NCERT ಪಠ್ಯಪುಸ್ತಕ ಪರಿಷ್ಕರಿಸುವ ನೂತನ ಸಮಿತಿಯಲ್ಲಿ ಸುಧಾ ಮೂರ್ತಿ, ಶಂಕರ್ ಮಹಾದೇವನ್

|

Updated on: Aug 12, 2023 | 6:01 PM

ಪಠ್ಯಪುಸ್ತಕಗಳು ಮತ್ತು ಇತರ ಬೋಧನಾ ಕಲಿಕಾ ಸಾಮಗ್ರಿಗಳ ಬಗ್ಗೆ ಈ ಸಮಿತಿ ತೀರ್ಮಾನ ಕೈಗೊಳ್ಳಲಿದ್ದು, ಇವುಗಳನ್ನು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ನಿಯಮಗಳ ಪ್ರಕಾರ ಪ್ರಕಟಿಸಿ ಬಳಸುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಎನ್​​ಡಿಟಿವಿ ವರದಿ ಮಾಡಿದೆ. ಪ್ರತಿ ಪಠ್ಯಕ್ರಮದ ಪ್ರದೇಶಕ್ಕೆ ಬೋಧನೆ-ಕಲಿಕೆ ಸಾಮಗ್ರಿಗಳ ಅಭಿವೃದ್ಧಿಯಲ್ಲಿ ಪಠ್ಯಕ್ರಮದ ಪ್ರದೇಶ ಗುಂಪುಗಳು (CAGs) ಎನ್ ಎಸ್ ಟಿಸಿಗೆ ಗೆ ಸಹಾಯ ಮಾಡುತ್ತದೆ.

NCERT ಪಠ್ಯಪುಸ್ತಕ ಪರಿಷ್ಕರಿಸುವ ನೂತನ ಸಮಿತಿಯಲ್ಲಿ ಸುಧಾ ಮೂರ್ತಿ, ಶಂಕರ್ ಮಹಾದೇವನ್
ಸುಧಾ ಮೂರ್ತಿ- ಶಂಕರ್ ಮಹಾದೇವನ್
Follow us on

ದೆಹಲಿ ಆಗಸ್ಟ್ 12: ಹೊಸ ಪಠ್ಯಕ್ರಮದ ಪ್ರಕಾರ ಪಠ್ಯಪುಸ್ತಕಗಳನ್ನು ಪರಿಷ್ಕರಿಸಲು ಎನ್‌ಸಿಇಆರ್‌ಟಿ (NCERT)ರಚಿಸಿರುವ ನೂತನ ಸಮಿತಿಯಲ್ಲಿ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ(Sudha Murty), ಸಂಗೀತ ನಿರ್ದೇಶಕ, ಗಾಯಕ ಶಂಕರ್ ಮಹಾದೇವನ್ (Shankar Mahadevan), ಅರ್ಥಶಾಸ್ತ್ರಜ್ಞ ಸಂಜೀವ್ ಸನ್ಯಾಲ್ ಸೇರಿದಂತೆ 16 ಮಂದಿ ಇದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 19 ಸದಸ್ಯರ ರಾಷ್ಟ್ರೀಯ ಪಠ್ಯಕ್ರಮ ಮತ್ತು ಬೋಧನಾ ಕಲಿಕಾ ಸಾಮಗ್ರಿ ಸಮಿತಿ (NSTC)ಗೆ ರಾಷ್ಟ್ರೀಯ ಶೈಕ್ಷಣಿಕ ಯೋಜನೆ ಮತ್ತು ಆಡಳಿತ ಸಂಸ್ಥೆ (NIEPA) ಕುಲಪತಿ ಎಂಸಿ ಪಂತ್ ನೇತೃತ್ವ ವಹಿಸಲಿದ್ದಾರೆ. ಈ ಸಮಿತಿ 3 ರಿಂದ 12 ನೇ ತರಗತಿಗಳಿಗೆ ಪಠ್ಯಪುಸ್ತಕಗಳನ್ನು ಪರಿಷ್ಕರಿಸಲಿದೆ.

ಪಠ್ಯಪುಸ್ತಕಗಳು ಮತ್ತು ಇತರ ಬೋಧನಾ ಕಲಿಕಾ ಸಾಮಗ್ರಿಗಳ ಬಗ್ಗೆ ಈ ಸಮಿತಿ ತೀರ್ಮಾನ ಕೈಗೊಳ್ಳಲಿದ್ದು, ಇವುಗಳನ್ನು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ನಿಯಮಗಳ ಪ್ರಕಾರ ಪ್ರಕಟಿಸಿ ಬಳಸುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಎನ್​​ಡಿಟಿವಿ ವರದಿ ಮಾಡಿದೆ.

ಪ್ರತಿ ಪಠ್ಯಕ್ರಮದ ಪ್ರದೇಶಕ್ಕೆ ಬೋಧನೆ-ಕಲಿಕೆ ಸಾಮಗ್ರಿಗಳ ಅಭಿವೃದ್ಧಿಯಲ್ಲಿ ಪಠ್ಯಕ್ರಮದ ಪ್ರದೇಶ ಗುಂಪುಗಳು (CAGs) ಎನ್ ಎಸ್ ಟಿಸಿಗೆ ಗೆ ಸಹಾಯ ಮಾಡುತ್ತದೆ. ಈ ಗುಂಪುಗಳು ಸೂಕ್ತ ತಜ್ಞರನ್ನು ಒಳಗೊಂಡಿದ್ದು, ಎನ್‌ಸಿಇಆರ್‌ಟಿಯ ನೆರವಿನೊಂದಿಗೆ ಎನ್‌ಎಸ್‌ಟಿಸಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ನೇಮಕ ಮಾಡುತ್ತದೆ ಎಂದು ಅಧಿಕಾರಿ ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020 ರ ಅನುಷ್ಠಾನದ ಭಾಗವಾಗಿ ಕೆ ಕಸ್ತೂರಿರಂಗನ್ ನೇತೃತ್ವದ ಸ್ಟೀರಿಂಗ್ ಸಮಿತಿಯು ಅಭಿವೃದ್ಧಿಪಡಿಸಿದ ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನೊಂದಿಗೆ (ಎನ್‌ಸಿಎಫ್-ಎಸ್‌ಇ) ಪಠ್ಯಕ್ರಮವನ್ನು ಜೋಡಿಸಲು ಸಮಿತಿಯು ಕೆಲಸ ಮಾಡುತ್ತದೆ.

ಅಂತಿಮ NCF-SE ಅನ್ನು ಈಗಾಗಲೇ ಕೇಂದ್ರ ಶಿಕ್ಷಣ ಸಚಿವಾಲಯಕ್ಕೆ ಸಲ್ಲಿಸಲಾಗಿದೆಯಾದರೂ, ಅದನ್ನು ಸಾರ್ವಜನಿಕ ಡೊಮೇನ್‌ನಲ್ಲಿ ಬಿಡುಗಡೆ ಮಾಡಬೇಕಾಗಿದೆ. ಚೌಕಟ್ಟಿನ ಕರಡು ಏಪ್ರಿಲ್‌ನಲ್ಲಿ ಬಿಡುಗಡೆಯಾಯಿತು. ಪ್ರಿನ್ಸ್‌ಟನ್ ವಿಶ್ವವಿದ್ಯಾನಿಲಯದ ಗಣಿತಶಾಸ್ತ್ರದ ಪ್ರಾಧ್ಯಾಪಕ ಮಂಜುಲ್ ಭಾರ್ಗವ್ ಅವರು ಸಮಿತಿಯ ಉಪಾಧ್ಯಕ್ಷರಾಗಿದ್ದಾರೆ. ಗಣಿತಶಾಸ್ತ್ರಜ್ಞೆ ಸುಜಾತಾ ರಾಮದೊರೈ, ಬ್ಯಾಡ್ಮಿಂಟನ್ ಆಟಗಾರ್ತಿ ಯು ವಿಮಲ್ ಕುಮಾರ್, ನೀತಿ ಅಧ್ಯಯನ ಕೇಂದ್ರದ ಅಧ್ಯಕ್ಷ ಎಂಡಿ ಶ್ರೀನಿವಾಸ್ ಮತ್ತು ಭಾರತೀಯ ಭಾಷಾ ಸಮಿತಿಯ ಅಧ್ಯಕ್ಷ ಚಾಮು ಕೃಷ್ಣ ಶಾಸ್ತ್ರಿ ಇದರಲ್ಲಿ ಸದಸ್ಯರಾಗಿದ್ದಾರೆ.

ಇದನ್ನೂ ಓದಿ: Viral: ಸರಳ ಸಜ್ಜನಿಕೆಯ ಸುಧಾ ಮೂರ್ತಿ ಟ್ರೋಲ್ ಆಗುತ್ತಿರುವುದೇಕೆ? ಆ್ಯನ್ಸರ್ ಈಸ್ ಸೋ ಸಿಂಪಲ್!

ಮೇ ತಿಂಗಳಲ್ಲಿ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳಿಂದ ಹಲವಾರು ವಿಷಯಗಳು ಮತ್ತು ಭಾಗಗಳನ್ನು ಕೈಬಿಡುವುದು ವಿವಾದವನ್ನು ಹುಟ್ಟುಹಾಕಿತು. ಪ್ರತಿಪಕ್ಷಗಳು ಬಿಜೆಪಿ ನೇತೃತ್ವದ ಕೇಂದ್ರವನ್ನು ಸೇಡಿನ ಕೆಲಸ ಎಂದು ದೂಷಿಸಿದ್ದವು. ತರ್ಕಬದ್ಧಗೊಳಿಸುವ ವ್ಯಾಯಾಮದ ಭಾಗವಾಗಿ ಮಾಡಲಾದ ಬದಲಾವಣೆಗಳನ್ನು ಸೂಚಿಸಲಾಗಿದ್ದರೂ, ಕೆಲವು ವಿವಾದಾತ್ಮಕ ಅಳಿಸುವಿಕೆಗಳನ್ನು ಉಲ್ಲೇಖಿಸಲಾಗಿಲ್ಲ ಎಂಬ ಅಂಶದ ಬಗ್ಗೆ ವಿವಾದವೆದ್ದಿತ್ತು. ಪಠ್ಯಪುಸ್ತಕಗಳಲ್ಲಿನ ಲೋಪಗಳು ಉದ್ದೇಶಪೂರ್ವಕವಾಗಿಲ್ಲ ಎಂದು ಎನ್‌ಸಿಇಆರ್‌ಟಿ ಒಪ್ಪಿಕೊಂಡರೂ, ಅವರು ಅಳಿಸುವಿಕೆಗಳನ್ನು ಮತ್ತೆ ಸೇರಿಸವು ನಿರಾಕರಿಸಿದರು. ಆದಾಗ್ಯೂ, ತಜ್ಞರು ನೀಡಿದ ಶಿಫಾರಸುಗಳ ಆಧಾರದ ಮೇಲೆ ಆ ಪಠ್ಯಭಾಗಗಳನ್ನು ತೆಗೆದುಹಾಕಲಾಗಿದೆ ಎಂದು NCERT ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ