ಅಯೋಧ್ಯೆಯ ಬೀದಿಗಳಲ್ಲಿ ಇನ್ಮುಂದೆ ಗುಂಡಿನ ಸದ್ದು, ಕರ್ಫ್ಯೂ ಇರುವುದಿಲ್ಲ: ಯೋಗಿ ಆದಿತ್ಯನಾಥ್

|

Updated on: Jan 22, 2024 | 5:22 PM

ಅಯೋಧ್ಯೆಯ ಪರಿಕ್ರಮದಲ್ಲಿ ಇನ್ನು ಮುಂದೆ ಯಾರೂ ಅಡ್ಡಿಯಾಗುವುದಿಲ್ಲ. ಅಯೋಧ್ಯೆಯ ಗಲ್ಲಿಗಳು ಇನ್ನು ಮುಂದೆ ಗುಂಡುಗಳ ಶಬ್ದದಿಂದ ಪ್ರತಿಧ್ವನಿಸುವುದಿಲ್ಲ. ಕರ್ಫ್ಯೂ ಇರುವುದಿಲ್ಲ. ಈಗ ದೀಪೋತ್ಸವ ಮತ್ತು ರಾಮೋತ್ಸವ ನಡೆಯಲಿದೆ. ರಾಮ ಕೀರ್ತನೆಗಳು ಗಲ್ಲಿಗಳಲ್ಲಿ ಪ್ರತಿಧ್ವನಿಸುತ್ತವೆ. ಏಕೆಂದರೆ ಇಂದು ಇಲ್ಲಿ ರಾಮ್ ಲಲ್ಲಾ ಸ್ಥಾಪನೆಯು ರಾಮರಾಜ್ಯದ ಘೋಷಣೆಯನ್ನು ಸಹ ಸೂಚಿಸುತ್ತದೆ ಎಂದ ಯೋಗಿ ಆದಿತ್ಯನಾಥ್.

ಅಯೋಧ್ಯೆಯ ಬೀದಿಗಳಲ್ಲಿ ಇನ್ಮುಂದೆ ಗುಂಡಿನ ಸದ್ದು, ಕರ್ಫ್ಯೂ ಇರುವುದಿಲ್ಲ: ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್
Follow us on

ದೆಹಲಿ ಜನವರಿ 22: ಅಯೋಧ್ಯೆಯ (Ayodhya) ಬೀದಿಗಳು ಇನ್ನು ಮುಂದೆ ಗುಂಡಿನ ಸದ್ದು ಅಥವಾ ಕರ್ಫ್ಯೂಗೆ ಸಾಕ್ಷಿಯಾಗುವುದಿಲ್ಲ ಎಂದು ಉತ್ತರ ಪ್ರದೇಶದ (Uttar Pradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರು ಇಂದು ಮಧ್ಯಾಹ್ನ ರಾಮಮಂದಿರ(Ram Mandir) ಉದ್ಘಾಟನಾ ಸಮಾರಂಭದಲ್ಲಿ ಹೇಳಿದ್ದಾರೆ. ಈ ಹೇಳಿಕೆಯು ಸಮಾಜವಾದಿ ಪಕ್ಷದ ವರಿಷ್ಠ ಮತ್ತು ಮಾಜಿ ಮುಖ್ಯಮಂತ್ರಿ ದಿವಂಗತ ಮುಲಾಯಂ ಸಿಂಗ್ ಯಾದವ್ ವಿರುದ್ಧ ಮುಸುಕಿನ ಗುದ್ದಾಟವಾಗಿತ್ತು. 1990 ರಲ್ಲಿ ಅಯೋಧ್ಯೆಯಲ್ಲಿ ನಡೆದ ಪೊಲೀಸ್ ಗುಂಡಿನ ಘಟನೆಗಳಲ್ಲಿ ಕನಿಷ್ಠ 17 ಕರಸೇವಕರು ಸಾವಿಗೀಡಾದಾಗ ಮುಲಾಯಂ ಸಿಂಗ್ ಯಾದವ್ ಅವರು ಮುಖ್ಯಮಂತ್ರಿಯಾಗಿದ್ದರು.

ಅಯೋಧ್ಯೆಯ ಪರಿಕ್ರಮದಲ್ಲಿ ಇನ್ನು ಮುಂದೆ ಯಾರೂ ಅಡ್ಡಿಯಾಗುವುದಿಲ್ಲ. ಅಯೋಧ್ಯೆಯ ಗಲ್ಲಿಗಳು ಇನ್ನು ಮುಂದೆ ಗುಂಡುಗಳ ಶಬ್ದದಿಂದ ಪ್ರತಿಧ್ವನಿಸುವುದಿಲ್ಲ. ಕರ್ಫ್ಯೂ ಇರುವುದಿಲ್ಲ. ಈಗ ದೀಪೋತ್ಸವ ಮತ್ತು ರಾಮೋತ್ಸವ ನಡೆಯಲಿದೆ. ರಾಮ ಕೀರ್ತನೆಗಳು ಗಲ್ಲಿಗಳಲ್ಲಿ ಪ್ರತಿಧ್ವನಿಸುತ್ತವೆ. ಏಕೆಂದರೆ ಇಂದು ಇಲ್ಲಿ ರಾಮ್ ಲಲ್ಲಾ ಸ್ಥಾಪನೆಯು ರಾಮರಾಜ್ಯದ ಘೋಷಣೆಯನ್ನು ಸಹ ಸೂಚಿಸುತ್ತದೆ ಎಂದು ಆದಿತ್ಯನಾಥ್ ಹೇಳಿದ್ದಾರೆ.


ಆದಿತ್ಯನಾಥ್ ಅವರು ಈ ಭವ್ಯ ಸಮಾರಂಭದಲ್ಲಿ ಭಾಗವಹಿಸಿದ ಏಕೈಕ ಬಿಜೆಪಿ ಮುಖ್ಯಮಂತ್ರಿಯಾಗಿದ್ದಾರೆ. ಅವರು ಧಾರ್ಮಿಕ ವಿಧಿ ವಿಧಾನಗಳ ಸಮಯದಲ್ಲಿ ದೇವಾಲಯದ ಗರ್ಭಗುಡಿಯೊಳಗೆ ಸಹ ಉಪಸ್ಥಿತರಿದ್ದರು.

1990 ರ ಘಟನೆಗಳ ಬಗ್ಗೆ ಅವರ ಉಲ್ಲೇಖವು ಸಮಾಜವಾದಿ ಪಕ್ಷದ ಮೇಲೆ ಮುಸುಕಿನ ದಾಳಿ ಆಗಿದೆ. ಉತ್ತರ ಪ್ರದೇಶದಲ್ಲಿ ಯಾದವ್ ಅವರ ಪುತ್ರ ಮತ್ತು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್ ಸಮಾಜವಾದಿ ಪಕ್ಷ ಪ್ರಮುಖ ವಿರೋಧ ಪಕ್ಷವಾಗಿದೆ, ಇಂದು ಸಮಾರಂಭಕ್ಕೆ ಆಹ್ವಾನಿತರಾದ ಅಖಿಲೇಶ್ ಯಾದವ್ ನಂತರ ದೇವಸ್ಥಾನಕ್ಕೆ ಭೇಟಿ ನೀಡುವುದಾಗಿ ಹೇಳಿದ್ದಾರೆ. ಅಖಿಲೇಶ್ ಯಾದವ್ ಸೇರಿದಂತೆ ಪ್ರತಿಪಕ್ಷ ನಾಯಕರು ಇಂದಿನ ಕಾರ್ಯಕ್ರಮದಿಂದ ದೂರ ಉಳಿದಿರುವ ಹಿನ್ನೆಲೆಯಲ್ಲಿ ಆದಿತ್ಯನಾಥ್ ಅವರ ಟೀಕೆಗಳು ಕೂಡ ಬಂದಿವೆ.

1990 ರಲ್ಲಿ ಏನಾಯಿತು?

ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ನೇತೃತ್ವದ ರಥಯಾತ್ರೆಯ ಹಿನ್ನೆಲೆಯಲ್ಲಿ ರಾಮಜನ್ಮಭೂಮಿ ಆಂದೋಲನವು ವೇಗ ಪಡೆದುಕೊಂಡಿತ್ತು. ಅಯೋಧ್ಯೆಯಲ್ಲಿ ಪರಿಸ್ಥಿತಿ ಬಿಸಿಯಾಗಿತ್ತು. ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ಜನರನ್ನು ಸಜ್ಜುಗೊಳಿಸಲು ಪ್ರಾರಂಭಿಸುತ್ತಿದ್ದಂತೆ, ಮುಲಾಯಂ ಸಿಂಗ್ ಯಾದವ್ ಹೆಚ್ಚಿನ ಸಂಖ್ಯೆಯಲ್ಲಿ ಸೇನೆಯನ್ನು ನಿಯೋಜಿಸಿದ್ದರು.. “ಯಾವುದೇ ಪಕ್ಷಿಯು ಅಯೋಧ್ಯೆಗೆ ಹಾರಲು ಸಾಧ್ಯವಿಲ್ಲ ಎಂದಿದ್ದರು ಅವರು. ಅಕ್ಟೋಬರ್ 30 ರಂದು, ರಾಜ್ಯ ಪೊಲೀಸರು ಬಸ್ ಮತ್ತು ರೈಲು ಸೇವೆಗಳನ್ನು ನಿರ್ಬಂಧಿಸಿದ ನಂತರ ಹೆಚ್ಚಿನ ಸಂಖ್ಯೆಯ ಭಕ್ತರು ಅಯೋಧ್ಯೆಗೆ ನಡೆದರು. ಈಗ ಧ್ವಂಸಗೊಂಡಿರುವ ಬಾಬರಿ ಮಸೀದಿಗೆ ಹೋಗುವ ರಸ್ತೆಯಲ್ಲಿ ಪ್ರತಿಭಟನಾಕಾರರು ಪೊಲೀಸರೊಂದಿಗೆ ಘರ್ಷಣೆ ನಡೆಸಿದರು.

ಒಂದು ಹಂತದಲ್ಲಿ ಒಬ್ಬ ಸಾಧು ಭದ್ರತಾ ಬಸ್ ಅನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಬ್ಯಾರಿಕೇಡ್‌ಗಳ ಮೂಲಕ ಓಡಿಸಿದರು. ಪೊಲೀಸರು ಪ್ರತಿಭಟನಕಾರರನ್ನು ಬೆನ್ನಟ್ಟಿ ಬಲವಂತವಾಗಿ ಹತ್ತಿಕ್ಕುವ ಮೂಲಕ ಪ್ರತಿಕ್ರಿಯಿಸಿದರು. ನವೆಂಬರ್ 1 ರಂದು ಇದೇ ರೀತಿಯ ಘರ್ಷಣೆಗಳು ನಡೆದವು ಮತ್ತು ಒಟ್ಟು 17 ಜನರು ಪೋಲೀಸರ ಗುಂಡಿನ ದಾಳಿಯಲ್ಲಿ ಸಾವಿಗೀಡಾದರು.

ಇದನ್ನೂ ಓದಿ: First Look of Ram Lalla: ಅಯೋಧ್ಯೆ ರಾಮಮಂದಿರದಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿದ ರಾಮಲಲ್ಲಾ ಪ್ರಾಣ ಪ್ರತಿಷ್ಠೆ

ಆಮೇಲೆನಾಯ್ತು?

ಪೋಲೀಸರ ಗುಂಡಿನ ದಾಳಿ ನಡೆಸಿದ್ದಕ್ಕೆ ಮುಲಾಯಂ ಸಿಂಗ್ ಯಾದವ್ ಸರ್ಕಾರವು ಟೀಕೆಗೆ ಗುರಿಯಾಯಿತು. ಪ್ರತಿಕ್ರಿಯೆಯಾಗಿ ಸರ್ಕಾರ,ಇದು ನೋವಿನ ಸಂಗತಿ ಆದರೂ ಅದು ಅಗತ್ಯ ನಿರ್ಧಾರ ಎಂದು ಹೇಳಿದ್ದು, ವಿವಾದಿತ ಸ್ಥಳದಲ್ಲಿ ಶಾಂತಿಯನ್ನು ಕಾಪಾಡಲು ಹೈಕೋರ್ಟ್ ತೀರ್ಪನ್ನು ಉಲ್ಲೇಖಿಸಿತ್ತು.

ಮುಂದಿನ ವರ್ಷ,ಯಾದವ್ ಅಸೆಂಬ್ಲಿ ಚುನಾವಣೆಯಲ್ಲಿ ಪರಾಭವಗೊಂಡರು. ಅಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತು. ಕಲ್ಯಾಣ್ ಸಿಂಗ್ ಅವರನ್ನು ಮುಖ್ಯಮಂತ್ರಿಯಾಗಿ ಹೆಸರಿಸಲಾಯಿತು. ಅವರ ಅಧಿಕಾರಾವಧಿಯಲ್ಲಿ ಡಿಸೆಂಬರ್ 6, 1992 ರಂದು ಬಾಬರಿ ಮಸೀದಿಯನ್ನು ಕೆಡವಲಾಯಿತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ