ದೆಹಲಿಯ ಇಸ್ರೇಲ್​​​ ರಾಯಭಾರ ಕಚೇರಿ ಮುಂದೆ ಪ್ಯಾಲೆಸ್ತೀನ್ ಪರ ಪ್ರತಿಭಟನೆ ಮಾಡಿದ ವಿದ್ಯಾರ್ಥಿಗಳು

|

Updated on: Oct 23, 2023 | 5:13 PM

ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಸದಸ್ಯರು ಸೋಮವಾರ ದೆಹಲಿಯ ಇಸ್ರೇಲಿ ರಾಯಭಾರ ಕಚೇರಿ ಬಳಿ ಪ್ಯಾಲೆಸ್ತೀನ್ ಪರ ಪ್ರತಿಭಟನೆ ನಡೆಸಿದ್ದಾರೆ. ಈ ಪ್ರತಿಭಟನಾಕಾರರನ್ನು ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ದೆಹಲಿಯ ಇಸ್ರೇಲ್​​​ ರಾಯಭಾರ ಕಚೇರಿ ಮುಂದೆ ಪ್ಯಾಲೆಸ್ತೀನ್ ಪರ ಪ್ರತಿಭಟನೆ ಮಾಡಿದ ವಿದ್ಯಾರ್ಥಿಗಳು
ದೆಹಲಿಯ ಇಸ್ರೇಲಿ ರಾಯಭಾರ ಕಚೇರಿ ಬಳಿ ಪ್ಯಾಲೆಸ್ತೀನ್ ಪರ ಪ್ರತಿಭಟನೆ
Follow us on

ಒಂದು ಕಡೆ ಇಸ್ರೇಲ್ (Israel)​​ ಮತ್ತು ಹಮಾಸ್ (Hamas)​​ ಉಗ್ರರ ನಡುವೆ ನಡೆಯುತ್ತಿರುವ ಘರ್ಷಣೆ. ಇನ್ನೊಂದು ಕಡೆ ಪ್ಯಾಲೆಸ್ತೀನ್ ಪರ ಪ್ರತಿಭಟನೆ. ಹಮಾಸ್​​​ ಉಗ್ರರ ಪೈಶಾಚಿಕ ಕೃತ್ಯದ ಬಗ್ಗೆ ಯಾರು ಮಾತನಾಡುತ್ತಿಲ್ಲ, ಇಲ್ಲಿ ಇಸ್ರೇಲ್​​ ಮತ್ತು ಹಮಾಸ್​​ ನಡುವೆ ನಡೆಯುತ್ತಿರುವ ಸಂಘರ್ಷಣೆಯೇ ಹೊರತು ಇಸ್ರೇಲ್ ಮತ್ತು ​​ ಪ್ಯಾಲೆಸ್ತೀನ್​​ದಲ್ಲ ಎಂದು ಇಸ್ರೇಲ್​​ ಸೇರಿದಂತೆ ಅನೇಕ ದೇಶಗಳು ಸ್ಪಷ್ಟಪಡಿಸಿದೆ. ಇನ್ನು ಇಸ್ರೇಲ್​​ ಮೇಲೆ ಪ್ಯಾಲೆಸ್ತೀನ್ ಪರೋಕ್ಷವಾಗಿ ಹಮಾಸ್​​ಗೆ ಬೆಂಬಲ ನೀಡಿದೆ ಮತ್ತು ನೇರವಾಗಿ ದಾಳಿ ಮಾಡಿದ್ದು, ಇದಕ್ಕೆ ಇಸ್ರೇಲ್​​ ಕೂಡ ಉತ್ತರ ನೀಡಿದೆ. ಅದರೂ ಅನೇಕರು ಇಸ್ರೇಲ್​​ ವಿರುದ್ಧ ಮತ್ತು ಪ್ಯಾಲೆಸ್ತೀನ್ ಪರ ಪ್ರತಿಭಟನೆ (pro-Palestine) ಮಾಡುತ್ತಿದ್ದಾರೆ. ಇದೀಗ ಭಾರತದ ಅನೇಕ ಕಡೆ ಇಂತಹ ಪ್ರತಿಭಟನೆಗಳು ನಡೆಯುತ್ತಿದೆ. ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಸದಸ್ಯರು ಇಂದು (ಅ.23) ದೆಹಲಿಯ ಇಸ್ರೇಲಿ ರಾಯಭಾರ ಕಚೇರಿ (Israel embassy Delhi protest) ಬಳಿ ಪ್ಯಾಲೆಸ್ತೀನ್ ಪರ ಪ್ರತಿಭಟನೆ ನಡೆಸಿದ್ದಾರೆ. ಈ ಪ್ರತಿಭಟನಾಕಾರರನ್ನು ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಈ ಬಗ್ಗೆ ಒಂದು ವಿಡಿಯೋವನ್ನು ಎಎನ್ಐ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಪ್ರತಿಭಟನಾನಿರತರನ್ನು ಪೊಲೀಸರು ಎಳೆದುಕೊಂಡು ಹೋಗುವುದನ್ನು ಕಾಣಬಹುದು. ಪ್ರತಿಭಟನಾಕಾರರು ಪೋಸ್ಟರ್​​ನ್ನು ಹಿಡಿದುಕೊಂಡು ಇಸ್ರೇಲ್​​ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಇಸ್ರೇಲ್​​ ಮತ್ತು ಹಮಾಸ್​​​ ಉಗ್ರರ ನಡುವಿನ ಯುದ್ಧ 16ನೇ ದಿನಕ್ಕೆ ಕಾಲಿಟ್ಟಿದೆ. ಈ ಹಿಂದೆ ಪ್ಯಾಲೆಸ್ತೀನ್ ಪರ ಪ್ರತಿಭಟನೆ ಬಿಹಾರ ಹಾಗೂ ಕೋಲ್ಕತ್ತಾದಲ್ಲಿ ನಡೆದಿತ್ತು.

ಅಕ್ಟೋಬರ್​​​ 13ರಂದು ಬಿಹಾರದಲ್ಲಿ ಪ್ಯಾಲೆಸ್ತೀನ್ ಪರ ಮೆರವಣಿಗೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಪ್ಯಾಲೆಸ್ತೀನ್ ಪರ ಘೋಷಣೆ ಮಾಡಿದ್ದಾರೆ. ಜತೆಗೆ ಇಸ್ರೇಲ್​​​ ಧ್ವಜಕ್ಕೆ ಬೆಂಕಿ ಹಚ್ಚಿದ್ದಾರೆ. ಅಕ್ಟೋಬರ್​ 12ರಂದು ಕೋಲ್ಕತ್ತಾದಲ್ಲಿ ಪ್ಯಾಲೆಸ್ತೀನ್ ಪರ ಅಲ್ಪಸಂಖ್ಯಾತ ಯುವ ಒಕ್ಕೂಟವು ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಕಮ್ರುಜ್ಜಮಾನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ: ಗಾಜಾದ ವೆಸ್ಟ್​ ಬ್ಯಾಂಕ್​ನ ಅಲ್​-ಅನ್ಸಾರ್​ ಮಸೀದಿ ಮೇಲೆ ಇಸ್ರೇಲ್ ವೈಮಾನಿಕ ದಾಳಿ

ಹಮಾಸ್​​ ಅಕ್ಟೋಬರ್​​ 7ರಂದು ಬೆಳಿಗ್ಗೆ ಇಸ್ರೇಲ್​​ ಮೇಲೆ ರಾಕೆಟ್​​​ ದಾಳಿ ಮಾಡಿತ್ತು. ಇದಕ್ಕೆ ಉತ್ತರವಾಗಿ ಇಸ್ರೇಲ್​​​ ಗಾಜಾ ಪಟ್ಟಿ ಸೇರಿಸಿದಂತೆ ಹಮಾಸ್​​​ ತಾಣಗಳ ಮೇಲೆ ದಾಳಿ ಮಾಡಿದೆ. ಇದರ ಜತೆಗೆ ವೈಮಾನಿಕ ದಾಳಿಯನ್ನು ಕೂಡ ಮಾಡಿದೆ. ಹಮಾಸ್​​ ದಾಳಿಯಿಂದ 1,400 ಇಸ್ರೇಲಿಗರು ಹಾಗೂ ಇಸ್ರೇಲ್​​ ನಡೆಸಿದ ದಾಳಿಯಲ್ಲಿ 4,700 ಪ್ಯಾಲೆಸ್ಟೀನಿಯರು ಸಾವನ್ನಪ್ಪಿದ್ದಾರೆ.

ಪ್ಯಾಲೇಸ್ಟಿನಿಯನ್ ಆರೋಗ್ಯ ಸಚಿವಾಲಯದ ಪ್ರಕಾರ, ಗಾಜಾದಲ್ಲಿ ಸಾವಿನ ಸಂಖ್ಯೆ 4,741 ಏರಿಕೆಯಾಗಿದೆ. ಇಸ್ರೇಲ್​​ ಮುತ್ತಿಗೆ ಹಾಕಿದ ಪ್ರದೇಶದಲ್ಲಿ 16 ಸಾವಿರ ಜನ ಗಾಯಗೊಂಡಿದ್ದಾರೆ. ಇದರ ಜತೆಗೆ ಒತ್ತೆಯಾಳುಗಳನ್ನು ಹಮಾಸ್​​ ಕೆಲವರನ್ನು ಬಿಡುಗಡೆ ಮಾಡಿದೆ. ಇನ್ನು ಭಾರತ ತನ್ನ ಜನರನ್ನು ತವರಿಗೆ ಆಪರೇಷನ್​​ ಅಜಯ್​​ ಮೂಲಕ ಕರೆಸಿಕೊಳ್ಳುತ್ತಿದೆ. ಮಾನವೀಯ ದೃಷಿಯಿಂದ ಭಾರತ ಪ್ಯಾಲೇಸ್ಟಿನಿಯನ್​​ಗೆ ಆಹಾರ, ವೈದ್ಯಕೀಯ ನೇರವುಗಳನ್ನು ನೀಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:08 pm, Mon, 23 October 23