ದೆಹಲಿ: ಸುಲ್ಲಿ ಡೀಲ್ಸ್ ಅಪ್ಲಿಕೇಶನ್ (SulliDeals app)ಕ್ರಿಯೇಟರ್ ಮತ್ತು ಮಾಸ್ಟರ್‌ಮೈಂಡ್ ಓಂಕಾರೇಶ್ವರ ಠಾಕೂರ್ನ್ನು(Aumkareshwar Thakur) ಇಂದೋರ್ನಲ್ಲಿ ಭಾನುವಾರ ಬಂಧಿಸಲಾಗಿದೆ. ಠಾಕೂರ್ ಅವರು ಮುಸ್ಲಿಂ ಮಹಿಳೆಯರನ್ನುಟ್ವಿಟರ್‌ನಲ್ಲಿ ಟ್ರೋಲ್ ಮಾಡಲು ಮಾಡಿದ ಟ್ರಾಡ್-ಗ್ರೂಪ್‌ನ ಸದಸ್ಯರಾಗಿದ್ದರು ಎಂದು ಇಂಟೆಲಿಜೆನ್ಸ್ ಫ್ಯೂಷನ್ ಮತ್ತು ಸ್ಟ್ರಾಟೆಜಿಕ್ ಆಪರೇಷನ್ಸ್ (ಐಎಫ್‌ಎಸ್‌ಒ), ದೆಹಲಿ ಪೊಲೀಸ್ ವಿಶೇಷ ಸೆಲ್ ನ ಡಿಸಿಪಿ ಕೆಪಿಎಸ್ ಮಲ್ಹೋತ್ರಾ ಹೇಳಿದ್ದಾರೆ.ಈ ಆ್ಯಪ್ ಕಳೆದ ವರ್ಷ ಮುಸ್ಲಿಂ ಮಹಿಳೆಯರನ್ನು ಗುರಿಯಾಗಿಸಿಕೊಂಡು ದೊಡ್ಡ ಕೋಲಾಹಲವನ್ನು ಸೃಷ್ಟಿಸಿತ್ತು. ‘ಸುಲ್ಲಿ ಡೀಲ್ಸ್’ ಆ್ಯಪ್‌ನ ನಿಕಟವಾಗಿ ಕಂಡುಬರುವ ‘ಬುಲ್ಲಿ ಬಾಯ್’ ಪ್ರಕರಣದ ಇತ್ತೀಚಿನ ವಿವಾದದಿಂದ ಮತ್ತೆ ಸುದ್ದಿಯಲ್ಲಿದೆ. ಮಧ್ಯಪ್ರದೇಶದ ನ್ಯೂಯಾರ್ಕ್ ನಗರದ ನಿವಾಸಿ ಓಂಕಾರೇಶ್ವರ ಠಾಕೂರ್ನ್ನು ಬಂಧಿಸಲಾಗಿದೆ ಪ್ರಾಥಮಿಕ ವಿಚಾರಣೆ ವೇಳೆ ತಾನು ಮುಸ್ಲಿಂ ಮಹಿಳೆಯರನ್ನು ಟ್ರೋಲ್ ಮಾಡುವ, ಅವಮಾನಿಸುವ ಉದ್ದೇಶ ಹೊಂದಿರುವ ಟ್ವಿಟರ್ ಗುಂಪೊಂದರ ಸದಸ್ಯನಾಗಿದ್ದೇನೆ ಎಂದು ಆತ ಒಪ್ಪಿಕೊಂಡಿದ್ದಾನೆ ಎಂದು ಡಿಸಿಪಿ ಕೆಪಿಎಸ್ ಮಲ್ಹೋತ್ರಾ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
Aumkareshwar Thakur, #SulliDeals app creator and mastermind arrested from Indore. He was the member of Trad-Group on Twitter made to troll Muslim women: DCP KPS Malhotra, Intelligence Fusion and Strategic Operations (IFSO), Delhi Police Special Cell pic.twitter.com/Eb55Kqrwai
— ANI (@ANI) January 9, 2022
ಠಾಕೂರ್ GitHub ನಲ್ಲಿ ಕೋಡ್ ಅನ್ನು ಅಭಿವೃದ್ಧಿಪಡಿಸಿದ್ದಾರೆ ಮತ್ತು ಗಿಟ್ಹಬ್ನ ಪ್ರವೇಶವನ್ನು ಗುಂಪಿನ ಎಲ್ಲಾ ಸದಸ್ಯರಿಗೆ ನೀಡಲಾಯಿತು. ಈತ ತಮ್ಮ ಟ್ವಿಟರ್ ಖಾತೆಯಲ್ಲಿ ಅಪ್ಲಿಕೇಶನ್ ಅನ್ನು ಹಂಚಿಕೊಂಡಿದ್ದು. ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಗುಂಪಿನ ಸದಸ್ಯರು ಅಪ್‌ಲೋಡ್ ಮಾಡಿದ್ದಾರೆ ಎಂದು ವರದಿಯಲ್ಲಿ ಹೇಳಿದೆ.
ಠಾಕೂರ್ ಅವರು ಜನವರಿ 2020 ರಲ್ಲಿ @gangescion ಹ್ಯಾಂಡಲ್ ಅನ್ನು ಬಳಸಿಕೊಂಡು ಟ್ವಿಟರ್‌ನಲ್ಲಿ ಟ್ರಾಡ್ ಮಹಾಸಭಾ (Tradmahasabha) ಎಂಬ ಹೆಸರಿನ ಗುಂಪನ್ನು ಸೇರಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ವಿವಿಧ ಗುಂಪು ಚರ್ಚೆಗಳಲ್ಲಿ, ಈ ಸದಸ್ಯರು ಮುಸ್ಲಿಂ ಮಹಿಳೆಯರನ್ನು ಟ್ರೋಲ್ ಮಾಡುವ ಬಗ್ಗೆ ಚರ್ಚಿಸಿದರು. ಅವರು GitHub ನಲ್ಲಿ ಕೋಡ್/ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದ್ದರು.
ಸುಲ್ಲಿ ಡೀಲ್ಸ್ ಅಪ್ಲಿಕೇಶನ್ ವಿವಾದ ನಂತರ ಠಾಕೂರ್ ತಮ್ಮ ಎಲ್ಲಾ ಸಾಮಾಜಿಕ ಮಾಧ್ಯಮದ ಎಲ್ಲ ಖಾತೆಗಳನ್ನು ಅಳಿಸಿದ್ದರು. ಸುಲ್ಲಿ ಡೀಲ್ಸ್ ಅಪ್ಲಿಕೇಶನ್‌ಗೆ ಸಂಬಂಧಿಸಿದ ಕೋಡ್‌ಗಳು/ಚಿತ್ರಗಳನ್ನು ಕಂಡುಹಿಡಿಯಲು ತಾಂತ್ರಿಕ ಗ್ಯಾಜೆಟ್‌ಗಳ ವಿಶ್ಲೇಷಣೆ ಸೇರಿದಂತೆ ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಸುಲ್ಲಿ ಡೀಲ್ಸ್ ಮತ್ತು ಬುಲ್ಲಿ ಬಾಯ್ ರಚಿಸಲು ಬಳಸಿದ ವೆಬ್‌ಸೈಟ್; ಏನಿದು ಗಿಟ್ಹಬ್?
Published On - 10:02 am, Sun, 9 January 22