Sign In

By signing in or creating an account, you agree with Associated Broadcasting Company's Terms & Conditions and Privacy Policy.

PM Modi Uttarakhand visit: ಕೇದಾರನಾಥಕ್ಕೆ ರೋಪ್ ವೇ! ದೇಶದ ಯುವಕರು ತಪ್ಪದೇ ದೇಗುಲಗಳಿಗೆ ಭೇಟಿ ನೀಡುವಂತೆ ಕಿವಿಮಾತು ಹೇಳಿದ ಪ್ರಧಾನಿ ಮೋದಿ

ಭಾರತ-ಚೀನಾ ಗಡಿಯ ಕೊನೆಯ ಗ್ರಾಮ ಮಾನಾದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಸ್ವಾತಂತ್ರ್ಯ ನಂತರವೂ ದೇಶವು ಗುಲಾಮಗಿರಿಯಲ್ಲಿ ಸಿಲುಕಿತ್ತು ಎಂಬುದನ್ನು ಒತ್ತಿ ಹೇಳಿದರು. ಯುವಕರು ತಪ್ಪದೇ ದೇಗುಲಗಳಿಗೆ ಭೇಟಿ ನೀಡುವಂತೆ ಕಿವಿಮಾತು ಹೇಳಿದರು.

PM Modi Uttarakhand visit: ಕೇದಾರನಾಥಕ್ಕೆ ರೋಪ್ ವೇ! ದೇಶದ ಯುವಕರು ತಪ್ಪದೇ ದೇಗುಲಗಳಿಗೆ ಭೇಟಿ ನೀಡುವಂತೆ ಕಿವಿಮಾತು ಹೇಳಿದ ಪ್ರಧಾನಿ ಮೋದಿ
ಕೇದಾರನಾಥಕ್ಕೆ ರೋಪ್ ವೇ! ದೇಶದ ಯುವಕರು ತಪ್ಪದೇ ದೇಗುಲಗಳಿಗೆ ಭೇಟಿ ನೀಡುವಂತೆ ಸಲಹೆ ನೀಡಿದ ಪ್ರಧಾನಿ ಮೋದಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Oct 21, 2022 | 6:35 PM

ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉತ್ತರಾಖಂಡಕ್ಕೆ ಭೇಟಿ ನೀಡಿದ್ದರು. ಪ್ರಧಾನಿ ಮೋದಿಯವರು ಚಾರ್​ ಧಾಮ್ ಯಾತ್ರೆಯಲ್ಲಿ ಬಿಡುವಿಲ್ಲದ ಸಮಯವನ್ನು ಕಳೆದರು. ಕೇದಾರನಾಥ ಮತ್ತು ಬದರಿನಾಥ ದೇವಾಲಯಗಳಿಗೆ ಭೇಟಿ ನೀಡಿದರು. ಕೇದಾರನಾಥದಲ್ಲಿ ಮೋದಿ ರುದ್ರಾಭಿಷೇಕ ಮಾಡಿದರು. ಭಾರತ-ಚೀನಾ ಗಡಿಯಲ್ಲಿರುವ ಕೊನೆಯ ಗ್ರಾಮವಾದ ಮಾನಾಗೆ ಪ್ರಧಾನಿ ಮೋದಿ ಭೇಟಿ ನೀಡಿದರು. ಬಳಿಕ ಸ್ಥಳೀಯರೊಂದಿಗೆ ಸಂವಾದ ನಡೆಸಿದರು. ಅಲ್ಲಿ ಆಯೋಜಿಸಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕೇದಾರನಾಥ ಮತ್ತು ಬದರಿನಾಥನ ದರ್ಶನದಿಂದ ಅವರ ಜೀವನ ಧನ್ಯವಾಗಿದೆ ಎಂದು ಹೇಳಿದರು.

ಮಾನಾ ಗ್ರಾಮವನ್ನು ಭಾರತದ ಕೊನೆಯ ಗ್ರಾಮ ಎಂದು ಕರೆಯಲಾಗುತ್ತದೆ. ಆದರೆ ನನಗೆ ಗಡಿಭಾಗದ ಪ್ರತಿಯೊಂದು ಹಳ್ಳಿಯೂ ದೇಶದ ಮೊದಲ ಗ್ರಾಮ. ಅಷ್ಟೇ ಅಲ್ಲ ಈ ಗ್ರಾಮ ದೇಶದ ಕಾವಲುಗಾರ ಎಂದು ಹೊಗಳಿದರು. ಬದರಿನಾಥ ಮತ್ತು ಕೇದಾರನಾಥ ಕ್ಷೇತ್ರಗಳನ್ನು ಶೀಘ್ರವಾಗಿ ಅಭಿವೃದ್ಧಿಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ದಶಕ ಉತ್ತರಾಖಂಡದ ದಶಕ ಎಂದು ಪ್ರಧಾನಿ ಮೋದಿ ಹೇಳಿದರು. ದೇಶದಿಂದ ಗುಲಾಮ ಮನೋಭಾವನೆ ಹೋಗಲಾಡಬೇಕಿದೆ ಎಂದರು. ಯುವಕರು ತಪ್ಪದೇ ದೇಗುಲಗಳಿಗೆ ಭೇಟಿ ನೀಡುವಂತೆ ಸಲಹೆ ನೀಡಿದರು (PM Modi Uttarakhand visit).

ಪಿಎಂ ಮೋದಿ ಅವರು ತಮ್ಮ ಸ್ಥಳೀಯ ರಾಜ್ಯಗಳ ಪ್ರಯೋಜನಗಳು ಮತ್ತು ಸರ್ಕಾರದ ಕಲ್ಯಾಣ ಯೋಜನೆಗಳ ಬಗ್ಗೆ ಕಾರ್ಮಿಕರಿಂದ ಮಾಹಿತಿ ಪಡೆದರು. ಕಾರ್ಮಿಕರ ಕೋವಿಡ್ ಲಸಿಕೆ ಸ್ಥಿತಿಯ ಬಗ್ಗೆಯೂ ಕೇಳಿತಿಳಿದುಕೊಂಡರು. ಸ್ವಾತಂತ್ರ್ಯದ ನಂತರವೂ ದೇಶವು ಗುಲಾಮಗಿರಿಯಿಂದ ಬಳಲುತ್ತಿದೆ ಮತ್ತು ಅದರ ಅಭಿವೃದ್ಧಿಯ ಬಗ್ಗೆ ದೀರ್ಘಕಾಲದಿಂದ ದ್ವೇಷಪೂರಿತ ಭಾವವಿದೆ ಎಂದು ಪ್ರಧಾನಿ ವಿಷಾದ ವ್ಯಕ್ತಪಡಿಸಿದರು. ನಮ್ಮ ಸಂಸ್ಕೃತಿಯ ಮೇಲಿನ ಕೀಳರಿಮೆಯೇ ಇದಕ್ಕೆ ಕಾರಣ. ಆದರೆ ಇವು ನಮ್ಮ ಪರಮ ನಂಬಿಕೆಯ ಸ್ಥಳಗಳು ಎಂದರು.

21ನೇ ಶತಮಾನದಲ್ಲಿ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ಎರಡು ಪ್ರಮುಖ ಆಧಾರ ಸ್ತಂಭಗಳಿವೆ ಎಂದು ಪ್ರಧಾನಿ ಮೋದಿ ಹೇಳಿದರು. ಮೊದಲನೆಯದು – ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ. ಎರಡನೆಯದು – ಅಭಿವೃದ್ಧಿಗಾಗಿ ಪ್ರತಿ ಪ್ರಯತ್ನವನ್ನೂ ತಪ್ಪದೆ ಮಾಡುವುದು. ಇಲ್ಲಿನ ಎಲ್ಲ ಅಭಿವೃದ್ಧಿ ಚಟುವಟಿಕೆಗಳಿಗಾಗಿ ಉತ್ತರಾಖಂಡ ರಾಜ್ಯ, ದೇಶ ಮತ್ತು ವಿದೇಶದಲ್ಲಿರುವ ಪ್ರತಿಯೊಬ್ಬ ಭಕ್ತನನ್ನೂ ನಾನು ಪ್ರಶಂಸಿಸುತ್ತೇನೆ. ಗುರುಗಳ ಆಶೀರ್ವಾದ ಮುಂದುವರಿಯಲಿ, ಬಾಬಾ ಕೇದಾರರ ಆಶೀರ್ವಾದ ಮುಂದುವರಿಯಲಿ, ಬದರಿ ವಿಶಾಲಾಕ್ಷನ ಆಶೀರ್ವಾದ ಮುಂದುವರಿಯಲಿ ಎಂದು ಪ್ರಧಾನಿ ಮೋದಿ ಆಶಿಸಿದರು.

ರೋಪ್ ವೇ ನಿರ್ಮಾಣದಿಂದ ಹೇಮಾಖಂಡ ಸಾಹೇಬ್ ಗೆ ಸುಲಭವಾಗಿ ಭೇಟಿ ನೀಡಬಹುದು ಎಂದು ಪ್ರಧಾನಿ ಮೋದಿ ಹೇಳಿದರು. ಇದೇ ವೇಳೆ ಪ್ರಧಾನಿ ಮೋದಿ ಅವರು ಬದರಿನಾಥ್ ಮಾಸ್ಟರ್​ ಪ್ಲಾನ್ ಪರಿಶೀಲಿಸಿದರು. ಆದಿ ಗುರು ಶಂಕರಾಚಾರ್ಯರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದರು. 9.7 ಕಿಮೀ ಉದ್ದದ ಗೌರಿಕುಂಡ್-ಕೇದಾರನಾಥ ರೋಪ್​ ವೇ ಯೋಜನೆಗೆ ಶಂಕುಸ್ಥಾಪನೆ ಮಾಡಲಾಯಿತು. ಅಲ್ಲಿ ಅವರನ್ನು ಕೆಲಸಗಾರರು ಸುತ್ತುವರೆದಿದ್ದರು. ರೂ.1267 ಕೋಟಿ ವೆಚ್ಚದಲ್ಲಿ ರೋಪ್ ವೇ ನಿರ್ಮಿಸಲಾಗುತ್ತಿದೆ.

ಚಾರ್‌ ಧಾಮ್ ಸರ್ವಕಾಲ ಹವಾಮಾನ ಹೆದ್ದಾರಿ ನಿರ್ಮಾಣದಿಂದ ಉತ್ತರಾಖಂಡದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಮೋದಿ ಹೇಳಿದರು. ಪ್ರವಾಸಿಗರು ಯಾವುದೇ ತೊಂದರೆಯಿಲ್ಲದೆ ತ್ವರಿತವಾಗಿ ಚಾರ್‌ ಧಾಮ್ ಗೆ ಭೇಟಿ ನೀಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್​: 2 ತಿಂಗಳ ಹಣ ಒಂದೇ ಸಲಕ್ಕೆ ಜಮಾ...!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್​: 2 ತಿಂಗಳ ಹಣ ಒಂದೇ ಸಲಕ್ಕೆ ಜಮಾ...!
ಗಂಡನನ್ನು ರೂಂನಲ್ಲಿ ಕೂಡಿ ಕತ್ತು ಹಿಸುಕಿ ಥಳಿಸಿದ ಹೆಂಡತಿ; ವಿಡಿಯೋ ವೈರಲ್
ಗಂಡನನ್ನು ರೂಂನಲ್ಲಿ ಕೂಡಿ ಕತ್ತು ಹಿಸುಕಿ ಥಳಿಸಿದ ಹೆಂಡತಿ; ವಿಡಿಯೋ ವೈರಲ್
4ನೇ ಅತಿವೇಗದ ಅರ್ಧಶತಕ ಸಿಡಿಸಿದ ಮಾರ್ಷ್​
4ನೇ ಅತಿವೇಗದ ಅರ್ಧಶತಕ ಸಿಡಿಸಿದ ಮಾರ್ಷ್​
ಲಾಂಗ್ ಹಿಡಿದ ಪ್ರಕರಣ: ಪೊಲೀಸ್ ಠಾಣೆಯಲ್ಲಿ ರಜತ್, ವಿನಯ್ ವಿಚಾರಣೆ
ಲಾಂಗ್ ಹಿಡಿದ ಪ್ರಕರಣ: ಪೊಲೀಸ್ ಠಾಣೆಯಲ್ಲಿ ರಜತ್, ವಿನಯ್ ವಿಚಾರಣೆ
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟನೆ
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟನೆ
ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್​ ಬಗ್ಗೆ ಆಯುಕ್ತ ಹೇಳಿದ್ದಿಷ್ಟು!
ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್​ ಬಗ್ಗೆ ಆಯುಕ್ತ ಹೇಳಿದ್ದಿಷ್ಟು!
ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!
ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!
ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ
ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ
ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
700 ಸಂಚಿಕೆ ಪೂರೈಸಿದ ಶ್ರೀರಸ್ತು ಶುಭಮಸ್ತು ಸೀರಿಯಲ್: ಸುಧಾರಾಣಿ ಸಡಗರ ನೋಡಿ
700 ಸಂಚಿಕೆ ಪೂರೈಸಿದ ಶ್ರೀರಸ್ತು ಶುಭಮಸ್ತು ಸೀರಿಯಲ್: ಸುಧಾರಾಣಿ ಸಡಗರ ನೋಡಿ