ಜೂನ್ 1ರಿಂದ ಜಾರಿಯಾಗುತ್ತಾ 5ನೇ ಹಂತದ ಲಾಕ್‌ಡೌನ್?
ದೆಹಲಿ: ಇವತ್ತು, ನಾಳೆ, ನಾಡಿದ್ದು ಅಷ್ಟೇ. ಲಾಕ್‌ಡೌನ್ 4.O ಮುಗಿದು ಹೋಗಲಿದೆ. ಹಾಗಾದ್ರೆ ಸೋಮವಾರದಿಂದ ಏನು? ಈ ಪ್ರಶ್ನೆ ಎಲ್ಲರನ್ನೂ ಕಾಡತೊಡಗಿದೆ. ಲಾಕ್‌ಡೌನ್ ಮಹಾಪರ್ವ ಇಲ್ಲಿಗೆ ಮುಗಿಯುತ್ತಾ, ಇಲ್ಲ ಮತ್ತೆ ಲಾಕ್‌ಡೌನ್ ರೂಲ್ಸ್ ಮುಂದುವರಿಯುತ್ತಾ ಅನ್ನೋ ಡೌಟ್ ಎಲ್ಲರಲ್ಲೂ ಎದುರಾಗಿದೆ. ನಿಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಡೆಡ್ಲಿ ಕೊರೊನಾ ಅದ್ಯಾವಾಗ ದೇಶಕ್ಕೆ ಎಂಟ್ರಿ ಕೊಡ್ತೋ, ಅಂದಿನಿಂದ್ಲೂ ದೇಶದ ಜನತೆಗೆ ನೆಮ್ಮದಿಯೇ ಇಲ್ಲ. ಎಲ್ಲಿ ನೋಡಿದರೂ ಆತಂಕ, ಎಲ್ಲಿ ನೋಡಿದರೂ ಭಯದ ವಾತಾವರಣ. ಬಿಂದಾಸ್ ಆಗಿ ಓಡಾಡಿಕೊಂಡಿದ್ದವರಿಗೂ ಕೊರೊನಾ […]
ದೆಹಲಿ: ಇವತ್ತು, ನಾಳೆ, ನಾಡಿದ್ದು ಅಷ್ಟೇ. ಲಾಕ್‌ಡೌನ್ 4.O ಮುಗಿದು ಹೋಗಲಿದೆ. ಹಾಗಾದ್ರೆ ಸೋಮವಾರದಿಂದ ಏನು? ಈ ಪ್ರಶ್ನೆ ಎಲ್ಲರನ್ನೂ ಕಾಡತೊಡಗಿದೆ. ಲಾಕ್‌ಡೌನ್ ಮಹಾಪರ್ವ ಇಲ್ಲಿಗೆ ಮುಗಿಯುತ್ತಾ, ಇಲ್ಲ ಮತ್ತೆ ಲಾಕ್‌ಡೌನ್ ರೂಲ್ಸ್ ಮುಂದುವರಿಯುತ್ತಾ ಅನ್ನೋ ಡೌಟ್ ಎಲ್ಲರಲ್ಲೂ ಎದುರಾಗಿದೆ. ನಿಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಡೆಡ್ಲಿ ಕೊರೊನಾ ಅದ್ಯಾವಾಗ ದೇಶಕ್ಕೆ ಎಂಟ್ರಿ ಕೊಡ್ತೋ, ಅಂದಿನಿಂದ್ಲೂ ದೇಶದ ಜನತೆಗೆ ನೆಮ್ಮದಿಯೇ ಇಲ್ಲ. ಎಲ್ಲಿ ನೋಡಿದರೂ ಆತಂಕ, ಎಲ್ಲಿ ನೋಡಿದರೂ ಭಯದ ವಾತಾವರಣ. ಬಿಂದಾಸ್ ಆಗಿ ಓಡಾಡಿಕೊಂಡಿದ್ದವರಿಗೂ ಕೊರೊನಾ ಭಯ ಹುಟ್ಟಿಸಿದೆ. ಈ ಹೊತ್ತಲ್ಲೇ ಡೆಡ್ಲಿ ಕೊರೊನಾ ಸೋಂಕಿಗೆ ಅಂತ್ಯ ಹಾಡಲು ಕೇಂದ್ರ ಸರ್ಕಾರವೇನೋ ಲಾಕ್‌ಡೌನ್ ಘೋಷಣೆ ಮಾಡಿತ್ತು. ಹೀಗೆ ಒಟ್ಟು 4 ಬಾರಿ ಲಾಕ್‌ಡೌನ್ ವಿಸ್ತರಣೆ ಕಂಡಿರುವ ಭಾರತೀಯರಿಗೆ 5ನೇ ಲಾಕ್ಡೌನ್ಗೂ ಸಜ್ಜಾಗುವ ಕಾಲ ಬಂದಿದೆ.
ಜೂನ್ 1ರಿಂದ 5ನೇ ಹಂತದ ಲಾಕ್‌ಡೌನ್? ಬಸ್ಗಳು ರೋಡಿಗಿಳಿದಿವೆ. ರೈಲು ಓಡಲು ಸಜ್ಜಾಗಿದ್ದರೆ ಕೈಗಾರಿಕೆಗಳಲ್ಲಿ ಕಂಡೀಷನ್ ಮೇಲೆ ಕೆಲಸ ನಡೀತಿದೆ. ಇನ್ನು ಸರ್ಕಾರಿ ಕಚೇರಿ, ಖಾಸಗಿ ಸಂಸ್ಥೆಗಳು ಸ್ಟಾರ್ಟ್ ಆಗಿವೆ. ಕೊರೊನಾ ಭೀತಿ ಮಧ್ಯೆಯೂ ಬದುಕು ಕಟ್ಟಿಕೊಳ್ಳೋ ಕೆಲಸ ನಡೀತಿದೆ. ಆದ್ರೆ ದೇಶದಲ್ಲಿ ಕೊರೊನಾ ಅಟ್ಟಹಾಸಕ್ಕೆ ಬ್ರೇಕ್ ಬಿದ್ದಿಲ್ಲ. ಏನೇ ಮಾಡಿದರೂ ಹೆಮ್ಮಾರಿಗೆ ಅಂತ್ಯ ಹಾಡಲು ಆಗಿಲ್ಲ. ಹೀಗಾಗಿ ದೇಶದಲ್ಲಿ ಮತ್ತೆ ಲಾಕ್‌ಡೌನ್ ಆಗುತ್ತಾ ಅನ್ನೋ ಪ್ರಶ್ನೆ ಎದ್ದಿದೆ. ಅದೆಲ್ಲಕ್ಕಿಂತಲೂ ಹೆಚ್ಚಾಗಿ ಜೂನ್ 1ರಿಂದ 5ನೇ ಹಂತದ ಲಾಕ್‌ಡೌನ್ ಜಾರಿಯಾಗುತ್ತಾ ಅನ್ನೋ ಪ್ರಶ್ನೆಗೆ ಉತ್ತರ ನಿಗೂಢವಾಗಿದೆ.
ಹೊಸ ಲಾಕ್ಡೌನ್ಗೆ ಪ್ರಧಾನಿ ಮೋದಿ ಪ್ಲ್ಯಾನ್? ಈಗೇನೆ ಫ್ರೀಡೌನ್ ಆದ್ರೂ ದೇಶದಲ್ಲಿ ಕಂಪ್ಲೀಟ್ ಲಾಕ್‌ಡೌನ್ ಓಪನ್ ಮಾಡುವ ಕೀಲಿ ಕೈ ಪಿಎಂ ಮೋದಿ ಕೈಯಲ್ಲೇ ಇದೆ. ಈ ಹಿನ್ನೆಲೆಯಲ್ಲಿ ಕೇಂದ್ರದ ಸಿದ್ಧತೆಗಳನ್ನ ನೋಡಿದ್ರೆ, ಮೋದಿ ಮಾಡಿದ್ದಾರೆ ಎನ್ನಲಾಗಿರೋ ಪ್ಲ್ಯಾನ್ಗಳನ್ನ ಅವಲೋಕಿಸಿದ್ರೆ, ಜೂನ್ 1 ರಿಂದ ಮತ್ತೆ ಲಾಕ್‌ಡೌನ್ ಜಾರಿಗೆ ಬರೋದು ಫಿಕ್ಸ್ ಅಂತಾನೇ ಹೇಳಲಾಗುತ್ತಿದೆ. ಆದ್ರೆ, ಈ ಬಾರಿ ಮೋದಿ ಮಾಡಿರೋ ಪ್ಲ್ಯಾನ್ ತುಂಬಾ ವಿಭಿನ್ನವಾಗಿದೆ.
ದೇಶದ 11 ಕೊರೊನಾ ನಗರಗಳ ಮೇಲೆ ಮೋದಿ ಕಣ್ಣು! ಈಗಾಗಲೇ, ಬಹುತೇಕ ವಿನಾಯಿತಿ ಕೊಟ್ಟಿರುವ ಕೇಂದ್ರ ಸರ್ಕಾರ ಐದನೇ ಅವಧಿಯಲ್ಲೂ ಲಾಕ್‌ಡೌನ್‌ನಲ್ಲಿ ಮತ್ತಷ್ಟು ವಿನಾಯಿತಿ ನೀಡಲಿದೆ. ಆದ್ರೆ, ಬೆಂಗಳೂರು ಸೇರಿದಂತೆ ದೇಶದ 11 ನಗರಗಳಲ್ಲಿ ಕಟ್ಟು ನಿಟ್ಟಿನ ಲಾಕ್‌ಡೌನ್ ಮಾಡಲು ಕೇಂದ್ರ ಪ್ಲ್ಯಾನ್ ಮಾಡಿದೆ.
ಮೋದಿ 5.O ಸೂತ್ರ! ದೇಶದ 11ಮಹಾನಗರಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಸೂತ್ರ ಹೆಣೆಯಲು ಕೇಂದ್ರ ಪ್ಲ್ಯಾನ್ ಮಾಡ್ತಿದೆ. 11ನಗರಗಳಲ್ಲಿ ಶೇಕಡ 70ರಷ್ಟು ಕೊರೊನಾ ಕೇಸ್‌ಗಳಿದ್ದು ಅಲ್ಲಿ ಮಾತ್ರ ಲಾಕ್‌ಡೌನ್ ಮುಂದುವರೆಸೋ ಸಾಧ್ಯತೆಯಿದೆ. ದೆಹಲಿ, ಮುಂಬೈ, ಬೆಂಗಳೂರು, ಪುಣೆ, ಥಾಣೆ, ಇಂದೋರ್, ಚೆನ್ನೈ, ಅಹಮದಾಬಾದ್, ಜೈಪುರ, ಸೂರತ್, ಕೋಲ್ಕತ್ತಾದಲ್ಲಿ ಮಾತ್ರ ಲಾಕ್‌ಡೌನ್ ಮುಂದುವರೆಸೋ ಸಾಧ್ಯತೆಯಿದೆ. ಆದರೆ ಈ ಪೈಕಿ 5 ನಗರಗಳಲ್ಲಿ ಶೇಕಡ 60ರಷ್ಟು ಕೇಸ್‌ಗಳಿರೋ ಅಹಮದಾಬಾದ್, ಮುಂಬೈ, ದೆಹಲಿ, ಪುಣೆ ಕೋಲ್ಕತ್ತಾದಲ್ಲಿ ಕಟ್ಟುನಿಟ್ಟಿನ ನಿಯಮ ಮುಂದುವರಿಸೋ ಸಾಧ್ಯತೆಯಿದ್ದು, ಉಳಿದೆಡೆ ಮತ್ತಷ್ಟು ವಿನಾಯಿತಿಸಿ ಸಿಗೋ ಸಾಧ್ಯತೆ ಇದೆ ಎನ್ನಲಾಗಿದೆ.
ರಾಜ್ಯಗಳ ಹೆಗಲಿಗೆ ಮಾರ್ಗಸೂಚಿ ಸಿದ್ಧತೆ ಹೊಣೆ! ಸದ್ಯ ಕಂಟೇನ್ಮೆಂಟ್ ಜೋನ್ ಗುರುತಿಸೋ ಹೊಣೆ ಆಯಾ ರಾಜ್ಯದ ಜಿಲ್ಲಾಡಳಿತಕ್ಕೆ ಸಿಕ್ಕಿದೆ. ಹೀಗಾಗಿಯೇ ರಾಜ್ಯದಲ್ಲಿ ಲಾಕ್‌ಡೌನ್ ನಿಯಮ ಹೇಗಿರಬೇಕು ಅನ್ನೋ ಮಾರ್ಗಸೂಚಿಯನ್ನ ಆಯಾ ರಾಜ್ಯ ಸರ್ಕಾರಕ್ಕೆ ನೀಡೋ ಸಾಧ್ಯತೆ ಇದೆ. ಅಲ್ಲದೆ, ಮುಂದಿನ ಲಾಕ್‌ಡೌನ್ ಪ್ಲ್ಯಾನಿಂಗ್ ಕುರಿತು ಮೇ 30ರೊಳಗೆ ವರದಿ ನೀಡುವಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ರಾಜ್ಯಗಳು ಸಲ್ಲಿಸುವ ವರದಿ ಆಧರಿಸಿ ಕೇಂದ್ರ ಗೃಹ ಇಲಾಖೆ ಮುಂದಿನ ನಿರ್ಧಾರ ಮಾಡಲಿದೆ. ಹೀಗೆ ಸದ್ಯ ಬಂದ್ ಆದ ಯಾವ ವಲಯಕ್ಕೆ ರಿಲೀಫ್ ಸಿಗುತ್ತೆ ಅನ್ನೋದಾದ್ರೆ.
ಲಾಕ್‌ಡೌನ್ 5.O ಪ್ಲ್ಯಾನ್! ಕೊರೊನಾ ದೇಶದಲ್ಲಿ ವ್ಯಾಪಕವಾಗಿ ಹಬ್ಬುತ್ತಿರೋದ್ರಿಂದ ದೇಶದಲ್ಲಿರೋ ಕಂಟೇನ್ಮೆಂಟ್ ಜೋನ್ಗಳಲ್ಲಿ ಕಟ್ಟುನಿಟ್ಟಿನ ಕ್ರಮ ಮುಂದುವರಿಯುತ್ತೆ. ಕಂಟೇನ್ಮೆಂಟ್ ಜೋನ್ ಪ್ರದೇಶಗಳನ್ನ ಹೊರತು ಪಡಿಸಿ ಉಳಿದ ಪ್ರದೇಶಗಳಲ್ಲಿ ಈಗಾಗಲೇ ಬಹುತೇಕ ಲಾಕ್‌ಡೌನ್ ರಿಲೀಫ್ ಸಿಕ್ಕಿದೆ. ಇನ್ನು, ಲಾಕ್‌ಡೌನ್ 4.O ನಲ್ಲಿ ದೇವಸ್ಥಾನ, ಮಸೀದಿ, ಚರ್ಚ್ಗಳನ್ನ ತೆರೆಯಲು ಕೇಂದ್ರ ಸರ್ಕಾರ ಒಂದಷ್ಟು ಕಂಡೀಷನ್ ಹಾಕೋ ಸಾಧ್ಯತೆಯೂ ಇದೆ. ಹಾಗೇ ತಿಂಗಳು ಗಟ್ಟಲೇ ಬಂದ್ ಆಗಿರೋ ಶಾಲಾ-ಕಾಲೇಜಗಳನ್ನು ತೆರೆದ್ರೂ ಕೇಂದ್ರ ನೀಡೋ ರೂಲ್ಸ್ ಫಾಲೋ ಮಾಡಲು ಆದೇಶ ಕೊಡಲಿದೆ. ಇನ್ನು ಮಾಲ್, ಥಿಯೇಟರ್, ಮೆಟ್ರೋ ಸಂಚಾರಕ್ಕೆ ವಿನಾಯಿತಿ ನೀಡಿದ್ರೂ, ಸ್ಯಾನಿಟೈಜೇಷನ್, ಮಾಸ್ಕ್ ಕಡ್ಡಾಯಗಳಂಥ ಎಚ್ಚರಿಕೆಯ ಹೆಜ್ಜೆ ಇಡಲಿದೆ ಎನ್ನಲಾಗಿದೆ.
ಕೇಂದ್ರ ಆರೋಗ್ಯ ಇಲಾಖೆ ಹಿಟ್ಲಿಸ್ಟ್ನಲ್ಲಿ ಬೆಂಗಳೂರು ಸೇರಿಕೊಂಡಿದ್ದು, 5ನೇ ಅವಧಿಯ ಲಾಕ್‌ಡೌನ್‌ನಲ್ಲಿ ಬೆಂಗಳೂರಿನ ಕಂಟೇನ್ಮೆಂಟ್ ಜೋನ್ ನಿರ್ವಹಣೆ ಕೇಂದ್ರದ ನಿಯಮಗಳನ್ನು ಆಧರಿಸಲಿದೆ. ಹೀಗೆ ಪ್ರಧಾನಿ ಮೋದಿ ಬತ್ತಳಿಕೆಯಲ್ಲಿ ಲಾಕ್‌ಡೌನ್ ಬಗ್ಗೆ ಸಾಕಷ್ಟು ಲೆಕ್ಕಾಚಾರಗಳಿವೆ. ಕೇಂದ್ರ, ಗೃಹ ಇಲಾಖೆ ಇನ್ನೇರಡು ದಿನಗಳಲ್ಲಿ ಅಂತಿಮ ಮಾರ್ಗಸೂಚಿಗಳನ್ನು ಸಿದ್ದಪಡಿಸಲಿದ್ದು, ಯಾವುದಕ್ಕೂ 5ನೇ ಹಂತದ ಲಾಕ್ಡೌನ್ಗೆ ಸಿದ್ದವಾಗಬೇಕಿದೆ.
Published On - 6:44 am, Fri, 29 May 20