ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್​ಗೆ ಕೊವಿಡ್ ಸೋಂಕು

|

Updated on: May 12, 2021 | 6:36 PM

Supreme Court Justice DY Chandrachud: ದೇಶದಲ್ಲಿ ಕೊವಿಡ್ ಸೋಂಕು ನಿರ್ವಹಣೆಯ ಕುರಿತು ಸುಪ್ರೀಂಕೋರ್ಟ್ ದಾಖಲಿಸಿಕೊಂಡಿದ್ದ ಸ್ವಯಂ ಪ್ರೇರಿತ ಅರ್ಜಿಯ ವಿಚಾರಣೆಯನ್ನು ಅವರು ನಾಳೆ ನಡೆಸಬೇಕಿತ್ತು.

ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್​ಗೆ ಕೊವಿಡ್ ಸೋಂಕು
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಡಿವೈ ಚಂದ್ರಚೂಡ್
Follow us on

ದೆಹಲಿ: ಸುಪ್ರೀಂಕೋರ್ಟ್​ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್​ ಅವರಿಗೆ ಕೊವಿಡ್  ಸೋಂಕು ತಗುಲಿರುವುದು ಖಚಿತವಾಗಿದೆ. ಈ ಮುನ್ನವೇ ನ್ಯಾಯಾಧೀಶ ಚಂದ್ರಚೂಡ್ ಅವರ ಸಿಬ್ಬಂದಿಯೋರ್ವರಿಗೂ ಕೊವಿಡ್ ಪತ್ತೆಯಾಗಿತ್ತು. ದೇಶದಲ್ಲಿ ಕೊವಿಡ್ ಸೋಂಕು ನಿರ್ವಹಣೆಯ ಕುರಿತು ಸುಪ್ರೀಂಕೋರ್ಟ್ ದಾಖಲಿಸಿಕೊಂಡಿದ್ದ ಸ್ವಯಂ ಪ್ರೇರಿತ ಅರ್ಜಿಯ ವಿಚಾರಣೆಯನ್ನು ಅವರು ನಾಳೆ ನಡೆಸಬೇಕಿತ್ತು.

ಈ ಮುನ್ನ ವರ್ಚುವಲ್ ಕಾನ್ಫರೆನ್ಸ್ ನಿಭಾಯಿಸುವ ಕಂಟ್ರೋಲ್ ರೂಮ್ ಸರ್ವರ್ ತಾಂತ್ರಿಕ ತೊಂದರೆಗಳನ್ನು ಸರಿಪಡಿಸಿದ್ದ ನಂತರ ನ್ಯಾಯಾಲಯವು ದೇಶದಲ್ಲಿ ಕೊವಿಡ್ ನಿರ್ವಹಣೆ ಕುರಿತ ಸ್ವಯಂ ಪ್ರೇರಿತವಾಗಿ ದಾಖಲು ಮಾಡಿಕೊಂಡಿದ್ದ ಪ್ರಕರಣವನ್ನು ಮೇ 13 ಕ್ಕೆ ಮುಂದೂಡಿತ್ತು.

ಈ ಹಂತದಲ್ಲಿ ಕೊವಿಡ್ ಲಸಿಕೆಗಳು ಮತ್ತು ಔಷಧಿಗಳ ಮೇಲೆ ಕಡ್ಡಾಯ ಪರವಾನಗಿ ಅಥವಾ ಸರ್ಕಾರದ ಅನುಮತಿಯಂತಹ ಪೇಟೆಂಟ್ ಕಾಯ್ದೆಯಡಿ ಅಧಿಕಾರವನ್ನು ಚಲಾಯಿಸುವುದಕ್ಕೆ ಸಮ್ಮತಿ ಇಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಲಸಿಕೆ ಮತ್ತು ಔಷಧಿಗಳ ಖರೀದಿಗಾಗಿ ಇತರ ರಾಷ್ಟ್ರಗಳೊಂದಿಗೆ ರಾಜತಾಂತ್ರಿಕ ಮಟ್ಟದ ಮಾತುಕತೆಗಳಲ್ಲಿ ತೊಡಗಿದೆ ಎಂದು ಕೇಂದ್ರ ಸರ್ಕಾರವು ಉನ್ನತ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್​ನಲ್ಲಿ ತಿಳಿಸಿತ್ತು.

ಕೊವಿಡ್ ಔಷಧಗಳು ಮತ್ತು ಮದ್ದುಗಳ ಮೇಲೆ ಪೇಟೆಂಟ್ ಕಾಯ್ದೆಯಡಿ ಅಧಿಕಾರವನ್ನು ಬಳಸುವುದರ ಕುರಿತು ಸುಪ್ರೀಂ ಕೋರ್ಟ್ ಮಾಡಿದ ಪ್ರಶ್ನೆಗಳಿಗೆ ಪ್ರತಿಕ್ರಿಯೆಯಾಗಿ ಕೇಂದ್ರ ಈ ರೀತಿ ಉತ್ತರಿಸಿತ್ತು.

ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ಎಲ್. ನಾಗೇಶ್ವರ ರಾವ್ ಮತ್ತು ಎಸ್. ರವೀಂದ್ರ ಭಟ್ ಅವರನ್ನೊಳಗೊಂಡ ನ್ಯಾಯಪೀಠವು ಪೇಟೆಂಟ್ ಕಾಯ್ದೆಯ ಸೆಕ್ಷನ್ 92 ಮತ್ತು 100 ರ ಅಡಿಯಲ್ಲಿ ಅಧಿಕಾರಗಳನ್ನು ಬಳಸಿಕೊಂಡು ಕಡ್ಡಾಯ ಪರವಾನಗಿ ಮತ್ತು ಸರ್ಕಾರದ ಅಧಿಕಾರ ಮುಂತಾದ ಆಯ್ಕೆಗಳನ್ನು ಏಕೆ ಪರಿಗಣಿಸುತ್ತಿಲ್ಲ ಎಂದು ಕೇಂದ್ರವನ್ನು ಕೇಳಿತ್ತು.

ರೆಮ್​ಡೆಸಿವರ್, ಟೋಲಿಸಿಜುಮಾಬ್ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಜೆನೆರಿಕ್ ಔಷಧಿಗಳ ತಯಾರಿಕೆಯನ್ನು ಸಕ್ರಿಯಗೊಳಿಸಲು ಪೇಟೆಂಟ್ ಕಾಯ್ದೆಯ ಸೆಕ್ಷನ್ 92 ಅಥವಾ ಸೆಕ್ಷನ್ 100 ರ ಆಹ್ವಾನ ಕುರಿತು ನ್ಯಾಯಪೀಠ ಕೇಳಿದೆ. ಪೇಟೆಂಟ್ ಕಾಯ್ದೆಯಡಿ ಶಾಸನಬದ್ಧ ಅಧಿಕಾರಗಳು ಈ ಹಂತದಲ್ಲಿ ಪ್ರತಿ-ಉತ್ಪಾದನೆಯಾಗುತ್ತದೆ.

ಇದನ್ನೂ ಓದಿ: ಸಂಸದ ತೇಜಸ್ವಿ ಸೂರ್ಯ ಮತ್ತಿತರರ ವಿರುದ್ಧದ ಪಿಐಎಲ್ ರಾಜಕೀಯ ಪ್ರೇರಿತವಾದದ್ದು; ವಿಚಾರಣೆಗೆ ನಿರಾಕರಿಸಿದ ಹೈಕೋರ್ಟ್

ಏರ್ ಫೋರ್ಸ್​ನಿಂದ 100 ಕೋವಿಡ್ ಬೆಡ್ ಒದಗಿಸಲಾಗಿದೆ, ಆದರೆ ಅದನ್ನೇಕೆ ಬಳಸಿಲ್ಲ; ಬಿಬಿಎಂಪಿಗೆ ಹೈಕೋರ್ಟ್ ತರಾಟೆ
(Supreme Court Justice DY Chandrachud tested covid positive)