ಬಗೆ ಬಗೆಯ ಹೂವುಗಳಲ್ಲಿ ವಿಶ್ವವಿಖ್ಯಾತ ಗೋಲಗುಮ್ಮಟದ ಪ್ರತಿಕೃತಿ ಹಾಗೂ ಲಿಂಬೆ ಹಣ್ಣಿನಲ್ಲಿ ಅರಳಿದ ಶಿವಲಿಂಗ ಪ್ರಮುಖ ಆಕರ್ಷಣೆಯಾಗಿದ್ದವು. ಕಲ್ಲಂಗಡಿಗಳಲ್ಲಿನ ಕಲೆಗಳು, ಔಷಧಿಯುಕ್ತ ಹಣ್ಣುಗಳು, ತರಕಾರಿಗಳು ಪ್ರದರ್ಶನಲ್ಲಿ ಕಂಡು ಬಂದವು. ಸರದಿ ಸಾಲಿನಲ್ಲಿ ಬಂದ ಜನರು ಫಲಪುಷ್ಪ ಪ್ರದರ್ಶನ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.