
ನವದೆಹಲಿ, ಆಗಸ್ಟ್ 13: ದಾರಿ ತಪ್ಪಿಸುವ ಜಾಹೀರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ಪತಂಜಲಿ(Patanjali)ಗೆ ಸುಪ್ರೀಂಕೋರ್ಟ್ ಬಿಗ್ ರಿಲೀಫ್ ನೀಡಿದೆ. ಭಾರತೀಯ ವೈದ್ಯಕೀಯ ಸಂಘ(ಐಎಂಎ) ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಸಾಂಪ್ರದಾಯಿಕ ಔಷಧಕ್ಕೆ ಸಂಬಂಧಿಸಿದ ಜಾಹೀರಾತುಗಳು ದಾರಿತಪ್ಪಿಸುವಂತಿವೆ. ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಐಎಂಎ ನ್ಯಾಯಾಲಯವನ್ನು ಒತ್ತಾಯಿಸಿತ್ತು. ಇದಕ್ಕೂ ಮುನ್ನ ನ್ಯಾಯಾಲಯವು ಪತಂಜಲಿಯ ಜಾಹೀರಾತುಗಳ ಮೇಲೆ ತಾತ್ಕಾಲಿಕ ನಿಷೇಧ ಹೇರಿತ್ತು. ಪತಂಜಲಿಯ ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣವನ್ನು ಆರಂಭಿಸಲಾಗಿತ್ತು
ಜುಲೈ 1, 2024 ರಂದು, ಕೇಂದ್ರ ಆಯುಷ್ ಸಚಿವಾಲಯವು ಔಷಧಗಳು ಮತ್ತು ಸೌಂದರ್ಯವರ್ಧಕ ನಿಯಮಗಳು 1945 ರ ನಿಯಮ 170 ಅನ್ನು ತೆಗೆದುಹಾಕಲು ಅಧಿಸೂಚನೆಯನ್ನು ಹೊರಡಿಸಿತ್ತು.ಮಾಧ್ಯಮ ವರದಿಗಳು ನಿಯಮ 170 ರ ಅಡಿಯಲ್ಲಿ, ಕಂಪನಿಗಳು ಆಯುರ್ವೇದ, ಸಿದ್ಧ ಅಥವಾ ಯುನಾನಿ ಔಷಧಿಗಳನ್ನು ಜಾಹೀರಾತು ಮಾಡಲು ರಾಜ್ಯ ಪರವಾನಗಿ ಅಧಿಕಾರಿಗಳಿಂದ ಅನುಮತಿ ಪಡೆಯುವುದು ಅಗತ್ಯವಾಗಿತ್ತು ಎಂದು ಹೇಳಿವೆ.
ನ್ಯಾಯಾಂಗ ನಿಂದನೆ ಕೈಬಿಟ್ಟಿರುವ ಸುಪ್ರೀಂಕೋರ್ಟ್, ಒಂದು ವೇಳೆ ಆದೇಶ ಉಲ್ಲಂಘಿಸಿ ಯಾವುದೇ ನಿರ್ಧಾರ ಕೈಗೊಂಡರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ. ನ್ಯಾಯಾಂಗ ನಿಂದನೆ ಕುರಿತು ಮೇ 14ರಂದು ಸುಪ್ರೀಂಕೋರ್ಟ್ ಪೀಠದ ಜಸ್ಟೀಸ್ ಹಿಮಾ ಕೊಹ್ಲಿ ಮತ್ತು ಜಸ್ಟೀಸ್ ಅಸಾದುದ್ದೀನ್ ಅಮಾನುಲ್ಲಾ ಆದೇಶವನ್ನು ಕಾಯ್ದಿರಿಸಿದ್ದರು. ಆಧುನಿಕ ವೈದ್ಯ ಪದ್ಧತಿ ಮತ್ತು ಕೋವಿಡ್ ಲಸಿಕೆ ವಿರುದ್ಧ ಪತಂಜಲಿ ಆಕ್ಷೇಪಾರ್ಹ ಪ್ರಚಾರ ಕೈಗೊಂಡಿತ್ತು. ಇದರ ವಿರುದ್ಧ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ (IMA) ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.
ಮತ್ತಷ್ಟು ಓದಿ: Patanjali-LIC: ಎಲ್ಐಸಿಗೆ ಭಾರೀ ನಷ್ಟ ತಂದಿತ್ತ ಟಾಟಾ, ಅಂಬಾನಿ; ಕೈಹಿಡಿದ ಪತಂಜಲಿ
ಈ ವಿಚಾರವನ್ನು ಆಗಸ್ಟ್ 2024 ರಲ್ಲಿ ನ್ಯಾಯಮೂರ್ತಿ ಹೇಮಾ ಕೊಹ್ಲಿ ಮತ್ತು ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರಿದ್ದ ಸುಪ್ರೀಂ ಕೋರ್ಟ್ ಪೀಠದ ಮುಂದೆ ಇಡಲಾಯಿತು. ಈ ಪೀಠವು ನಿಯಮ 170 ಅನ್ನು ತೆಗೆದುಹಾಕಲು ತಾತ್ಕಾಲಿಕ ತಡೆ ನೀಡಿತ್ತು. ಅದೇ ಸಮಯದಲ್ಲಿ, ಕೇಂದ್ರವು ಈಗಾಗಲೇ ತೆಗೆದುಹಾಕಿರುವ ನಿಯಮವನ್ನು ರಾಜ್ಯಗಳು ಹೇಗೆ ಜಾರಿಗೆ ತರಬಹುದು ಎಂಬ ಪ್ರಶ್ನೆಯನ್ನು ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಎತ್ತಿದ್ದರು.
ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಸೂಚಿಸಿದರು ಮತ್ತು ಕೇಂದ್ರವು ಯಾವುದೇ ನಿಬಂಧನೆಯನ್ನು ತೆಗೆದುಹಾಕಿದ ನಂತರ ಅದನ್ನು ಮರುಸ್ಥಾಪಿಸುವ ಹಕ್ಕನ್ನು ನ್ಯಾಯಾಲಯ ಹೊಂದಿಲ್ಲ ಎಂದು ಹೇಳಿದರು.
2023ರ ನವೆಂಬರ್ ನಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಬಾಬಾ ರಾಮ್ ದೇವ್ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು. ಅಲ್ಲದೇ ಇಂತಹ ಜಾಹೀರಾತು ನೀಡುವುದನ್ನು ನಿಲ್ಲಿಸುವುದಾಗಿ ಭರವಸೆ ನೀಡಿದ್ದರು.ಆದರೆ ಪತಂಜಲಿ ಸಂಸ್ಥೆ ಫೆಬ್ರವರಿಯಲ್ಲಿ ಹಾದಿತಪ್ಪಿಸುವ ಜಾಹೀರಾತು ನೀಡುವುದನ್ನು ಮುಂದುವರಿಸಿರುವುದನ್ನು ಗಮನಿಸಿ ಪತಂಜಲಿ ಕಂಪನಿ ಮತ್ತು ಆಡಳಿತ ನಿರ್ದೇಶಕ ಬಾಲಕೃಷ್ಣ ವಿರುದ್ಧ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:23 am, Wed, 13 August 25