ಬಸ್ ನಿಲ್ಲಿಸದಿದ್ದರೆ ಹೀಗೂ ಪ್ರತಿಭಟನೆ ಮಾಡಬಹುದು, ನಮ್ಮ ಆಸ್ತಿಯನ್ನು ಹಾಳು ಮಾಡುವುದಿಲ್ಲ: ವಿದ್ಯಾರ್ಥಿಗಳು
ಕೇರಳದ ಮಾವೂರ್‌ನಲ್ಲಿರುವ ಮಹ್ಲಾರ ಕಲಾ ಮತ್ತು ವಿಜ್ಞಾನ ಕಾಲೇಜಿನ ಮಹಿಳಾ ಕಾಲೇಜು ವಿದ್ಯಾರ್ಥಿಗಳು ತಮ್ಮ ನಿಲ್ದಾಣದಲ್ಲಿ ನಿಲ್ಲದ ಬಸ್‌ಗಳನ್ನು ವಿರೋಧಿಸಿ ಕೇರಳದ ಕೋಯಿಕ್ಕೋಡ್ನಲ್ಲಿ ಚಾಲಕರು ಮತ್ತು ಇತರ ಸಿಬ್ಬಂದಿಗೆ ಸಿಹಿ ಹಂಚಿದರು.
ಕೋಯಿಕ್ಕೋಡ್: ಕೇರಳದ ( kerala) ಮಾವೂರ್‌ನಲ್ಲಿರುವ ಮಹ್ಲಾರ ಕಲಾ ಮತ್ತು ವಿಜ್ಞಾನ ಕಾಲೇಜಿನ ಮಹಿಳಾ ಕಾಲೇಜು ವಿದ್ಯಾರ್ಥಿಗಳು ತಮ್ಮ ನಿಲ್ದಾಣದಲ್ಲಿ ನಿಲ್ಲದ ಬಸ್‌ಗಳನ್ನು ವಿರೋಧಿಸಿ ಕೇರಳದ ಕೋಯಿಕ್ಕೋಡ್ನಲ್ಲಿ (Kozhikode) ಚಾಲಕರು ಮತ್ತು ಇತರ ಸಿಬ್ಬಂದಿಗೆ ಸಿಹಿ ಹಂಚಿದರು. ತಮ್ಮ ಬಸ್ ನಿಲ್ದಾಣಗಳಲ್ಲಿ ಬಸ್‌ಗಳು ನಿಲ್ಲದ ಕಾರಣ ವಿದ್ಯಾರ್ಥಿಗಳು ಕಾಲೇಜಿಗೆ ತಡವಾಗಿ ಬರುತ್ತಿದ್ದರು. ಬಸ್ ನಿಲ್ದಾಣಗಳಲ್ಲಿ ಹೋಮ್ ಗಾರ್ಡ್ಸ್ಗಳನ್ನು ನಿಯೋಜಿಸಲಾಗಿತ್ತು ನಿಲ್ದಾಣದಲ್ಲಿ ಬಸ್‌ಗಳು ನಿಲ್ಲದ ಕಾರಣ ವಿದ್ಯಾರ್ಥಿಗಳು ಹಲವಾರು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಪ್ರಾಂಶುಪಾಲರ ಮೂಲಕ ವಿಷಯ ಪ್ರಸ್ತಾಪಿಸಿ ಮಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬಸ್ ನಿಲ್ದಾಣದಲ್ಲಿ ಹೋಮ್ ಗಾರ್ಡ್ಸ್ಗಳನ್ನು ನೇಮಿಸಲಾಗಿದ್ದು, ಚಾಲಕರು ನಿಲ್ದಾಣಗಳಲ್ಲಿ ಬಸ್ ನಿಲ್ಲಿಸಲು ಆರಂಭಿಸಿದರು. ಆದರೆ ಕೆಲವು ದಿನಗಳ ನಂತರ, ಮತ್ತೆ ಅದೇ ಹಳೆಯ ಅಭ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಅಗತ್ಯವಿರುವ ನಿಲ್ದಾಣಗಳಲ್ಲಿ ಬಸ್‌ಗಳನ್ನು ಮಾತ್ರ ನಿಲ್ಲಿಸುತ್ತಿದ್ದಾರೆ.
ಇದನ್ನು ಓದಿ:ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿವಿ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ
ಈ ವಿಚಾರಕ್ಕಾಗಿ ವಿದ್ಯಾರ್ಥಿಗಳು ವಿಭಿನ್ನವಾಗಿ ಪ್ರತಿಭಟನೆ ಮಾಡಿದ್ದಾರೆ. ಕೆಲವು ವಿದ್ಯಾರ್ಥಿನಿಯರು ಬಸ್ಸಿನ ಎಲ್ಲಾ ಸಿಬ್ಬಂದಿಗೆ ಸಿಹಿ ಹಂಚಿ ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಬಸ್‌ಗಳಿಗೆ ಕಲ್ಲು ತೂರಾಟ ಮಾಡಿ ಪ್ರತಿಭಟನೆ ಮಾಡುವುದು ನಮಗೆ ಇಷ್ಟವಿಲ್ಲ, ನಮ್ಮ ಆಸ್ತಿಯನ್ನು ನಾವೇ ಹಾಳುವುದು ಎಷ್ಟು ಸರಿ ಎಂದು ಬಸ್ ನಿಲ್ಲಿಸಿದರೆ ಸಿಹಿ ನೀಡುತ್ತೇವೆ ಎಂದರು. ಶಿಕ್ಷಕರು ಹಾಗೂ ಬಸ್ ಮಾಲಕರ ಪ್ರತಿನಿಧಿಗಳ ಸಮ್ಮುಖದಲ್ಲಿ ಕಾಲೇಜು ಪ್ರಾಂಶುಪಾಲರು ಪ್ರತಿಭಟನೆಗಳಿಗೆ ಚಾಲನೆ ನೀಡಿದರು.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:19 pm, Mon, 12 December 22