NEET PG admissions ನೀಟ್ ಪಿಜಿ ಪ್ರವೇಶ: ಆರ್ಥಿಕವಾಗಿ ದುರ್ಬಲ ವರ್ಗ ಕೋಟಾ ಅರ್ಜಿ ವಿಚಾರಣೆ ನಾಳೆ

| Updated By: ರಶ್ಮಿ ಕಲ್ಲಕಟ್ಟ

Updated on: Jan 04, 2022 | 5:32 PM

ನೀಟ್ -ಪಿಜಿ ಕೌನ್ಸೆಲಿಂಗ್‌ನಲ್ಲಿನ ವಿಳಂಬದ ಬಗ್ಗೆ ದೆಹಲಿ ಮತ್ತು ದೇಶದ ಇತರ ಭಾಗಗಳಲ್ಲಿ ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಶನ್ (FORDA) ಬ್ಯಾನರ್‌ನಡಿಯಲ್ಲಿ ವಿವಿಧ ಆಸ್ಪತ್ರೆಗಳ ನಿವಾಸಿ ವೈದ್ಯರು ದೊಡ್ಡ ಪ್ರಮಾಣದ ಪ್ರತಿಭಟನೆಗಳನ್ನು ನಡೆಸಿದ್ದರು.

NEET PG admissions ನೀಟ್ ಪಿಜಿ ಪ್ರವೇಶ: ಆರ್ಥಿಕವಾಗಿ ದುರ್ಬಲ ವರ್ಗ ಕೋಟಾ ಅರ್ಜಿ ವಿಚಾರಣೆ ನಾಳೆ
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ನೀಟ್ ಪಿಜಿ (NEET PG) ಪ್ರವೇಶಕ್ಕೆ ಸಂಬಂಧಿಸಿದಂತೆ ಆರ್ಥಿಕವಾಗಿ ದುರ್ಬಲ ವರ್ಗ (EWS) ಕೋಟಾಕ್ಕೆ ಸಂಬಂಧಿಸಿದ ಅರ್ಜಿಯನ್ನು ಬುಧವಾರ ಆಲಿಸಲು ಸುಪ್ರೀಂಕೋರ್ಟ್  ಸಮ್ಮತಿಸಿದೆ. ಈ ವಿಷಯದಲ್ಲಿ ತುರ್ತು ವಿಚಾರಣೆ ನಡೆಸಬೇಕೆಂದು  ಕೇಂದ್ರ ಸರ್ಕಾರ ಕೋರಿತ್ತು. ಭಾರತದ ಮುಖ್ಯ ನ್ಯಾಯಮೂರ್ತಿ (CJI) ಎನ್‌ವಿ ರಮಣ (N V Ramana) ಮತ್ತು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ (Surya Kant ) ಮತ್ತು ಹಿಮಾ ಕೊಹ್ಲಿ(Hima Kohli) ಅವರನ್ನೊಳಗೊಂಡ ಪೀಠವು ಕೇಂದ್ರದ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಸಲ್ಲಿಕೆಗಳನ್ನು ಗಮನಿಸಿತು. ಈ ವಿಷಯವು ಪ್ರವೇಶಕ್ಕೆ ಸಂಬಂಧಿಸಿದೆ. ಪದವಿ ವೈದ್ಯಕೀಯ ಕೋರ್ಸ್‌ಗಳು ಮತ್ತು ವಿದ್ಯಾರ್ಥಿಗಳು ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದು ತುಷಾರ್ ಮೆಹ್ತಾ ಹೇಳಿದ್ದರು.  “ಇದು ತ್ರಿಸದಸ್ಯ ಪೀಠದ ವಿಷಯವಾಗಿದ್ದರೆ, ನಾಳೆ ತ್ರಿಸದಸ್ಯ ಪೀಠದ ಮುಂದೆ ಇರಿಸಲಾಗುವುದು” ಎಂದು ಸಿಜೆಐ ಹೇಳಿದರು. ಮೂವರು ನ್ಯಾಯಮೂರ್ತಿಗಳ ತ್ರಿಸದಸ್ಯ ಪೀಠವು ಇಡಬ್ಲ್ಯೂಎಸ್ ಕೋಟಾ ವಿಷಯವನ್ನು ವಿಚಾರಣೆ ನಡೆಸುತ್ತಿರುವುದರಿಂದ ಸಿಜೆಐ ಅವರು ಅಗತ್ಯವಾದ ಬಲದ ಪೀಠವನ್ನು ಸ್ಥಾಪಿಸಬಹುದು ಎಂದು ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ಸೋಮವಾರ ಕೇಂದ್ರಕ್ಕೆ ತಿಳಿಸಿದೆ.

ಆದಾಗ್ಯೂ ಸುಪ್ರೀಂಕೋರ್ಟ್  ಈ ವಾರ ವಿವಿಧ ವಿಷಯಗಳನ್ನು ಮಾತ್ರ ಆಲಿಸುತ್ತಿದೆ ಮತ್ತು ನೀಟ್ ವಿಷಯವನ್ನು ಆಲಿಸಬೇಕಾದರೆ, ಪೀಠಗಳನ್ನು ಮರುರಚಿಸಬೇಕಾಗುತ್ತದೆ. ಈ ಹಿಂದೆ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ನಡೆದಿತ್ತು.

“ನಾನು ವಿಶೇಷ ಪೀಠವನ್ನು ರಚಿಸಬೇಕಾಗಿದೆ. ನಾಳೆ ನೋಡೋಣ. ಈ ಸಂಪೂರ್ಣ ವಾರವು ವಿವಿಧ (ವಿಷಯಗಳು) ವಾರವಾಗಿದೆ. ನಾಳೆ ನಾವು ಪೀಠವನ್ನು ರಚಿಸಬಹುದೇ ಎಂದು ನೋಡೋಣ, ”ಎಂದು ಸಿಜೆಐ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಹೇಳಿದರು.

ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ದ್ವಿಸದಸ್ಯ ಪೀಠದ ಮುಂದೆ ಸಾಧ್ಯವಾದರೆ ಅದನ್ನು ಸಲ್ಲಿಸುವಂತೆಸ ಸಾಲಿಸಿಟರ್ ಜನರಲ್ ಮನವಿ ಮಾಡಿದರು. ಈ ಹಿಂದೆ ವಿಚಾರಣೆ ನಡೆಸಿದ್ದ ತ್ರಿಸದಸ್ಯ ಪೀಠ ಕೂಡ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರ ನೇತೃತ್ವ ವಹಿಸಿತ್ತು.

“ಇದು ಸಮಾಜದ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸಂಬಂಧಿಸಿದೆ. ರೆಸಿಡೆಂಟ್ ವೈದ್ಯರಿಗೆ ಹೆಚ್ಚಿನ ಕೌನ್ಸಿಲಿಂಗ್ ತಡೆಯುವ ಹೇಳಿಕೆಯನ್ನು ನಾವು ನೀಡಿದ್ದೇವೆ. ನಿವಾಸಿ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ ಮತ್ತು ಅವರ ಕಳವಳಗಳು ನಿಜವಾಗಿವೆ,” ಎಂದು ಅವರು ತುರ್ತುಸ್ಥಿತಿಯನ್ನು ಸಾಲಿಸಿಟರ್ ಜನರಲ್ ಎತ್ತಿ ತೋರಿಸಿದ್ದಾರೆ.
ನೋಡೋಣ. ಸಾಧ್ಯವಾದರೆ ನಾನು ಮೂವರು ನ್ಯಾಯಾಧೀಶರ ಪೀಠವನ್ನು ರಚಿಸುತ್ತೇನೆ ಅಥವಾ ನಾಳೆ ವಿಭಾಗೀಯ ಪೀಠದ ಮುಂದೆ ಹೋಗುತ್ತೇನೆ ಎಂದು ಸಿಜೆಐ ಹೇಳಿದರು.

ನವೆಂಬರ್ 25, 2011 ರಂದು ವಿಚಾರಣೆಯ ಕೊನೆಯ ದಿನಾಂಕದಂದು, ಸುಪ್ರೀಂಕೋರ್ಟ್ ಮುಂದಿನ ವಿಚಾರಣೆಯನ್ನು ಜನವರಿ 6 ರಂದು ನಿಗದಿಪಡಿಸಿತ್ತು.

ಸೋಮವಾರವೂ ಸಾಲಿಸಿಟರ್ ಜನರಲ್ ಅವರು ನ್ಯಾಯಮೂರ್ತಿ ಚಂದ್ರಚೂಡ್ ಅವರೊಂದಿಗೆ ಈ ವಿಷಯವನ್ನು ಕೈಗೆತ್ತಿಕೊಂಡು ಮಂಗಳವಾರ ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದರು.
ನ್ಯಾಯಮೂರ್ತಿ ಚಂದ್ರಚೂಡ್ ಅವರು ಪೀಠವನ್ನು ಪುನರ್ರಚಿಸಬೇಕಾಗಿರುವುದರಿಂದ ಸಿಜೆಐ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಮತ್ತು ಸಿಜೆಐ ಅವರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದ್ದರು.

ನೀಟ್ -ಪಿಜಿ ಕೌನ್ಸೆಲಿಂಗ್‌ನಲ್ಲಿನ ವಿಳಂಬದ ಬಗ್ಗೆ ದೆಹಲಿ ಮತ್ತು ದೇಶದ ಇತರ ಭಾಗಗಳಲ್ಲಿ ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಶನ್ (FORDA) ಬ್ಯಾನರ್‌ನಡಿಯಲ್ಲಿ ವಿವಿಧ ಆಸ್ಪತ್ರೆಗಳ ನಿವಾಸಿ ವೈದ್ಯರು ದೊಡ್ಡ ಪ್ರಮಾಣದ ಪ್ರತಿಭಟನೆಗಳನ್ನು ನಡೆಸಿದ್ದು, EWS ಕೋಟಾದ ನಿರ್ಣಯದ ಮಾನದಂಡವನ್ನು ಮರುಪರಿಶೀಲಿಸಲು ಕೇಂದ್ರವು ನಿರ್ಧರಿಸಿದ ಹಿನ್ನಲೆಯಲ್ಲಿ ಪ್ರತಿಭಟನೆಯನ್ನು ಸದ್ಯಕ್ಕೆ ಕೈಬಿಡಲಾಗಿದೆ.

ಇದನ್ನೂ ಓದಿ: NEET-PG admissions: ಆರ್ಥಿಕವಾಗಿ ದುರ್ಬಲ ವರ್ಗ ಕೋಟಾ ಪ್ರಕರಣದ ತುರ್ತು ವಿಚಾರಣೆ ಕೋರಿದ ಕೇಂದ್ರ

ಇದನ್ನೂ ಓದಿ:  NEET-PG admissions ಆರ್ಥಿಕವಾಗಿ ದುರ್ಬಲ ವರ್ಗ ಎಂದು ನಿರ್ಧರಿಸಲು ₹8 ಲಕ್ಷ ಆದಾಯದ ಮಾನದಂಡ: ಕೇಂದ್ರ ಸರ್ಕಾರ

Published On - 5:21 pm, Tue, 4 January 22