Centenary Grandmother: 100ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡ ಅಜ್ಜಮ್ಮ! ಐದು ತಲೆಮಾರು ಭಾಗಿ
Grandmother Birthday: ಹಿರಿಯಜ್ಜಿಯು ಬೆಳ್ಳಿಯ ಪಾತ್ರೆಯಲ್ಲಿ ಹಾಲು ತುಂಬಿಕೊಂಡು ಚಿನ್ನದ ಚಮಚದಿಂದ 5 ನೇ ತಲೆಮಾರಿನ ಮರಿಮೊಮ್ಮಕ್ಕಳಿಗೆ ಕುಡಿಸಿದರು. ಹುಟ್ಟುಹಬ್ಬ ಆಚರಿಸಲು ಬಂದಿದ್ದ ಮಕ್ಕಳ ಮೇಲೆ ರಾಧಾ ಬಾಯಿ ಪ್ರೀತಿ, ವಾತ್ಸಲ್ಯ ಸುರಿಸಿದರು.

ಕೆಲವು ಮಂದಿ ಯುವಕರು ಹುಟ್ಟುತ್ತಲೇ ವೃದ್ಧರಾಗಿಬಿಡುತ್ತಾರೆ ಅನ್ನುತ್ತಾನೆ ದೊಡ್ಡ ಕವಿಯೊಬ್ಬ. ಆದರೆ ಕೆಲವು ಮಂದಿ ವೃದ್ಧರು ಈ ಆಧುನಿಕ ಪೀಳಿಗೆಯವರಿಗೆ ಮಾದರಿಯಾಗಿ ಪ್ರತಿನಿಧಿಸುತ್ತಾರೆ. ಇಂದಿನ ಪೀಳಿಗೆಯವರಿಗೆ ಅತ್ಯುತ್ತಮ ಸಂದೇಶವಾಹಕರಾಗುತ್ತಾರೆ. ನೂರು ವರ್ಷ ಆಯಸ್ಸು ಪೂರ್ತಿಗೊಳಿಸಿ, ವಾಹ್ ಅಂದಿದ್ದಾರೆ. ಈ ಮಹಿಳೆ ತನ್ನ 100ನೇ ಹುಟ್ಟುಹಬ್ಬವನ್ನು ಪೂರ್ಣಗೊಳಿಸುವುದರ ಮೂಲಕ ಮಾತ್ರವಲ್ಲದೆ ತನ್ನ ಕುಟುಂಬದೊಂದಿಗೆ ಆ ಅಪರೂಪದ ಹುಟ್ಟುಹಬ್ಬವನ್ನು (Birthday) ಆಚರಿಸುವ ಮೂಲಕ (Celebration) ಎಲ್ಲರ ಹುಬ್ಬೇರಿಸಿದ್ದಾರೆ. ಈ ಶತಾಯುಷಿ ಮಹಿಳೆಯು (Centenary Grandmother) ಮರಿಮರಿ ಮೊಮ್ಮಕಳ ಜೊತೆ ಕೇಕ್ ಕತ್ತರಿಸಿ, ಡಿಜೆ ಹಾಡುಗಳೊಂದಿಗೆ ಕುಣಿದಿದ್ದಾಳೆ.
ಶತಮಾನ ಭವತಿ ಶತಾಯುಃ ಪುರುಷ ಶತೇಂದ್ರಿಯ ಆಯುಷ್ಯೇವೇನ್ದ್ರಿಯೇ ಪ್ರತಿತಿಷ್ಠಿ ತವತಿ ಎನ್ನುತ್ತಾರೆ ಪಂಡಿತರು. ಅದಕ್ಕೆ ತಕ್ಕಂತೆ ಆ ಅಜ್ಜಿ ನೂರರ ತನ್ನ ಜನ್ಮದಿನವನ್ನು ಪರಿಪೂರ್ಣ ಆರೋಗ್ಯದಿಂದ ಸಂತೋಷದಿಂದ ಆಚರಿಸಿಕೊಂಡರು. ಈ ಶತಮಾನೋತ್ಸವದ ಮಹಾ ತಾಯಿ ಹೆಸರು ರಾಧಾ ಬಾಯಿ. ಇವರು ಅದಿಲಾಬಾದ್ ಜಿಲ್ಲೆಯ ಭೀಮುಪುರ ಮಂಡಲು ಅರ್ಲಿ (ಟಿ)ಗೆ ಸೇರಿದವರು. ಐದು ತಲೆಮಾರುಗಳನ್ನು ಕಂಡಿದ್ದಾರೆ ಈ ಮಹಾತಾಯಿ. ಅವರೆಲ್ಲರ ಸಮ್ಮುಖದಲ್ಲಿ ರಾಧಾ ಬಾಯಿ ಅವರು ತಮ್ಮ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ಮಧುಮೇಹದಿಂದ ಬದುಕುಳಿದಿರುವ ರಾಧಾಬಾಯಿ ಅವರು ಎಲ್ಲರಲ್ಲಿಯೂ ಬಹಳ ಹೆಮ್ಮೆ ಮೂಡಿಸಿದ್ದಾರೆ.
Also Read: ವಿದ್ಯಾರ್ಥಿಯನ್ನು ಮದುವೆಯಾದ 40 ವರ್ಷದ ಮೇಡಂ! ವೈರಲ್ ಆಯ್ತು ವಿಡಿಯೋ
ಹಿಂದೂ ಸಂಪ್ರದಾಯದ ಪ್ರಕಾರ ಹಿರಿಯಜ್ಜಿಯು ಬೆಳ್ಳಿಯ ಪಾತ್ರೆಯಲ್ಲಿ ಹಾಲು ತುಂಬಿಕೊಂಡು ಚಿನ್ನದ ಚಮಚದಿಂದ 5 ನೇ ತಲೆಮಾರಿನ ಮರಿಮೊಮ್ಮಕ್ಕಳಿಗೆ ಕುಡಿಸಿದರು. ಹುಟ್ಟುಹಬ್ಬ ಆಚರಿಸಲು ಬಂದಿದ್ದ ಮಕ್ಕಳ ಮೇಲೆ ರಾಧಾ ಬಾಯಿ ಪ್ರೀತಿ, ವಾತ್ಸಲ್ಯ ಸುರಿಸಿದರು. ಈ ಸಮಾರಂಭದಲ್ಲಿ ನಾಲ್ಕು ಜಿಲ್ಲೆಗಳಿಂದ ರಾಧಾಬಾಯಿ ಅವರ ಕುಟುಂಬದ ಹಿರಿಯ ಬಂಧುಗಳು ಭಾಗವಹಿಸಿದ್ದರು. ಸುಮಾರು 200 ಜನರ ಸಮ್ಮುಖದಲ್ಲಿ ರಾಧಾಬಾಯಿ ಅವರ ಜನ್ಮದಿನಾಚರಣೆ ನಡೆಯಿತು.
Also Read: ಬಾಗಲಕೋಟೆ -ಅಪಘಾತದಲ್ಲಿ ವೃದ್ಧೆ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್, ಮೊಮ್ಮಗನ ಕರಾಳ ಮುಖ ಬಯಲು
ರಾಧಾಬಾಯಿ ಅವರೊಂದಿಗೆ ಎಲ್ಲ ಬಂಧುಗಳು ಕೇಕ್ ಕಟ್ ಮಾಡಿ ಸಂಭ್ರಮಿಸಿದರು. ಈ ಸಂಭ್ರಮಾಚರಣೆಯಲ್ಲಿ ರಾಧಾಬಾಯಿ ತಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ಅರ್ಲಿ (ಟಿ) ಗ್ರಾಮದಿಂದ ಬಂದಿದ್ದವರು ಸಹ ರಾಧಾಬಾಯಿಯವರ ಜನ್ಮದಿನಾಚರಣೆ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಅವರು ತಮ್ಮ ಕಷ್ಟದ ಜೀವನವನ್ನು ಮತ್ತು ಅದೇ ಕಷ್ಟ ಪಡುತ್ತಾ ಕುಟುಂಬವನ್ನು ನಿರ್ವಹಿಸಿದ ರೀತಿಯನ್ನು ಕುರಿತು ಮಾತನಾಡಿದರು. ನೂರನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಕೆಲವೇ ಕೆಲವರಲ್ಲಿ ರಾಧಾಬಾಯಿ ಕೂಡ ಒಬ್ಬರಾಗಿದ್ದಾರೆ. ಹಿರಿಯ ಜೀವ ರಾಧಾಬಾಯಿ ಅವರು ರುಚಿಕರವಾದ ತಿನಿಸುಗಳನ್ನು ತಿನ್ನುತ್ತಾರೆ. ಯಾರದೇ ನೆರವು ಪಡೆಯದೆ ತಮ್ಮ ಕೆಲಸ ಮಾಡುತ್ತಿದ್ದಾರೆ ಎಂದು ಕುಟುಂಬಸ್ಥರು ರಾಧಾಬಾಯಿ ಅವರ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 4:45 pm, Wed, 3 January 24