಗ್ಗೆ ಬಿಸಿ ಚರ್ಚೆಗಳನ್ನು ಹುಟ್ಟುಹಾಕಿದೆ. ಅವರ ಸಂಬಂಧದ ಸ್ವರೂಪದ ಬಗ್ಗೆ ವೈವಿಧ್ಯಮಯ ಅಭಿಪ್ರಾಯಗಳು ಹರಡಿವೆ. ನೀವೂ ಆ ವೈರಲ್ ವಿಡಿಯೋ ನೋಡಿ!

ಈ ಘಟನೆಯನ್ನು @abntelugutv ಮೂಲಕ ‘X’ ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಕಾಣಬಹುದಾಗಿದೆ. ಇದು ಬಿಹಾರದ ಸಮಸ್ತಿಪುರ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಶಿಕ್ಷಕಿ ಮತ್ತು ವಿದ್ಯಾರ್ಥಿಯು ಮದುವೆಯ ವಿಧಿವಿಧಾನಗಳಲ್ಲಿ ಭಾಗವಹಿಸುತ್ತಿರುವುದನ್ನು ವೀಡಿಯೊ ತುಣುಕಿನಲ್ಲಿ ತೋರಿಸಲಾಗಿದೆ ಮತ್ತು ವೀಡಿಯೊ ಕ್ಷಿಪ್ರ ವೇಗದಲ್ಲಿ ವೈರಲ್ ಆಗಿದ್ದು, ನೆಟಿಜನ್‌ಗಳಿಂದ ಹಲವಾರು ಪ್ರತಿಕ್ರಿಯೆಗಳನ್ನು ಬಂದಿವೆ.

Also Read: ಸ್ಟೂಡೆಂಟ್ ಜೊತೆ ಶಿಕ್ಷಕಿ ರೊಮ್ಯಾಂಟಿಕ್‌ ಫೋಟೋ ಶೂಟ್‌, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್

 ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ 

Published On - 3:24 pm, Wed, 3 January 24