Watch ದೀಪಾವಳಿ ಹಬ್ಬದ ಶಾಪಿಂಗ್; ದೆಹಲಿ-ಗುರುಗ್ರಾಮ್ ಎಕ್ಸ್ಪ್ರೆಸ್ವೇಯಲ್ಲಿ ಸಂಚಾರ ದಟ್ಟಣೆ
ಸಂಚಾರ ದಟ್ಟಣೆಯನ್ನು ತಪ್ಪಿಸಲು, ದೆಹಲಿ ಮತ್ತು ಗುರುಗ್ರಾಮ್ ಟ್ರಾಫಿಕ್ ಪೊಲೀಸರು ಗೊತ್ತುಪಡಿಸಿದ ಪಾರ್ಕಿಂಗ್ ಸೈಟ್‌ಗಳನ್ನು ಮಾಡಿದ್ದು, ತಮ್ಮ ವಾಹನಗಳನ್ನು ಬೇರೆ ಯಾವುದೇ ಸ್ಥಳದಲ್ಲಿ
ದೆಹಲಿ: ದೀಪಾವಳಿ (Diwali) ಸಮೀಪಿಸುತ್ತಿರುವಂತೆಯೇ ದೆಹಲಿಯ ಜನರು ಹಬ್ಬದ ಶಾಪಿಂಗ್‌ಗಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ಇದರಿಂದ ನಗರದ ಹಲವೆಡೆ ಟ್ರಾಫಿಕ್ ಜಾಮ್ (Traffic Jam)ಉಂಟಾಗಿದೆ. ಅಂತಹ ಒಂದು ಬೃಹತ್ ಸಂಚಾರ ದಟ್ಟಣೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ದೆಹಲಿ-ಗುರುಗ್ರಾಮ್ ಎಕ್ಸ್‌ಪ್ರೆಸ್‌ವೇಯ ಸರ್ಹೌಲ್ ಗಡಿಯಲ್ಲಿ ಚಿತ್ರೀಕರಿಸಲಾದ ವೀಡಿಯೊ, ಟ್ರಾಫಿಕ್ ಜಾಮ್‌ನಲ್ಲಿ ಆಂಬ್ಯುಲೆನ್ಸ್ ಸಿಲುಕಿರುವುದನ್ನು ತೋರಿಸುತ್ತದೆ. ಸಂಚಾರ ದಟ್ಟಣೆಯನ್ನು ತಪ್ಪಿಸಲು, ದೆಹಲಿ ಮತ್ತು ಗುರುಗ್ರಾಮ್ ಟ್ರಾಫಿಕ್ ಪೊಲೀಸರು ಗೊತ್ತುಪಡಿಸಿದ ಪಾರ್ಕಿಂಗ್ ಸೈಟ್‌ಗಳನ್ನು ಮಾಡಿದ್ದು, ತಮ್ಮ ವಾಹನಗಳನ್ನು ಬೇರೆ ಯಾವುದೇ ಸ್ಥಳದಲ್ಲಿ ನಿಲ್ಲಿಸದಂತೆ ನಾಗರಿಕರನ್ನು ಒತ್ತಾಯಿಸಿದ್ದಾರೆ.
#WATCH | Massive traffic snarl on the Sarhaul border at Delhi-Gurugram expressway. pic.twitter.com/ULvrbxnCtB
— ANI (@ANI) October 21, 2022
ಗುರುಗ್ರಾಮದ ಗಡೋಲಿ ಗ್ರಾಮದ ಪಟಾಕಿ ಮಾರುಕಟ್ಟೆಯಲ್ಲಿ ಇಂದು ಭಾರೀ ಜನಜಂಗುಳಿ ಕಂಡುಬಂತು. ಜಿಲ್ಲೆಯ ಏಕೈಕ ಸಗಟು ಮಾರುಕಟ್ಟೆಯಲ್ಲಿ ಪಟಾಕಿಗಳನ್ನು ಮಾರಾಟ ಮಾಡುವ ಹಲವಾರು ಅಂಗಡಿಗಳಿವೆ. ರಾಷ್ಟ್ರ ರಾಜಧಾನಿಯಲ್ಲಿ ಪಟಾಕಿ ಮಾರಾಟವನ್ನು ನಿಷೇಧಿಸಿರುವುದರಿಂದ ದೆಹಲಿಯಿಂದಲೂ ಹಲವಾರು ಜನರು ಮಾರುಕಟ್ಟೆಗೆ ಬರುತ್ತಿದ್ದಾರೆ.
Published On - 7:28 pm, Fri, 21 October 22