ದೆಹಲಿ: ಕೊನೆಗೂ ಸುಪ್ರೀಂಕೋರ್ಟ್ ವಲಸೆ ಕಾರ್ಮಿಕರ ಕಷ್ಟಕ್ಕೆ ಮಿಡಿದಿದೆ. ಕೊರೊನಾ ಕ್ರಮಿಯ ಅಟ್ಟಹಾದ ನಡುವೆ ವಲಸೆ ಕಾರ್ಮಿಕರ ಸಂಕಷ್ಟದ ಹಿನ್ನೆಲೆ ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ. ಇತ್ತೀಚೆಗೆ ದೇಶಾದ್ಯಂತ ಕಡುಕಷ್ಟ ಪಡುತ್ತಿದ್ದ ವಲಸೆ ಕಾರ್ಮಿಕರ ಬಗ್ಗೆ ಸುಪ್ರೀಂಕೋರ್ಟ್ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿತ್ತು.
ಕಾರ್ಮಿಕರ ಸಂಚಾರಕ್ಕೆ ಸಂಪೂರ್ಣ ಉಚಿತ ವ್ಯವಸ್ಥೆ ಮಾಡಬೇಕು. ಬಸ್, ರೈಲುಗಳಲ್ಲಿ ಸಂಪೂರ್ಣ ಉಚಿತ ಪ್ರಯಾಣಕ್ಕೆ ಅವಕಾಶ ನೀಡಬೇಕು. ಪ್ರಯಾಣದ ವೇಳೆ ಉಚಿತ ಊಟ, ನೀರಿನ ವ್ಯವಸ್ಥೆ ಮಾಡಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
Supreme Court said that no bus/train fare shall be charged from migrant workers. They should be provided with food by the state; railways to provide food and water on trains.
— ANI (@ANI) May 28, 2020
Published On - 4:19 pm, Thu, 28 May 20