ವೀರ ಸುರೇಂದ್ರ ಸಾಯಿ ಜನ್ಮಸ್ಥಳಕ್ಕೆ ಭೇಟಿ ನೀಡಿದ ಧರ್ಮೇಂದ್ರ ಪ್ರಧಾನ್; ‘ಮೇರಿ ಮಾಟಿ ಮೇರಾ ದೇಶ್’ ಕಾರ್ಯಕ್ರಮದಲ್ಲಿ ಭಾಗಿ

Dharmendra Pradhan: ಇಂದು ಭಾಯ್-ಜಿವುಂಟಿಯಾ ಹಬ್ಬದ ಸಂದರ್ಭದಲ್ಲಿ ತಾಯಿ ಮತ್ತು ಸಹೋದರಿಯರಿಂದ ಪಡೆದ ಪ್ರೀತಿ, ವಾತ್ಸಲ್ಯ ಮತ್ತು ಆಶೀರ್ವಾದವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಬೇಕು. ಈ ವರದಾನವನ್ನು ದೇಶದ ಮಾತೃಭೂಮಿಗೆ ಸಮರ್ಪಿಸಲಾಗಿದೆ. ದೇಶದಲ್ಲಿ ಮಹಿಳಾ ಆಧಾರಿತ ಅಭಿವೃದ್ಧಿಯಲ್ಲಿ ಹೊಸ ಯುಗ ಆರಂಭವಾಗಿದೆ ಎಂದು ಪ್ರಧಾನ್ ಹೇಳಿದ್ದಾರೆ. ದೇಶದ ಮಾತೃಶಕ್ತಿಯನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ಯಲು ಪ್ರಧಾನಿ ಮೋದಿ ಸಂಕಲ್ಪ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ವೀರ ಸುರೇಂದ್ರ ಸಾಯಿ ಜನ್ಮಸ್ಥಳಕ್ಕೆ ಭೇಟಿ ನೀಡಿದ ಧರ್ಮೇಂದ್ರ ಪ್ರಧಾನ್; ‘ಮೇರಿ ಮಾಟಿ ಮೇರಾ ದೇಶ್' ಕಾರ್ಯಕ್ರಮದಲ್ಲಿ ಭಾಗಿ
ಧರ್ಮೇಂದ್ರ ಪ್ರಧಾನ್
Follow us
ರಶ್ಮಿ ಕಲ್ಲಕಟ್ಟ
|

Updated on: Oct 23, 2023 | 6:50 PM

ಸಂಬಲ್‌ಪುರ, ಅಕ್ಟೋಬರ್ 23: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರು ಸೋಮವಾರ ಒಡಿಶಾದ (Odisha) ಸಂಬಲ್‌ಪುರದಲ್ಲಿರುವ (sambalpur) ಸಮಲೇಶ್ವರಿ ದೇವಸ್ಥಾನದಲ್ಲಿ ಮಹಾ ನವಮಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಿದರು. ಸ್ಥಳೀಯ ಬಿಜೆಪಿ ಮುಖಂಡರೊಂದಿಗೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ದಸರಾ ಮಹೋತ್ಸವದ ಮಹಾ ನವಮಿ ಆಚರಣೆಯಲ್ಲಿ ಪಾಲ್ಗೊಂಡಿದ್ದು, ದೇಶದ ಶಾಂತಿ, ಪ್ರಗತಿ ಮತ್ತು ಸಮೃದ್ಧಿಗಾಗಿ ದೇವಿಯನ್ನು ಪ್ರಾರ್ಥಿಸಿದರು.

ಇದಾದ ಬಳಿಕ ಜಿಲ್ಲೆಯಲ್ಲಿ ‘ಮೇರಿ ಮಾಟಿ ಮೇರಾ ದೇಶ್’ ಕಾರ್ಯಕ್ರಮದಲ್ಲಿ ಸಚಿವರು ಭಾಗವಹಿಸಿದರು. ಈ ವೇಳೆ ಅವರು ಸ್ವಾತಂತ್ರ್ಯ ಹೋರಾಟಗಾರ ವೀರ ಸುರೇಂದ್ರ ಸಾಯಿ ಅವರ ಜನ್ಮಸ್ಥಳಕ್ಕೆ ಭೇಟಿ ನೀಡಿ ಒಡಿಶಾದ ಸಂಬಲ್‌ಪುರ ಜಿಲ್ಲೆಯ ಖಿಂದಾ ಗ್ರಾಮದಲ್ಲಿ ಮನೆಗಳಿಂದ ಪವಿತ್ರ ಮಣ್ಣನ್ನು ಸಂಗ್ರಹಿಸಿದರು.

ಸೋಮವಾರ, ಪ್ರಧಾನ್ ಒಡಿಶಾದ ಅಂಗುಲ್ ಜಿಲ್ಲೆಯ ಹಲವಾರು ದುರ್ಗಾಪೂಜಾ ಪೆಂಡಾಲ್‌ಗಳಿಗೆ ಭೇಟಿ ನೀಡಿದ ಅಲ್ಲಿನ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಭ್ರಾತೃತ್ವ ತುಂಬಿದ ನಗರದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಇಲ್ಲಿ ಅನೇಕ ಪೆಂಡಾಲ್ ಸ್ಥಾಪನೆಯಾಗಿವೆ. ಇಲ್ಲಿಗೆ ಬಂದು ಅಮ್ಮನ ದರ್ಶನ ಪಡೆದದ್ದು ಭಾಗ್ಯ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವರು, “ಭಾಯ್-ಜಿವುಂಟಿಯಾ” ಇಂದು ಒಡಿಶಾಗೆ ವಿಶೇಷ ಹಬ್ಬವಾಗಿದೆ. ಇಂದು ಸಂಬಲ್ಪುರದಲ್ಲಿ ನನ್ನ ಸಹೋದರಿಯರೊಂದಿಗೆ ಈ ಉತ್ಸವದಲ್ಲಿ ಭಾಗವಹಿಸಲು ನನಗೆ ತುಂಬಾ ಸಂತೋಷವಾಗಿದೆ. ಜಗತ್ ಜನನನಿ ಮಾ ದುರ್ಗಾ ಮಹಾಷ್ಟಮಿ ಪೂಜೆಯ ನಂತರ, ಸಹೋದರಿಯರು ಉಪವಾಸವನ್ನು ಆಚರಿಸುತ್ತಾರೆ. “ಭಾಯ್-ಜಿವುಂಟಿಯಾ” ತಮ್ಮ ಸಹೋದರರಿಗೆ ದೀರ್ಘಾಯುಷ್ಯವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಇದೊಂದು ಅಭೂತಪೂರ್ವ ಭಾತೃತ್ವದ ಸಂಪ್ರದಾಯವಾಗಿದೆ ಎಂದರು.

ಇಂದು ಭಾಯ್-ಜಿವುಂಟಿಯಾ ಹಬ್ಬದ ಸಂದರ್ಭದಲ್ಲಿ ತಾಯಿ ಮತ್ತು ಸಹೋದರಿಯರಿಂದ ಪಡೆದ ಪ್ರೀತಿ, ವಾತ್ಸಲ್ಯ ಮತ್ತು ಆಶೀರ್ವಾದವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಬೇಕು. ಈ ವರದಾನವನ್ನು ದೇಶದ ಮಾತೃಭೂಮಿಗೆ ಸಮರ್ಪಿಸಲಾಗಿದೆ. ದೇಶದಲ್ಲಿ ಮಹಿಳಾ ಆಧಾರಿತ ಅಭಿವೃದ್ಧಿಯಲ್ಲಿ ಹೊಸ ಯುಗ ಆರಂಭವಾಗಿದೆ ಎಂದು ಪ್ರಧಾನ್ ಹೇಳಿದ್ದಾರೆ. ದೇಶದ ಮಾತೃಶಕ್ತಿಯನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ಯಲು ಪ್ರಧಾನಿ ಮೋದಿ ಸಂಕಲ್ಪ ಮಾಡಿದ್ದಾರೆ. ಮಹಿಳಾ ಸಬಲೀಕರಣ ಕಾಯ್ದೆ ಎಂಬ ಮಹಿಳಾ ರಕ್ಷಣಾ ಮಸೂದೆಗೆ ಸಂಸತ್ತಿನ ಉಭಯ ಸದನಗಳು ಅಂಗೀಕಾರ ನೀಡಿದ್ದು, ರಾಷ್ಟ್ರಪತಿಗಳ ಒಪ್ಪಿಗೆ ಪಡೆದು ಕಾನೂನಾಗಿ ಮಾರ್ಪಟ್ಟಿದೆ ಎಂದರು.

ಎಲ್ಲಾ ಎಲ್​​ಪಿಜಿ ಗ್ರಾಹಕರು ಅಡುಗೆ ಅನಿಲದ ಬೆಲೆಯನ್ನು ಕಡಿಮೆ ಮಾಡಲಾಗಿದೆ ಎಂದು ನೆನಪಿಸಿಕೊಳ್ಳುತ್ತಾರೆ. 2 ಕೋಟಿ ಮಹಿಳೆಯರನ್ನು ಲಕ್ಷಾಧಿಪತಿಗಳನ್ನಾಗಿಸುವ ಯೋಜನೆಗೆ ಮೋದಿ ಸರ್ಕಾರ ಚಾಲನೆ ನೀಡಿದೆ ಎಂದರು. ಈ ಎಲ್ಲಾ ಮಹಿಳಾ ಕಲ್ಯಾಣ ಯೋಜನೆಗಳು ಮೋದಿ ಸರ್ಕಾರದ ಮೈಲುಗಲ್ಲುಗಳಾಗಿವೆ. ಮುಂದಿನ ದಿನಗಳಲ್ಲಿ ಮಹಿಳಾ ಸಬಲೀಕರಣ ಮತ್ತು ಮಹಿಳಾ ನಾಯಕತ್ವದಲ್ಲಿ ಹೊಸ ಹೆಜ್ಜೆ ಇಡಲಿದ್ದೇವೆ ಎಂದು ಕೇಂದ್ರ ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ರಾಜಕೀಯ ಪ್ರಚಾರಕ್ಕೆ ಸರ್ಕಾರಿ ಅಧಿಕಾರಿಗಳು; ಏನಿದು ರಥ ಪ್ರಭಾರಿ ವಿವಾದ ?

ಕೇಂದ್ರ ಸಚಿವರು ವೀರ ಸುರೇಂದ್ರ ಸಾಯಿ ಮಹಾರಾಜರನ್ನು ಸ್ಮರಿಸಿದ್ದಾರೆ. ಸುರೇಂದ್ರ ಸಾಯಿ  1809ರ ಜನವರಿ 23ರಂದು ಸಂಬಲ್‌ಪುರದಿಂದ ಉತ್ತರಕ್ಕೆ 30 ಕಿ.ಮೀ ದೂರದಲ್ಲಿರುವ ಖಿಂದ ಗ್ರಾಮದಲ್ಲಿ ಧರಂ ಸಿಂಗ್ ಮತ್ತು ರೆಬಾತಿ ದೇವಿಯ ಹಿರಿಯ ಮಗನಾಗಿ ಜನಿಸಿದರು. ಅವರು ಸಂಬಲ್ಪುರದ ಚೌಹಾನ್ ರಾಜವಂಶದ ನಾಲ್ಕನೇ ವಂಶಸ್ಥರಾದ ರಾಜಾ ಮಧುಕರ್ ಸಾಯಿಯವರ ನೇರ ವಂಶಸ್ಥರಾಗಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ