
ನವದೆಹಲಿ, ಡಿಸೆಂಬರ್ 2: ಬೊಜ್ಜು ಕಡಿಮೆ ಮಾಡಲು ಕೆಲವರು ಸಾಮಾನ್ಯವಾಗಿ ಸೇವಿಸುವ ಕೆಲವು ಔಷಧಿಗಳು ಅಡ್ಡಪರಿಣಾಮಗಳನ್ನು ಉಂಟುಮಾಡುತ್ತಿವೆ. ಅದರಲ್ಲಿ GLP-1 ರಿಸೆಪ್ಟರ್ ಅಗೋನಿಸ್ಟ್‌ಗಳು ಎಂಬ ಔಷಧಿ ಕೂಡ ಒಂದು. ಈ ಔಷಧಿಯನ್ನು ಬಳಸುವವರಿಗೆ ಜಾಗತಿಕ ಮಾರ್ಗಸೂಚಿಯನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ಬಿಡುಗಡೆ ಮಾಡಿದೆ. ಬೊಜ್ಜು (Obesity) ಒಂದು ದೀರ್ಘಾವಧಿಯ ರೋಗವೆಂದು ಗುರುತಿಸಲ್ಪಟ್ಟಿದೆ. ಇತ್ತೀಚಿನ ಜೀವನಶೈಲಿಯಿಂದ ಮತ್ತು ಆರೋಗ್ಯಕ್ರಮದಿಂದಾಗಿ ಬೊಜ್ಜು ಒಂದು ಪ್ರಮುಖ ಜಾಗತಿಕ ಆರೋಗ್ಯ ಸವಾಲಾಗಿದ್ದು, ವಿಶ್ವಾದ್ಯಂತ ಜನರು ಅದನ್ನು ಪರಿಣಾಮಕಾರಿಯಾಗಿ ಮತ್ತು ಸಮಾನವಾಗಿ ನಿಯಂತ್ರಿಸಲು ಬೆಂಬಲ ನೀಡುವ ಮೂಲಕ ಪರಿಹರಿಸಲು WHO ಬದ್ಧವಾಗಿದೆ ಎಂದು ಹೇಳಿದೆ.
ಮೂಲತಃ ಟೈಪ್-2 ಮಧುಮೇಹ ನಿಯಂತ್ರಣಕ್ಕಾಗಿ ಅಭಿವೃದ್ಧಿಪಡಿಸಲಾದ GLP-1 ಚಿಕಿತ್ಸೆಗಳು ಜಾಗತಿಕ ಬೇಡಿಕೆಯಲ್ಲಿ ತ್ವರಿತ ಏರಿಕೆಯನ್ನು ಕಂಡಿವೆ. ಈ ವರ್ಷದ ಸೆಪ್ಟೆಂಬರ್‌ನಲ್ಲಿ WHO ಈ ಔಷಧಿಗಳನ್ನು ಮಧುಮೇಹವನ್ನು ನಿರ್ವಹಿಸಲು ಬಳಸುವ ಔಷಧಿಗಳ ಪಟ್ಟಿಗೆ ಸೇರಿಸಿತು. ಇದು ಅವುಗಳ ಹೆಚ್ಚುತ್ತಿರುವ ವೈದ್ಯಕೀಯ ಮಹತ್ವವನ್ನು ಸೂಚಿಸುತ್ತದೆ.
ಇದನ್ನೂ ಓದಿ:
ಓಜೆಂಪಿಕ್, ವೆಗೋವಿ ಮತ್ತು ಮೌಂಜಾರೊದಂತಹ GLP-1 ಔಷಧಿಗಳಿಗೆ ಜಾಗತಿಕ ಬೇಡಿಕೆ ಹೆಚ್ಚುತ್ತಿದೆ. ಮೂಲತಃ ಮಧುಮೇಹ ನಿರ್ವಹಣೆಗಾಗಿ ನೀಡಲಾಗುವ ಈ ಚುಚ್ಚುಮದ್ದುಗಳು ತೂಕ ಇಳಿಕೆಯಲ್ಲಿ ಬೃಹತ್ ದ್ವಿತೀಯ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿವೆ. ಆದರೆ, ಈ ಔಷಧಿಗಳನ್ನು ತೂಕ ಇಳಿಸಲು ಹೆಚ್ಚಾಗಿ ಬಳಸುವುದರಿಂದ ಆತ್ಮಹತ್ಯಾ ಆಲೋಚನೆಗಳು ಹೆಚ್ಚುತ್ತಿವೆ, ಗರ್ಭನಿರೋಧಕ ವೈಫಲ್ಯಗಳಿಗೆ ಸಂಬಂಧಿಸಿದ ಅನಿರೀಕ್ಷಿತ ಗರ್ಭಧಾರಣೆ ಕೂಡ ಈ ಔಷಧಿಗಳ ಅಡ್ಡಪರಿಣಾಮಗಳಲ್ಲಿ ಒಂದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
GLP-1 ಔಷಧಿಗಳು ರಕ್ತದಲ್ಲಿನ ಸಕ್ಕರೆ ಮತ್ತು ಹಸಿವನ್ನು ನಿಯಂತ್ರಿಸುವ ನೈಸರ್ಗಿಕವಾಗಿ ಸಂಭವಿಸುವ ಹಾರ್ಮೋನ್ ಅನ್ನು ಅನುಮೋದಿಸುತ್ತವೆ. ಆಸ್ಟ್ರೇಲಿಯಾದಲ್ಲಿ ಈ ವರ್ಗದ 5 ಔಷಧಿಗಳನ್ನು ಅನುಮೋದಿಸಲಾಗಿದೆ. ಅವುಗಳೆಂದರೆ, ಮೌಂಜಾರೊ (ಟಿರ್ಜೆಪಟೈಡ್), ಓಜೆಂಪಿಕ್ ಮತ್ತು ವೆಗೋವಿ (ಎರಡೂ ಸೆಮಾಗ್ಲುಟೈಡ್), ಸ್ಯಾಕ್ಸೆಂಡಾ (ಲಿರಾಗ್ಲುಟೈಡ್) ಮತ್ತು ಟ್ರುಲಿಸಿಟಿ (ಡುಲಾಗ್ಲುಟೈಡ್).
ಇದನ್ನೂ ಓದಿ:
ಈ ಇಂಜೆಕ್ಷನ್ಗಳು ಹಲವು ವರ್ಷಗಳಿಂದ ಲಭ್ಯವಿದ್ದರೂ, ಇತ್ತೀಚಿನ ದಿನಗಳಲ್ಲಿ ಆಫ್-ಲೇಬಲ್ ತೂಕ ಇಳಿಕೆಗೆ ಹೆಚ್ಚು ಬಳಕೆಯಾಗುತ್ತಿದೆ. ಇದರಿಂದ ಅವು ಮತ್ತೆ ಮುಖ್ಯವಾಹಿನಿಗೆ ಬಂದಿದೆ. ಸಾಮಾನ್ಯವಾಗಿ ಹೆಚ್ಚಿನ ಜನರು ಗಮನಿಸುವ ಅಡ್ಡಪರಿಣಾಮಗಳೆಂದರೆ, ವಾಕರಿಕೆ, ವಾಂತಿ, ಮಲಬದ್ಧತೆ ಮತ್ತು ಹೊಟ್ಟೆಯ ಅಸ್ವಸ್ಥತೆ. ಅಲ್ಲದೆ, ಇದು ಆತ್ಮಹತ್ಯಾ ಆಲೋಚನೆಗಳನ್ನು ಹೆಚ್ಚಿಸುತ್ತದೆ. ಕೆಲವರಿಗೆ ಖಿನ್ನತೆಯನ್ನು ಕೂಡ ಉಂಟುಮಾಡಬಹುದು.
2024 ರ ಅಧ್ಯಯನವು GLP-1 ಬಳಕೆದಾರರಲ್ಲಿ ಆತ್ಮಹತ್ಯಾ ಪ್ರವೃತ್ತಿ ಎರಡು ಪಟ್ಟು (106%) ಹೆಚ್ಚಳವನ್ನು ಕಂಡಿದೆ ಎಂದು ವರದಿ ಮಾಡಿದೆ. ವಿಶ್ವ ಆರೋಗ್ಯ ಸಂಸ್ಥೆಯ ದತ್ತಾಂಶವು ಸೆಮಾಗ್ಲುಟೈಡ್ ಮತ್ತು ಆತ್ಮಹತ್ಯಾ ಆಲೋಚನೆಗಳ ನಡುವಿನ ಸಂಭಾವ್ಯ ಸಂಬಂಧಗಳನ್ನು ಸಹ ಗಮನಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ