AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gauri Lankesh Day ಕೆನಡಾದ ಬರ್ನಾಬಿಯಲ್ಲಿ ಸೆಪ್ಟೆಂಬರ್ 5ಕ್ಕೆ ಗೌರಿ ಲಂಕೇಶ್ ದಿನ

ಆಗಸ್ಟ್ 30 ರಂದು ಬರ್ನಾಬಿ ಸಿಟಿ ಕೌನ್ಸಿಲ್ ಸಭೆಯಲ್ಲಿ ಗೌರಿ ಲಂಕೇಶ್ ದಿನವನ್ನು ಆಚರಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು

Gauri Lankesh Day ಕೆನಡಾದ ಬರ್ನಾಬಿಯಲ್ಲಿ ಸೆಪ್ಟೆಂಬರ್ 5ಕ್ಕೆ ಗೌರಿ ಲಂಕೇಶ್ ದಿನ
ಪತ್ರಕರ್ತೆ ಗೌರಿ ಲಂಕೇಶ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Sep 02, 2021 | 9:33 PM

ದೆಹಲಿ: ಕೆನಡಾದ ಬರ್ನಾಬಿ ನಗರವು ಸೆಪ್ಟೆಂಬರ್ 5 ನ್ನು ಗೌರಿ ಲಂಕೇಶ್ ದಿನವೆಂದು (Gauri Lankesh Day) ಘೋಷಿಸಿದ್ದು, ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪತ್ರಕರ್ತೆ ಗೌರಿ ಲಂಕೇಶ್ (Gauri Lankesh) ಅವರ ಹತ್ಯೆಯಾದ ದಿನವನ್ನು ಗೌರಿ ಲಂಕೇಶ್ ದಿನ ಆಗಿ ಆಚರಿಸಲಿದೆ. ಗೌರಿ ಲಂಕೇಶ್ ಅವರನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ತನ್ನ ಮನೆಯ ಹೊರಗೆ ಸೆಪ್ಟೆಂಬರ್ 5, 2017 ರಂದು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಆಗಸ್ಟ್ 30 ರಂದು ಬರ್ನಾಬಿ ಸಿಟಿ ಕೌನ್ಸಿಲ್ ಸಭೆಯಲ್ಲಿ ಗೌರಿ ಲಂಕೇಶ್ ದಿನವನ್ನು ಆಚರಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ನಗರ ಮೇಯರ್ ಮೈಕ್ ಹರ್ಲೆ ಸಹಿ ಮಾಡಿದ ಘೋಷಣೆಯನ್ನು ನಗರ ಆಡಳಿತದ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಸತ್ಯ ಮತ್ತು ನ್ಯಾಯಕ್ಕಾಗಿ ನಿಂತ ಲಂಕೇಶ್ ಒಬ್ಬ ಧೈರ್ಯಶಾಲಿ ಭಾರತೀಯ ಪತ್ರಕರ್ತೆ ಎಂದು ಪ್ರಕಟಿತ ಘೋಷಣೆಯಲ್ಲಿ ಪ್ರಶಂಸೆ ವ್ಯಕ್ತಪಡಿಸಲಾಗಿದೆ, “ಗೌರಿ ಲಂಕೇಶ್ ತನ್ನ ಕೆಲಸದ ಮೂಲಕ ತನ್ನ ಓದುಗರನ್ನು ವೈಜ್ಞಾನಿಕ ಮನೋಧರ್ಮವನ್ನು ಅಳವಡಿಸಿಕೊಳ್ಳಲು ಮತ್ತು ಧಾರ್ಮಿಕ ಮತಾಂಧತೆ, ಜಾತಿ ಆಧಾರಿತ ತಾರತಮ್ಯ ಮತ್ತು ಧರ್ಮಾಂಧತೆಯನ್ನು ತಿರಸ್ಕರಿಸಲು ಪ್ರೋತ್ಸಾಹಿಸಿದರು ಎಂದು ವೆಬ್‌ಸೈಟ್‌ನಲ್ಲಿ ಬರೆದಿದೆ.

ಏಪ್ರಿಲ್ 2020 ರಲ್ಲಿ ಬರ್ನಾಬಿ ನಗರವು ಏಪ್ರಿಲ್ 14 ಅನ್ನು ಡಾ ಬಿ.ಆರ್ ಅಂಬೇಡ್ಕರ್ ಸಮಾನತೆಯ ದಿನವೆಂದು (Dr BR Ambedkar Day of Equality) ಘೋಷಿಸಿತು. ಅಲ್ಲದೆ, ನಗರವು ನಾಗರಿಕ ಹಕ್ಕುಗಳ ಕಾರ್ಯಕರ್ತ ಜಸ್ವಂತ್ ಸಿಂಗ್ ಖಲ್ರಾ ಮತ್ತು ಸಿಖ್ ಪರಂಪರೆಗೆ ಮೀಸಲಾಗಿರುವ ದಿನವನ್ನು ಘೋಷಿಸಿತು.

ಏತನ್ಮಧ್ಯೆ ಕೊಲೆ ಪ್ರಕರಣದ ಒಬ್ಬ ಆರೋಪಿಯ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ಕಾಯ್ದೆ 2000 (KCOCA) ಅಡಿಯಲ್ಲಿ ಆರೋಪಗಳನ್ನು ಕೈಬಿಡುವುದನ್ನು ಪ್ರಶ್ನಿಸಿ ಕವಿತಾ ಲಂಕೇಶ್ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ತೆಗೆದುಕೊಳ್ಳುವ ನಿರೀಕ್ಷೆಯಿದೆ. ಮೋಹನ್ ನಾಯಕ್ ವಿರುದ್ಧ ಕೆಸಿಒಸಿಎ ಅಡಿಯಲ್ಲಿ ಆರೋಪಗಳನ್ನು ರದ್ದುಗೊಳಿಸುವ ರಾಜ್ಯ ಹೈಕೋರ್ಟ್ ತೀರ್ಪಿನ ವಿರುದ್ಧ ಕವಿತಾ ಸಲ್ಲಿಸಿದ ಅರ್ಜಿಯ ಮೇಲೆ ನ್ಯಾಯಮೂರ್ತಿ ಎಎಂ ಖಾನ್ವಿಲ್ಕರ್ ನೇತೃತ್ವದ ನ್ಯಾಯಪೀಠ ಕರ್ನಾಟಕಕ್ಕೆ ನೋಟಿಸ್ ನೀಡಿತ್ತು.

KCOCA ಸಂಘಟಿತ ಅಪರಾಧ ಮತ್ತು ಭಯೋತ್ಪಾದನೆಯನ್ನು ಎದುರಿಸಲು 2000 ದಿಂದ ಕರ್ನಾಟಕವು ಜಾರಿಗೆ ತಂದ ಕಾನೂನು ಆಗಿದೆ. ಈ ಕಾಯ್ದೆಯನ್ನು ಮಹಾರಾಷ್ಟ್ರ ನಿಯಂತ್ರಣ ಸಂಘಟಿತ ಅಪರಾಧ ಕಾಯ್ದೆ, 1999 (MCOCA) ಮಾದರಿಯಲ್ಲಿ ಮಾಡಲಾಗಿದೆ. ಪೊಲೀಸರ ಪ್ರಕಾರ, ನಾಯಕ್ ವಿರುದ್ಧ ಕೆಸಿಒಸಿಎಯ ಆರೋಪಗಳನ್ನು ಕೈಬಿಟ್ಟರೆ, ಪ್ರಕರಣದ ಇತರ ಆರೋಪಿಗಳ ವಿರುದ್ಧವೂ ಆರೋಪಗಳನ್ನು ಕೈಬಿಡಲು ಇದು ಆದ್ಯತೆಯನ್ನು ನೀಡಬಹುದು.

ಈ ಬೆಳವಣಿಗೆ ಬಗ್ಗೆ ತಿಳಿದಿರುವ ಗೃಹ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಎಸ್ಐಟಿ ಸರ್ಕಾರವನ್ನು ಸಂಪರ್ಕಿಸಿದೆ. ಆದರೆ, ಸರ್ಕಾರವು ಅದರ ಮೇಲೆ ಕಾರ್ಯನಿರ್ವಹಿಸಲಿಲ್ಲ ಎಂದು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಈ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆಗಾಗಿ ಕರೆ ಮಾಡಿದರೂ ಗೃಹ ಸಚಿವರು ಪ್ರತಿಕ್ರಿಯಿಸಲಿಲ್ಲ ಎಂದು ವರದಿ ಉಲ್ಲೇಖಿಸಿದೆ.

ಆರೋಪ ಪಟ್ಟಿ ಪ್ರಕಾರ ನಾಯಕ್ ಬೆಂಗಳೂರಿನ ಹೊರವಲಯದಲ್ಲಿ ಕೊಲೆಗಾರರಿಗೆ ವಸತಿ ಒದಗಿಸಿದ ಆರೋಪವಿದೆ. ಶೂಟರ್ ಮತ್ತು ಮಾಸ್ಟರ್ ಮೈಂಡ್ ಸೇರಿದಂತೆ ಪ್ರಕರಣದ ಪ್ರಮುಖ ಶಂಕಿತರನ್ನು ವಶಕ್ಕೆ ತೆಗೆದುಕೊಂಡ ನಂತರ ಅವರನ್ನು ಜುಲೈ 19, 2018 ರಂದು ಬಂಧಿಸಲಾಗಿತ್ತು.

ಇದನ್ನೂ ಓದಿ:ಗೌರಿ ಲಂಕೇಶ್ ಹತ್ಯೆ ಪ್ರಕರಣ: ಆರೋಪಿ ನವೀನ್​ಗೆ ಕಿಡ್ನಿ ಸಮಸ್ಯೆ; ಆಸ್ಪತ್ರೆಗೆ ದಾಖಲು

ಇದನ್ನೂ ಓದಿ: New York Flood: ಭಾರೀ ಪ್ರವಾಹದಿಂದ ನ್ಯೂಯಾರ್ಕ್​ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ; 9 ಜನರು ಸಾವು

(Canadian city of Burnaby declares September 5 as Gauri Lankesh Day)

ಆಪರೇಷನ್ ಸಿಂದೂರದ ಬಗ್ಗೆ ಪಾಕಿಸ್ತಾನಿಗನ ನೇರ ಮಾತು ಕೇಳಿ
ಆಪರೇಷನ್ ಸಿಂದೂರದ ಬಗ್ಗೆ ಪಾಕಿಸ್ತಾನಿಗನ ನೇರ ಮಾತು ಕೇಳಿ
ಆಪರೇಷನ್​ ಸಿಂಧೂರ್​, ಪ್ರಧಾನಿಗೆ ಧನ್ಯವಾದ ತಿಳಿಸಿದ ಪಹಲ್ಗಾಮ್ ಸಂತ್ರಸ್ತೆ
ಆಪರೇಷನ್​ ಸಿಂಧೂರ್​, ಪ್ರಧಾನಿಗೆ ಧನ್ಯವಾದ ತಿಳಿಸಿದ ಪಹಲ್ಗಾಮ್ ಸಂತ್ರಸ್ತೆ
ಅರಸೊತ್ತಿಗೆ ಕಾಲದಿಂದ ನಡೆದುಕೊಂಡು ಬಂದಿರುವ ಪದ್ಧತಿ: ಅರ್ಚಕ ದೀಕ್ಷಿತ್
ಅರಸೊತ್ತಿಗೆ ಕಾಲದಿಂದ ನಡೆದುಕೊಂಡು ಬಂದಿರುವ ಪದ್ಧತಿ: ಅರ್ಚಕ ದೀಕ್ಷಿತ್
‘ಭರ್ಜರಿ ಬ್ಯಾಚುಲರ್ಸ್’ ಹೊಸ ಎಪಿಸೋಡ್​ಗೆ ಹೊರಾಂಗಣ ಶೂಟಿಂಗ್; ಯಾವ ಜಿಲ್ಲೆ?
‘ಭರ್ಜರಿ ಬ್ಯಾಚುಲರ್ಸ್’ ಹೊಸ ಎಪಿಸೋಡ್​ಗೆ ಹೊರಾಂಗಣ ಶೂಟಿಂಗ್; ಯಾವ ಜಿಲ್ಲೆ?
ಸೋಫಿಯಾ ಖುರೇಷಿ ಬೆಳಗಾವಿಯ ಸೊಸೆ: ಲೆಫ್ಟಿನೆಂಟ್ ಕರ್ನಲ್​ರ ಮಾವ ಹೇಳಿದ್ದೇನು?
ಸೋಫಿಯಾ ಖುರೇಷಿ ಬೆಳಗಾವಿಯ ಸೊಸೆ: ಲೆಫ್ಟಿನೆಂಟ್ ಕರ್ನಲ್​ರ ಮಾವ ಹೇಳಿದ್ದೇನು?
ಸೇನೆಗೆ ವರವಾಯ್ತೇ ಲಕ್ಷ್ಮೀ ಜನಾರ್ದನ ಪ್ರಸಾದ! ಬಲಭಾಗದಿಂದ ಹೂ ನೀಡಿದ ದೇವರು
ಸೇನೆಗೆ ವರವಾಯ್ತೇ ಲಕ್ಷ್ಮೀ ಜನಾರ್ದನ ಪ್ರಸಾದ! ಬಲಭಾಗದಿಂದ ಹೂ ನೀಡಿದ ದೇವರು
Dewald Brevis: ಬೇಬಿ ಎಬಿ ಸಿಡಿಲಬ್ಬರ: ಹೊಸ ದಾಖಲೆ ನಿರ್ಮಾಣ
Dewald Brevis: ಬೇಬಿ ಎಬಿ ಸಿಡಿಲಬ್ಬರ: ಹೊಸ ದಾಖಲೆ ನಿರ್ಮಾಣ
ವಿವೇಕ, ವಿವೇಚನೆ ಮಾರಿಕೊಂಡಿರುವ ಪಾಕಿಸ್ತಾನಕ್ಕೆ ಬುದ್ಧಿ ಬಾರದು
ವಿವೇಕ, ವಿವೇಚನೆ ಮಾರಿಕೊಂಡಿರುವ ಪಾಕಿಸ್ತಾನಕ್ಕೆ ಬುದ್ಧಿ ಬಾರದು
ಸಿಯಾಲ್​ಕೋಟ್ ತೊರೆಯುತ್ತಿರುವ ಪಾಕ್ ಜನ, ಕಾಲ್ತುಳಿದಂಥಾ ಸ್ಥಿತಿ
ಸಿಯಾಲ್​ಕೋಟ್ ತೊರೆಯುತ್ತಿರುವ ಪಾಕ್ ಜನ, ಕಾಲ್ತುಳಿದಂಥಾ ಸ್ಥಿತಿ
ವಿಡಿಯೋ: ಭೀಕರ ದಾಳಿಗೆ ಛಿದ್ರ ಛಿದ್ರವಾಗಿ ಹಾರಿದ ಪಾಕ್ ಸೈನಿಕರ ಮೃತದೇಹ
ವಿಡಿಯೋ: ಭೀಕರ ದಾಳಿಗೆ ಛಿದ್ರ ಛಿದ್ರವಾಗಿ ಹಾರಿದ ಪಾಕ್ ಸೈನಿಕರ ಮೃತದೇಹ