Kannada News Photo gallery First look of 51-inch Lord Ram Lalla in Ayodhya Ram Temple after pran partishtha rak
First Look of Ram Lalla: ಅಯೋಧ್ಯೆ ರಾಮಮಂದಿರದಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿದ ರಾಮಲಲ್ಲಾ ಪ್ರಾಣ ಪ್ರತಿಷ್ಠೆ
ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ಭಗವಾನ್ ರಾಮ ಲಲ್ಲಾನ ಪ್ರಾಣ ಪ್ರತಿಷ್ಠೆಯನ್ನು ನೆರವೇರಿಸಿದ್ದಾರೆ. ಈ ವಿಗ್ರಹವನ್ನು ಕರ್ನಾಟಕದ ಅರುಣ್ ಯೋಗಿರಾಜ್ ಅವರು ಐದು ವರ್ಷದ ಮಗುವಿನಂತೆ ಚಿತ್ರಿಸಿದ್ದಾರೆ. ಬಂಗಾರ ಮತ್ತು ಹೂಗಳಿಂದ ಅಲಂಕೃತವಾಗಿರುವ ರಾಮಲಲ್ಲಾ ಮೂರ್ತಿ ಹೀಗಿದೆ.
ಪ್ರಧಾನಿ ಮೋದಿ ಸೋಮವಾರ ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ಭಗವಾನ್ ರಾಮ ಲಲ್ಲಾನ ಪ್ರಾಣ ಪ್ರತಿಷ್ಠೆಯನ್ನು ನೆರವೇರಿಸಿದ ನಂತರ ವಿಗ್ರಹದ ಮೊದಲ ನೋಟ ಇಲ್ಲಿದೆ
1 / 8
ಚಿನ್ನ ಮತ್ತು ಹೂವುಗಳಿಂದ ಅಲಂಕರಿಸಲ್ಪಟ್ಟ 51 ಇಂಚಿನ ರಾಮಲಲ್ಲಾ ವಿಗ್ರಹವನ್ನು ಇಂದು ಅಯೋಧ್ಯೆ ದೇವಸ್ಥಾನದಲ್ಲಿ ಭವ್ಯವಾದ 'ಪ್ರಾಣ ಪ್ರತಿಷ್ಠಾ' ಸಮಾರಂಭಕ್ಕೆ ಸ್ವಲ್ಪ ಮೊದಲು ಬಹಿರಂಗಪಡಿಸಲಾಯಿತು.
2 / 8
ತಲೆಯಿಂದ ಪಾದದವರೆಗೆ ರಾಮಲಲ್ಲಾನನ್ನು ಆಭರಣಗಳಿಂದ ಶೃಂಗರಿಸಲಾಗಿದೆ. ರಾಮಲಲ್ಲಾ ಕೈಯಲ್ಲಿ ಚಿನ್ನದ ಬಿಲ್ಲು ಮತ್ತು ಬಾಣವಿದೆ. ಹಣೆಗೆ ಬೆಳ್ಳಿ ಮತ್ತು ಕೆಂಪು ತಿಲಕದಿಂದ ಅಲಂಕರಿಸಲಾಗಿದೆ.
3 / 8
ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ನೇತೃತ್ವ ವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ದೇವಾಲಯದ ಗರ್ಭಗುಡಿಯಲ್ಲಿ ಹಲವಾರು ಸಂತರ ಉಪಸ್ಥಿತಿಯಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.
4 / 8
ಮೈಸೂರು ಮೂಲದ ಕಲಾವಿದ ಅರುಣ್ ಯೋಗಿರಾಜ್ ಅವರು ಕಪ್ಪು ಕಲ್ಲಿನಿಂದ ಕೆತ್ತಿದ 51 ಇಂಚಿನ ವಿಗ್ರಹವಾಗಿದೆ ಈ ರಾಮಲಲ್ಲಾ
5 / 8
ಹೊಸ ದೇವಾಲಯದ ನೆಲ ಮಹಡಿಯಲ್ಲಿರುವ ರಾಮ್ ಲಲ್ಲಾ ವಿಗ್ರಹವು ಐದು ವರ್ಷದ ರಾಮನನ್ನು ಪ್ರತಿನಿಧಿಸುತ್ತದೆ. ಇನ್ನೂ ನಿರ್ಮಾಣವಾಗಬೇಕಿರುವ ದೇವಾಲಯದ ಮೊದಲ ಮಹಡಿಯಲ್ಲಿ ಸೀತೆ, ಲಕ್ಷ್ಮಣ ಮತ್ತು ಹನುಮಾನ್ ಸಹಿತ ರಾಮನ ವಿಗ್ರಹವಿದೆ.
6 / 8
ಅಯೋಧ್ಯಾ ಧಾಮದಲ್ಲಿ ಶ್ರೀ ರಾಮ್ ಲಲ್ಲಾ ಪ್ರಾಣಪ್ರತಿಷ್ಠೆ ಅಸಾಧಾರಣ ಕ್ಷಣವು ಎಲ್ಲರನ್ನು ಭಾವುಕರನ್ನಾಗಿಸಲಿದೆ. ಇದು ನನಗೆ ತುಂಬಾ ಸಂತೋಷವಾಗಿದೆ. ಈ ದೈವಿಕ ಕಾರ್ಯಕ್ರಮದ ಭಾಗವಾಗಿರಿ. ಜಯವಾಗಲಿ ಸಿಯಾ ರಾಮ್ ಎಂದು ಮೋದಿ ಟ್ವೀಟ್ ಮಾಡಿದ್ದಾರೆ
7 / 8
ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮವಾದ ಕೂಡಲೇ ಸೇನೆಯ ಹೆಲಿಕಾಪ್ಟರ್‌ಗಳು ಪುಷ್ಪವೃಷ್ಟಿ ನಡೆಸಿವೆ