ದೆಹಲಿ: ಭಾರತದ ರಾಷ್ಟ್ರಪತಿ (President of India) ಹುದ್ದೆಗೆ ನೇಮಕ ಮಾಡುವಂತೆ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ (Supreme Court) ಶುಕ್ರವಾರ ತಿರಸ್ಕರಿಸಿದ್ದು ಇನ್ನು ಮುಂದೆ ಈ ವಿಷಯದ ಕುರಿತು ಅವರ ಮುಂದಿನ ಅರ್ಜಿಯನ್ನು ಪರಿಗಣಿಸದಂತೆ ರಿಜಿಸ್ಟ್ರಿಗೆ ಸೂಚಿಸಿದೆ. ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಹಿಮಾ ಕೊಹ್ಲಿ ಅವರ ಪೀಠವು ಈ ಅರ್ಜಿಯು ಕ್ಷುಲ್ಲಕ, ಇದು ನ್ಯಾಯಾಲಯದ ಪ್ರಕ್ರಿಯೆಯ ದುರುಪಯೋಗವಾಗಿದೆ ಎಂದು ಹೇಳಿದೆ.ಈ ಅರ್ಜಿಯು ಕೀಳು ಅಭಿರುಚಿಯದ್ದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕಿಶೋರ್ ಜಗನ್ನಾಥ್ ಸಾವಂತ್ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯ, ಮುಂದಿನ ದಿನಗಳಲ್ಲಿ ಇದೇ ರೀತಿಯ ಸಮಸ್ಯೆಗಳ ಕುರಿತು ಅವರ ಮುಂದಿನ ಅರ್ಜಿಯನ್ನು ಪರಿಗಣಿಸದಂತೆ ರಿಜಿಸ್ಟ್ರಿಗೆ ನಿರ್ದೇಶಿಸಿದೆ. ಇತ್ತೀಚೆಗೆ ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿಲ್ಲ ಎಂದು ಅರ್ಜಿದಾರರಾದ ಜಗನ್ನಾಥ್ ಸಾವಂತ್ ಆರೋಪಿಸಿದ್ದಾರೆ. ಪರಿಸರವಾದಿ ಎಂದು ಹೇಳಿಕೊಳ್ಳುವ ಅವರು, ಪ್ರಪಂಚದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಕೆಲಸ ಮಾಡುವುದಾಗಿ ಹೇಳಿದರು.
ಅವರು ಪರಿಸರವಾದಿಯಾಗಿರುವುದರಿಂದ ಅವರ ವಿಶೇಷ ಜ್ಞಾನದ ಆಧಾರದ ಮೇಲೆ ಭಾಷಣ ಮಾಡಬಹುದು. ಆದರೆ ಆ ರೀತಿಯಲ್ಲಿ ಅರ್ಜಿಗಳನ್ನು ಸಲ್ಲಿಸುವುದು ಸರಿಯಲ್ಲ ಸುಪ್ರೀಂಕೋರ್ಟ್ ಹೇಳಿದೆ .