ದೆಹಲಿ, ಅ.16: 26 ವಾರಗಳ ಗರ್ಭಾವಸ್ಥೆಯಲ್ಲಿರುವ ಮಹಿಳೆಗೆ ಗರ್ಭಪಾತ ಮಾಡಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಕೇಂದ್ರ ಸರ್ಕಾರ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ, ನಾವು ಯಾವುದೇ ಮಗುವನ್ನು ಕೊಲ್ಲಲು ಸಾಧ್ಯವಿಲ್ಲ ಎಂದು ಈ ಹಿಂದಿನ ವಿಚಾರಣೆ ವೇಳೆಯಲ್ಲೂ ಹೇಳಿತ್ತು. ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ ನೇತೃತ್ವದಲ್ಲಿ ಈ ವಿಚಾರಣೆಯನ್ನು ನಡೆಸಲಾಗಿದೆ. ಮಹಿಳೆಯ ಜೀವಕ್ಕೆ ಯಾವುದೇ ಅಪಾಯವಿಲ್ಲದ ಕಾರಣ 26 ವಾರಗಳ ಗರ್ಭಾವಸ್ಥೆಯಲ್ಲಿರುವ ಮಹಿಳೆಗೆ ಗರ್ಭಪಾತ ಮಾಡಿಸುವ ಕ್ರಮವನ್ನು ಸುಪ್ರೀಂ ಕೋರ್ಟ್ ನಿರಕಾರಿಸಿದೆ.
ಒಂದು ವೇಳೆ ತಾಯಿಗೆ ಮಗುವಿನ ಅಗತ್ಯವಿಲ್ಲ ಅಥವಾ ಇಷ್ಟವಿಲ್ಲವೆಂದರೆ ಮಗುವನ್ನು ತಾಯಿ ದತ್ತು ನೀಡಬಹುದು ಎಂದು ಪೀಠವು ಹೇಳಿದೆ. ಗರ್ಭಧಾರಣೆಯು 26 ವಾರಗಳು ಮತ್ತು 5 ದಿನ, ಈ ಸಮಯದಲ್ಲಿ ಗರ್ಭಪಾತ ಮಾಡಿಸಿಕೊಳ್ಳುವುದು ಗರ್ಭಾವಸ್ಥೆಯ ವೈದ್ಯಕೀಯ ಮುಕ್ತಾಯ ಕಾಯಿದೆ (Medical Termination of Pregnancy Act) ಸೆಕ್ಷನ್ 3 ಮತ್ತು 5 ಉಲ್ಲಂಘಿಸಿದಂತೆ, ಈ ಕಾರಣದಿಂದ ತಾಯಿ ತಕ್ಷಣದ ನಿರ್ಧಾರ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದೆ.
26 ವಾರಗಳ ಗರ್ಭಾವಸ್ಥೆಯಲ್ಲಿರುವ ಮಹಿಳೆಯ ಎಲ್ಲ ಖರ್ಚುಗಳನ್ನು ಆಯಾಯ ರಾಜ್ಯ ಸರ್ಕಾರವೇ ಭರಿಸಬೇಕು ಎಂದು ನಿರ್ದೇಶನ ನೀಡಿದೆ. ಅರ್ಜಿದಾರೊಬ್ಬರು ಎರಡು ಮಕ್ಕಳನ್ನು ಪಡೆದ ತಾಯಿಗೆ ಮೂರನೇ ಮಗುವಿಗೆ ಗರ್ಭ ಧರಿಸಿದಾಗ ಮಾನಸಿಕವಾಗಿ ಮತ್ತು ದೈಹಿಕವಾಗಿ ಕುಗ್ಗುವ ಕಾರಣ ಆಕೆಗೆ ಗರ್ಭಪಾತ ಮಾಡಿಸಲು ಅವಕಾಶ ನೀಡಬೇಕು ಎಂದು ಹೇಳಿದರು. ಆದರೆ ಈ ಹಿಂದೆ ಈ ಬಗ್ಗೆ ಏಮ್ಸ್ ಆಸ್ಪತ್ರೆಗೆ ವರದಿಯನ್ನು ಕೇಳಿದ್ದ ಸುಪ್ರೀಂ. ಇದೀಗ ಈ ವೈದ್ಯಕೀಯ ವರದಿ ಪ್ರಕಾರ ಸುಪ್ರೀಂ ಈ ಆದೇಶವನ್ನು ನೀಡಿದೆ.
ಇದನ್ನೂ ಓದಿ: ‘ಮಗುವನ್ನು ಕೊಲ್ಲಲು ಸಾಧ್ಯವಿಲ್ಲ’: ಗರ್ಭಪಾತ ಪ್ರಕರಣ ವಿಚಾರಣೆ ವೇಳೆ ಸುಪ್ರೀಂಕೋರ್ಟ್
ಏಮ್ಸ್ ಆಸ್ಪತ್ರೆ ನೀಡಿದ ವರದಿ ಪ್ರಕಾರ ಮಹಿಳೆ ಗರ್ಭಾವಸ್ಥೆಯಲ್ಲಿ ಮುಂದುವರಿದರೆ ಯಾವುದೇ ಸಮಸ್ಯೆ ಇಲ್ಲ. ಆದರೆ ಇದರಿಂದ ಆಕೆಗೆ ಪೋಸ್ಟ್ ಪಾರ್ಟಮ್ ಸೈಕೋಸಿಸ್ (ಪ್ರಸವಾನಂತರದ ಮನೋರೋಗ) ಉಂಟಾಗುತ್ತದೆ. ಇದಕ್ಕೆ ವೈದ್ಯರು ಸೂಚಿಸಿದ ಸರಿಯಾದ ಚಿಕಿತ್ಸೆ ಮತ್ತು ಔಷಧಿಯನ್ನು ತೆಗೆದುಕೊಂಡರೆ ಮಗುವಿನಗೆ ಅಥವಾ ತಾಯಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:30 pm, Mon, 16 October 23