2017ರಲ್ಲಿ ಪತ್ರಕರ್ತೆ ಗೌರಿಲಂಕೇಶ್ ಹತ್ಯೆ ಪ್ರಕರಣ; ಆರೋಪಿ ಮೋಹನ್​ಗೆ ಹಿನ್ನೆಡೆ, ಕೋಕಾ ಕಾಯ್ದೆಯಡಿ ಕೇಸ್ ಎತ್ತಿಹಿಡಿದ ‘ಸುಪ್ರೀಂ’

| Updated By: ಆಯೇಷಾ ಬಾನು

Updated on: Oct 21, 2021 | 12:13 PM

KCOCAಯಡಿ ದಾಖಲಾಗಿದ್ದ ಕೇಸನ್ನು ಈ ಹಿಂದೆ ಹೈಕೋರ್ಟ್ ರದ್ದು ಮಾಡಿತ್ತು. ಆದ್ರೆ ಈಗ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದೆ.

2017ರಲ್ಲಿ ಪತ್ರಕರ್ತೆ ಗೌರಿಲಂಕೇಶ್ ಹತ್ಯೆ ಪ್ರಕರಣ; ಆರೋಪಿ ಮೋಹನ್​ಗೆ ಹಿನ್ನೆಡೆ, ಕೋಕಾ ಕಾಯ್ದೆಯಡಿ ಕೇಸ್ ಎತ್ತಿಹಿಡಿದ ‘ಸುಪ್ರೀಂ’
ಪತ್ರಕರ್ತೆ ಗೌರಿ ಲಂಕೇಶ್
Follow us on

ದೆಹಲಿ: 2017ರಲ್ಲಿ ಪತ್ರಕರ್ತೆ ಗೌರಿಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೋಕಾ ಕಾಯ್ದೆಯಡಿ ಆರೋಪಿ ಮೋಹನ್ ವಿರುದ್ಧ ದಾಖಲಾಗಿದ್ದ ಕೇಸನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. KCOCAಯಡಿ ದಾಖಲಾಗಿದ್ದ ಕೇಸನ್ನು ಈ ಹಿಂದೆ ಹೈಕೋರ್ಟ್ ರದ್ದು ಮಾಡಿತ್ತು. ಆದ್ರೆ ಈಗ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದೆ.

ಹೈಕೋರ್ಟ್, ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (KCOCA)ಯಡಿ ದಾಖಲಾಗಿದ್ದ ಕೇಸ್ ರದ್ದು ಮಾಡಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಕವಿತಾ ಲಂಕೇಶ್, ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಅದರಂತೆ ಈಗ ಸುಪ್ರೀಂಕೋರ್ಟ್, ಹೈಕೋರ್ಟ್ ಆದೇಶ ರದ್ದು ಮಾಡಿದ್ದು ಆರೋಪಿ ಮೋಹನ್ ವಿರುದ್ಧ ದಾಖಲಾಗಿದ್ದ ಕೇಸನ್ನು ಎತ್ತಿಹಿಡಿದಿದೆ.

2017ರಲ್ಲಿ ಹತ್ಯೆಯಾದ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಆರೋಪಿ ಮೋಹನ್ ನಾಯಕ್‌ ವಿರುದ್ದ ‘ಕರ್ನಾಟಕ ಸಂಘಟಿತ ಅಪರಾಧಗಳ ಕಾಯ್ದೆ’ (KCOCA)ಯಡಿ ಪ್ರಕರಣ ದಾಖಲಾಗಿತ್ತು. ಈ ಕೇಸನ್ನು ಕರ್ನಾಟಕ ಹೈಕೊರ್ಟ್ ಈ ಹಿಂದೆ ರದ್ದು ಮಾಡಿತ್ತು. ಇದನ್ನು ಸುಪ್ರೀಂಕೋರ್ಟ್‌ನಲ್ಲಿ ಗೌರಿ ಲಂಕೇಶ್‌ ಸಹೋದರಿ ಕವಿತಾ ಲಂಕೇಶ್‌‌ ಪ್ರಶ್ನಿಸಿದ್ದರು. ಕವಿತಾ ಲಂಕೇಶ್‌ ಪರವಾಗಿ ಹಿರಿಯ ವಕೀಲ ಹುಜೀಫಾ ಅಹ್ಮದಿ ವಾದ ಮಂಡಿಸಿದ್ದರು. ಆರೋಪಿ ಪರವಾಗಿ ಬಸವ ಪ್ರಭು ಎಸ್ ವಾದ ಮಂಡಿಸಿದ್ದರು. ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್, ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಮತ್ತು ಸಿ ಟಿ ರವಿಕುಮಾರ್ ನೇತೃತ್ವದ ನ್ಯಾಯಪೀಠವು ಉಭಯ ಕಕ್ಷಿದಾರರ ಪರ ವಾದವನ್ನು ಸೆಪ್ಟಂಬರ್ 21 ರಂದು ಆಲಿಸಿ ಆದೇಶ ಕಾಯ್ದಿರಿಸಿತ್ತು.

ವಿಚಾರಣೆಯ ಸಂದರ್ಭದಲ್ಲಿ ನ್ಯಾಯಪೀಠವು, ಪ್ರಕರಣದ ಚಾರ್ಜ್‌ಶೀಟ್ ಅನ್ನು ಹೈಕೋರ್ಟ್ ವಿಶ್ಲೇಷಿಸದೆ, ಪ್ರಕರಣವನ್ನು ರದ್ದುಗೊಳಿಸಿದೆ. ಹೈಕೋರ್ಟ್ ಈ ವಿಷಯವನ್ನು ಲಘುವಾಗಿ ಪರಿಗಣಿಸಿದೆ ಎಂದು ಹೇಳಿತ್ತು. ಆರೋಪಿ ಮೋಹನ್ ನಾಯಕ್ ಗೌರಿ ಲಂಕೇಶ್ ಹತ್ಯೆಯಲ್ಲಿ ಯೋಜನೆ ರೂಪಿಸಿ ನೇರ ಭಾಗಿಗಳಾಗಿದ್ದ ಅಮೋಲ್ ಕಾಳೆ ಮತ್ತು ರಾಜೇಶ್ ಬಂಗಾರರ ನಿಕಟವರ್ತಿಯಾಗಿದ್ದಾನೆ. ಗೌರಿ ಲಂಕೇಶ್ ಹಂತಕರ ವಿರುದ್ಧ ಸಲ್ಲಿಸಲಾಗಿದ್ದ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ 2000 (KOCCA Act, 2000) ಅಡಿಯಲ್ಲಿನ ಆರೋಪಗಳನ್ನು ವಜಾಗೊಳಿಸಿದ್ದ ಹೈಕೋರ್ಟ್ ಹತ್ಯೆಯನ್ನು ಸಾಮಾನ್ಯ ಕೊಲೆಯಂತೆ ವಿಚಾರಣೆ ನಡೆಸಲು ಮುಂದಾಗಿತ್ತು. ಆ ಸಂದರ್ಭದಲ್ಲಿ ಮೋಹನ್ ನಾಯಕ್ ತನಗೆ ಜಾಮೀನು ನೀಡುವಂತೆ ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದ. ಇದಕ್ಕೆ ಕವಿತಾ ಲಂಕೇಶ್ ಪ್ರಶ್ನಿಸಿದ್ದರು. ಸದ್ಯ ಈಗ ಸುಪ್ರೀಂಕೋರ್ಟ್, ಹೈಕೋರ್ಟ್ ಆದೇಶ ರದ್ದು ಮಾಡಿದ್ದು ಆರೋಪಿ ಮೋಹನ್ ವಿರುದ್ಧ ದಾಖಲಾಗಿದ್ದ ಕೇಸನ್ನು ಎತ್ತಿಹಿಡಿದಿದೆ.

ಇದನ್ನೂ ಓದಿ: Gauri Lankesh Day ಕೆನಡಾದ ಬರ್ನಾಬಿಯಲ್ಲಿ ಸೆಪ್ಟೆಂಬರ್ 5ಕ್ಕೆ ಗೌರಿ ಲಂಕೇಶ್ ದಿನ

Published On - 11:45 am, Thu, 21 October 21