ಮಾಲಿನ್ಯ ತಡೆಗೆ ವಿಫಲವಾದ ದೆಹಲಿ ವಾಯು ಗುಣಮಟ್ಟ ಸಮಿತಿಗೆ ಸುಪ್ರೀಂಕೋರ್ಟ್ ತರಾಟೆ

ಕಾಯ್ದೆಯ ಸಂಪೂರ್ಣ ಅನುಸರಣೆ ಕಂಡುಬಂದಿದೆ. ದಯವಿಟ್ಟು ಕಾಯಿದೆಯಡಿಯಲ್ಲಿ ಯಾವುದೇ ಮಧ್ಯಸ್ಥಗಾರರಿಗೆ ನೀಡಲಾದ ಒಂದೇ ನಿರ್ದೇಶನವನ್ನು ನಮಗೆ ತೋರಿಸಿ. ಸಮಸ್ಯೆಯನ್ನು ಪರಿಹರಿಸಲು ಯಾವುದೇ ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆಯೇ ಎಂದು ನ್ಯಾಯಮೂರ್ತಿ ಓಕಾ ಪ್ರಶ್ನಿಸಿದ್ದಾರೆ.

ಮಾಲಿನ್ಯ ತಡೆಗೆ ವಿಫಲವಾದ ದೆಹಲಿ ವಾಯು ಗುಣಮಟ್ಟ ಸಮಿತಿಗೆ ಸುಪ್ರೀಂಕೋರ್ಟ್ ತರಾಟೆ
ಕೃಷಿ ತ್ಯಾಜ್ಯ ಸುಡುವಿಕೆ
Follow us
|

Updated on: Sep 27, 2024 | 4:37 PM

ದೆಹಲಿ ಸೆಪ್ಟೆಂಬರ್ 27: ಚಳಿಗಾಲದ ತಿಂಗಳುಗಳಲ್ಲಿ ದೆಹಲಿಯ ವಾಯುಮಾಲಿನ್ಯ ಹೆಚ್ಚುವಂತೆ ಮಾಡಿದ ನೆರೆಯ ರಾಜ್ಯಗಳಲ್ಲಿ ಕೃಷಿ ತಾಜ್ಯ ಸುಡುವುದನ್ನು ತಡೆಯಲು ಅದರ ಪ್ರಯತ್ನದ ಕೊರತೆಯ ಬಗ್ಗೆ ಶುಕ್ರವಾರ ಸುಪ್ರೀಂಕೋರ್ಟ್ ವಾಯು ಗುಣಮಟ್ಟ ನಿರ್ವಹಣಾ ಆಯೋಗವನ್ನು (CAQM) ತರಾಟೆಗೆ ತೆಗೆದುಕೊಂಡಿತು. ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ಪೀಠವು CAQM ಕಾಯಿದೆಯ ನಿಬಂಧನೆಗಳನ್ನು ಅನುಷ್ಠಾನಗೊಳಿಸುವ CAQM ಸಾಮರ್ಥ್ಯವನ್ನು ಪ್ರಶ್ನಿಸಿತು. ಪಂಜಾಬ್ ಮತ್ತು ಹರ್ಯಾಣದಂಥಾ ನೆರೆಯ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯ ಸುಡುವ ಅಭ್ಯಾಸವನ್ನು ತಡೆಯಲು ಆಯೋಗವು ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಳಿದೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ.

ಕಾಯ್ದೆಯ ಸಂಪೂರ್ಣ ಅನುಸರಣೆ ಕಂಡುಬಂದಿದೆ. ದಯವಿಟ್ಟು ಕಾಯಿದೆಯಡಿಯಲ್ಲಿ ಯಾವುದೇ ಮಧ್ಯಸ್ಥಗಾರರಿಗೆ ನೀಡಲಾದ ಒಂದೇ ನಿರ್ದೇಶನವನ್ನು ನಮಗೆ ತೋರಿಸಿ. ಸಮಸ್ಯೆಯನ್ನು ಪರಿಹರಿಸಲು ಯಾವುದೇ ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆಯೇ ಎಂದು ನ್ಯಾಯಮೂರ್ತಿ ಓಕಾ ಪ್ರಶ್ನಿಸಿದ್ದಾರೆ.

ಕೇಂದ್ರವನ್ನು ಪ್ರತಿನಿಧಿಸುವ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಐಶ್ವರ್ಯ ಭಾಟಿ ಅವರು ಅಫಿಡವಿಟ್‌ ಓದಿದ್ದು, ಬಿಕ್ಕಟ್ಟನ್ನು ನಿರ್ವಹಿಸಲು ಸಲಹೆಗಳು ಮತ್ತು ಮಾರ್ಗಸೂಚಿಗಳನ್ನು ನೀಡುವಂತಹ ಹಂತಗಳನ್ನು ವಿವರಿಸಿದ್ದಾರೆ. ಆದಾಗ್ಯೂ, ನ್ಯಾಯಾಲಯವು ಈ ಪ್ರಯತ್ನಗಳಿಂದ ಪ್ರಭಾವಿತವಾಗಲಿಲ್ಲ.

ಇದೆಲ್ಲವೂ ಗಾಳಿಯಲ್ಲಿದೆ, ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್‌ಸಿಆರ್) ರಾಜ್ಯಗಳಲ್ಲಿ ಏನು ಮಾಡಲಾಗಿದೆ ಎಂಬುದರ ಕುರಿತು ಅವರು ಏನನ್ನೂ ತೋರಿಸಿಲ್ಲ, ”ಎಂದು ನ್ಯಾಯಮೂರ್ತಿ ಓಕಾ ಹೇಳಿರುವುದಾಗಿ ಬಾರ್ ಆಂಡ್ ಬೆಂಚ್ ವರದಿ ಮಾಡಿದೆ.ಮಂಗಳವಾರ ಸುಪ್ರೀಂ ಕೋರ್ಟ್ ವಾರದಲ್ಲಿ CAQM ನಿಂದ ಕೃಷಿ ತ್ಯಾಜ್ಯ ಸುಡುವಿಕೆ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ವಿವರವಾದ ವಿವರಣೆಯನ್ನು ಕೇಳಿದೆ. ನ್ಯಾಯಾಲಯಕ್ಕೆ ಅಮಿಕಸ್ ಕ್ಯೂರಿಯಾಗಿ ಸಹಾಯ ಮಾಡುತ್ತಿರುವ ಹಿರಿಯ ವಕೀಲ ಅಪ್ರಜಿತಾ ಸಿಂಗ್ ಅವರು ದೆಹಲಿಯ ಗಡಿಗೆ ಹೊಂದಿಕೊಂಡಿರುವ ರಾಜ್ಯಗಳಲ್ಲಿ ಈಗಾಗಲೇ ಕೃಷಿ ತ್ಯಾಜ್ಯ ಪ್ರಾರಂಭಿಸಿದ್ದಾರೆ ಎಂದು ಮಾಧ್ಯಮ ವರದಿಗಳನ್ನು ಉಲ್ಲೇಖಿಸಿದ ನಂತರ ಪೀಠವು ಸೆಪ್ಟೆಂಬರ್ 27 ರೊಳಗೆ ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ಆಯೋಗವನ್ನು ನಿರ್ದಿಷ್ಟವಾಗಿ ಕೇಳಿದೆ.

CAQM ಕಾಯಿದೆಯಡಿ ಕಾನೂನುಗಳನ್ನು ಜಾರಿಗೊಳಿಸಲು CAQM ಅನ್ನು ಹೊಣೆಗಾರರನ್ನಾಗಿ ಮಾಡಲು ಸಿಂಗ್ ನ್ಯಾಯಾಲಯವನ್ನು ಒತ್ತಾಯಿಸಿದರು, ಮಾಲಿನ್ಯದಲ್ಲಿ ಋತುಮಾನದ ಉಲ್ಬಣವನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳ ಅಗತ್ಯವನ್ನು ಒತ್ತಿಹೇಳಿದರು. ಶುಕ್ರವಾರದ ವಿಚಾರಣೆಯ ಸಂದರ್ಭದಲ್ಲಿ ಆಯೋಗವು ಈ ಕಳವಳಗಳಿಗೆ ಸಂಬಂಧಿಸಿದಂತೆ ಉತ್ತರಗಳನ್ನು ನೀಡಿದೆ ಎಂದು ಖಚಿತಪಡಿಸಿಕೊಳ್ಳಲು ನ್ಯಾಯಮೂರ್ತಿ ಓಕಾ ಅವರು ಎಎಸ್‌ಜಿ ಭಾಟಿ ಅವರನ್ನು ಕೇಳಿದ್ದರು.

ವಿಚಾರಣೆಯ ಸಂದರ್ಭದಲ್ಲಿ, CAQM ಅಧ್ಯಕ್ಷ ರಾಜೇಶ್ ವರ್ಮಾ ಅವರು ಉಪ ಸಮಿತಿಗಳನ್ನು ರಚಿಸಲಾಗಿದೆ. ತ್ರೈಮಾಸಿಕ ಸಭೆಗಳನ್ನು ನಡೆಸುವುದರೊಂದಿಗೆ ಜಾರಿ ದಳಗಳು ಜಾರಿಯಲ್ಲಿವೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. “ಪ್ರತಿ ಮೂರು ತಿಂಗಳಿಗೊಮ್ಮೆ, ಅವರು ಸಭೆ ನಡೆಸುತ್ತಿದ್ದಾರೆ” ಎಂದು ವರ್ಮಾ ಹೇಳಿದ್ದು, 40 ಜಾರಿ ಸ್ಕ್ವಾಡ್‌ಗಳನ್ನು ಸ್ಥಾಪಿಸಲಾಗಿದೆ ಮತ್ತು 1,099 ಕೈಗಾರಿಕಾ ಘಟಕಗಳನ್ನು ಮುಚ್ಚಲಾಗಿದೆ ಎಂದಿದ್ದಾರೆ.

ಆದಾಗ್ಯೂ, ಈ ಕ್ರಮಗಳ ಪರಿಣಾಮದ ಬಗ್ಗೆ ನ್ಯಾಯಾಲಯವು ಸಂಶಯ ವ್ಯಕ್ತಪಡಿಸಿದ್ದು, “ಪ್ರತಿ ವರ್ಷ, ನಾವು ಕೃಷಿ ತ್ಯಾಜ್ಯ ಸುಡುವಿಕೆ ಎದುರಿಸುತ್ತೇವೆ. ಇದು ಕಡಿಮೆಯಾಗುತ್ತಿದೆಯೇ ಅಥವಾ ಹೆಚ್ಚಾಗುತ್ತಿದೆಯೇ?” ಎಂದು ನ್ಯಾಯಮೂರ್ತಿ ಓಕಾ ಪ್ರಶ್ನಿಸಿದರು.

ಕಳೆದ ಮೂರು ವರ್ಷಗಳಿಂದ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಸುಧಾರಿಸಿದೆ. ಕೃಷಿ ತ್ಯಾಜ್ಯ ಸುಡುವುದು ಕ್ರಮೇಣ ಕಡಿಮೆಯಾಗುತ್ತಿದೆ ಎಂದು ವರ್ಮಾ ನ್ಯಾಯಾಲಯಕ್ಕೆ ಭರವಸೆ ನೀಡಿದರು. ಆದರೆ ಅಮಿಕಸ್ ಕ್ಯೂರಿ ಅಪರಾಜಿತಾ ಸಿಂಗ್ ಅವರು ಇತ್ತೀಚೆಗೆ ಹುಲ್ಲು ಸುಡುವ ನಿದರ್ಶನಗಳನ್ನು ತೋರಿಸುತ್ತಾ ಅನುಮಾನಗಳನ್ನು ಎತ್ತಿದರು ಮತ್ತು ಕಾನೂನು ಜಾರಿಗೊಳಿಸಲು ವಿಫಲವಾದ ಅಧಿಕಾರಿಗಳ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಉತ್ತರ ಪ್ರದೇಶ: ಶಿಕ್ಷಣ ಸಂಸ್ಥೆಯ ಏಳಿಗೆಗಾಗಿ ಬಾಲಕನ ಬಲಿ, ಐವರ ಬಂಧನ

ದೆಹಲಿ, ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಮಾಲಿನ್ಯ ನಿಯಂತ್ರಣ ಮಂಡಳಿಗಳಿಂದ ಸಮರ್ಪಕ ಪ್ರಾತಿನಿಧ್ಯವಿಲ್ಲದೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ನ್ಯಾಯಾಲಯವು CAQM ನ ಉಪ ಸಮಿತಿಗಳ ಕಾರ್ಯವೈಖರಿಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಅದೇ ವೇಳೆ ಖಾಲಿ ಇರುವ ಹುದ್ದೆಗಳನ್ನು ತುರ್ತಾಗಿ, ಮೇಲಾಗಿ ಏಪ್ರಿಲ್ 30, 2025 ರ ಮೊದಲು ಭರ್ತಿ ಮಾಡಲು ಐದು NCR ರಾಜ್ಯಗಳಿಗೆ ನಿರ್ದೇಶನ ನೀಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ
ರೋಹಿತ್​ಗೂ ಅಚ್ಚರಿ ತರಿಸಿದ ಆಕಾಶ್ ಉರುಳಿಸಿದ ವಿಕೆಟ್; ವಿಡಿಯೋ ನೋಡಿ
ರೋಹಿತ್​ಗೂ ಅಚ್ಚರಿ ತರಿಸಿದ ಆಕಾಶ್ ಉರುಳಿಸಿದ ವಿಕೆಟ್; ವಿಡಿಯೋ ನೋಡಿ
ತುಮಕೂರು-ಯಶವಂತಪುರ ಮೆಮು ರೈಲು ಸೇವೆಗೆ ಚಾಲನೆ, ಇಲ್ಲಿದೆ ಟ್ರೈನ್​ ಸಮಯ
ತುಮಕೂರು-ಯಶವಂತಪುರ ಮೆಮು ರೈಲು ಸೇವೆಗೆ ಚಾಲನೆ, ಇಲ್ಲಿದೆ ಟ್ರೈನ್​ ಸಮಯ
ಕುರುಬ ಸಮಾಜದವನಿಗೆ ಅನ್ಯಾಯ ಮಾಡ್ತಾವ್ರೆ, ಕಾಂಗ್ರೆಸ್ ಮುಖಂಡನ ಬೀದಿ ರಂಪಾಟ
ಕುರುಬ ಸಮಾಜದವನಿಗೆ ಅನ್ಯಾಯ ಮಾಡ್ತಾವ್ರೆ, ಕಾಂಗ್ರೆಸ್ ಮುಖಂಡನ ಬೀದಿ ರಂಪಾಟ
ಕಾಂಗ್ರೆಸ್​ ಕಾರ್ಯಕರ್ತರಿಂದ ಸಿಎಂ ಆಪ್ತ, ಮುಡಾ ಅಧ್ಯಕ್ಷನಿಗೆ ಘೇರಾವ್​
ಕಾಂಗ್ರೆಸ್​ ಕಾರ್ಯಕರ್ತರಿಂದ ಸಿಎಂ ಆಪ್ತ, ಮುಡಾ ಅಧ್ಯಕ್ಷನಿಗೆ ಘೇರಾವ್​
‘ಬಿಗ್ ಬಾಸ್​ಗೆ ಬರೋಕೆ ಅವಕಾಶ ಕೊಡಿ ಪ್ಲೀಸ್’; ಮನವಿ ಮಾಡಿದ ಹುಚ್ಚ ವೆಂಕಟ್
‘ಬಿಗ್ ಬಾಸ್​ಗೆ ಬರೋಕೆ ಅವಕಾಶ ಕೊಡಿ ಪ್ಲೀಸ್’; ಮನವಿ ಮಾಡಿದ ಹುಚ್ಚ ವೆಂಕಟ್
ಪುನೀತ್ ರಾಜ್​ಕುಮಾರ್​ಗಾಗಿ ದೇವಸ್ಥಾನ ಕಟ್ಟಿದ್ದೇಕೆ? ವಿವರಿಸಿದ ಅಭಿಮಾನಿ
ಪುನೀತ್ ರಾಜ್​ಕುಮಾರ್​ಗಾಗಿ ದೇವಸ್ಥಾನ ಕಟ್ಟಿದ್ದೇಕೆ? ವಿವರಿಸಿದ ಅಭಿಮಾನಿ
ಗರುಡ ಪುರಾಣ ಮನೆಯಲ್ಲಿ ಇಟ್ಟುಕೊಳ್ಳಬಹುದಾ? ಇಲ್ಲಿದೆ ಉತ್ತರ
ಗರುಡ ಪುರಾಣ ಮನೆಯಲ್ಲಿ ಇಟ್ಟುಕೊಳ್ಳಬಹುದಾ? ಇಲ್ಲಿದೆ ಉತ್ತರ
Nithya Bhavishya: ಶುಕ್ರವಾರದ ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಶುಕ್ರವಾರದ ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ