ಬಿಹಾರ ಜೈಪ್ರಕಾಶ್ ವಿವಿ ಪಠ್ಯಕ್ರಮದಲ್ಲಿ ಬದಲಾವಣೆ; ಇದು ಅಸಮರ್ಪಕ ಎಂದ ನಿತೀಶ್ ಕುಮಾರ್

ತಾವು ಮುಖ್ಯಮಂತ್ರಿಯಾಗಿದ್ದಾಗ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದ ಲಾಲು ಪ್ರಸಾದ್, "ಆರ್‌ಎಸ್‌ಎಸ್ ಬೆಂಬಲಿತ ಬಿಹಾರ ಸರ್ಕಾರ ಮತ್ತು ಆರ್‌ಎಸ್‌ಎಸ್ ಮನಸ್ಥಿತಿ (ಮಹಾನ್ ಸಮಾಜವಾದಿ ನಾಯಕರ ಆಲೋಚನೆಗಳನ್ನು ತೆಗೆದುಹಾಕಿದೆ) ಎಂದು ಟ್ವೀಟ್ ಮಾಡಿದ್ದಾರೆ.

ಬಿಹಾರ ಜೈಪ್ರಕಾಶ್ ವಿವಿ ಪಠ್ಯಕ್ರಮದಲ್ಲಿ ಬದಲಾವಣೆ; ಇದು ಅಸಮರ್ಪಕ ಎಂದ ನಿತೀಶ್ ಕುಮಾರ್
ನಿತೀಶ್ ಕುಮಾರ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Sep 02, 2021 | 8:23 PM

ಪಟನಾ: ಬಿಹಾರದ ಜೈ ಪ್ರಕಾಶ್ ವಿಶ್ವವಿದ್ಯಾಲಯದಲ್ಲಿ (Jai Prakash University) ಎಂಎ ರಾಜಕೀಯ ವಿಜ್ಞಾನ ಪಠ್ಯಕ್ರಮದಲ್ಲಿನ ಬದಲಾವಣೆ ಬಗ್ಗೆ ಬಿಹಾರ ಸಿಎಂ ನಿತೀಶ್ ಕುಮಾರ್ (Nitish Kumar)ಅವರಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.  ಹೊಸ ಶೈಕ್ಷಣಿಕ ವರ್ಷದ ಬದಲಾವಣೆಗಳ ಪೈಕಿ ಪ್ರಮುಖ ಸಾಮಾಜಿಕ ಮತ್ತು ರಾಜಕೀಯ ಕಾರ್ಯಕರ್ತರಾದ ‘ಲೋಕ ನಾಯಕ್’ ಜೈ ಪ್ರಕಾಶ್ ನಾರಾಯಣ್ (ವಿಶ್ವ ವಿದ್ಯಾಲಯದ ಹೆಸರು ಕೂಡಾಅದೇ ) ಮತ್ತು ರಾಮ್ ಮನೋಹರ್ ಲೋಹಿಯಾ ಮತ್ತು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಮತ್ತು ಇತರರ ಅಧ್ಯಾಯಗಳನ್ನು ಕೈಬಿಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ನಿತೀಶ್ ಕುಮಾರ್ ಇದು “ಅಸಮರ್ಪಕ” ಮತ್ತು “ಬದಲಾವಣೆಗಳನ್ನು ಬಯಸದ” ಕ್ರಮವಾಗಿದ್ದು ತಕ್ಷಣದ ಸರಿಪಡಿಸಿ ಎಂದು ಹೇಳಿರುವುದಾಗಿ ಶಿಕ್ಷಣ ಇಲಾಖೆ ನಿತೀಶ್ ಕುಮಾರ್ ಹೇಳಿಕೆಯನ್ನು ಉಲ್ಲೇಖಿಸಿದೆ.

ಪಠ್ಯಕ್ರಮ ಬದಲಾವಣೆ ಮಾಡುವ ಮೊದಲು ಶಿಕ್ಷಣ ಅಧಿಕಾರಿಗಳನ್ನು ಸಂಪರ್ಕಿಸಿ ರಾಜ್ಯದ ಇತರ ವಿಶ್ವವಿದ್ಯಾನಿಲಯಗಳಿಗೆ ಎಚ್ಚರಿಕೆ ನೀಡಿರುವುದನ್ನು ಉಲ್ಲೇಖಿಸಲಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಭವಿಷ್ಯದಲ್ಲಿ ಅಂತಹ ಯಾವುದೇ ಕ್ರಮಗಳನ್ನು ಅನುಮತಿಸಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. “ಸಂಪ್ರದಾಯವನ್ನು ಅನುಸರಿಸಿಲ್ಲ” ಮತ್ತು ಸರ್ಕಾರವು “ಸಾರ್ವಜನಿಕ ಮನಸ್ಥಿತಿಗೆ ವಿರುದ್ಧವಾದ” ಪಠ್ಯಕ್ರಮವನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಟೀಕಿಸಿದ್ದಾರೆ.

ನಿತೀಶ್ ಕುಮಾರ್ ಮತ್ತು ಆರ್‌ಜೆಡಿ ಅನುಭವಿ ಲಾಲೂ ಪ್ರಸಾದ್ ಯಾದವ್ ಇಬ್ಬರೂ ಜೆಪಿ ನಾರಾಯಣ್ ಅವರ ಬೋಧನೆಗಳನ್ನು ತಮ್ಮ ಹೃದಯಕ್ಕೆ ಹತ್ತಿರವಾಗಿಸಿಕೊಂಡಿದ್ದಾರೆ. ತಾವು ಮುಖ್ಯಮಂತ್ರಿಯಾಗಿದ್ದಾಗ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದ ಲಾಲು ಪ್ರಸಾದ್, “ಆರ್‌ಎಸ್‌ಎಸ್ ಬೆಂಬಲಿತ ಬಿಹಾರ ಸರ್ಕಾರ ಮತ್ತು ಆರ್‌ಎಸ್‌ಎಸ್ ಮನಸ್ಥಿತಿ (ಮಹಾನ್ ಸಮಾಜವಾದಿ ನಾಯಕರ ಆಲೋಚನೆಗಳನ್ನು ತೆಗೆದುಹಾಕಿದೆ) ಎಂದು ಟ್ವೀಟ್ ಮಾಡಿದ್ದಾರೆ.

“ನಾನು 30 ವರ್ಷಗಳ ಹಿಂದೆ ನನ್ನ ಕರಂಭೂಮಿಯಲ್ಲಿ ಜೆಪಿಯು ಅನ್ನು ಸ್ಥಾಪಿಸಿದೆ. ಅದಕ್ಕೆ ಜೈ ಪ್ರಕಾಶ್‌ಜಿ ಹೆಸರಿಡಲಾಗಿದೆ. ಈಗ ಆರ್‌ಎಸ್‌ಎಸ್ ಬೆಂಬಲಿತ ಬಿಹಾರ ಸರ್ಕಾರ ಮತ್ತು ಆರ್‌ಎಸ್‌ಎಸ್ ಮನಸ್ಥಿತಿ ಮಹಾನ್ ಸಮಾಜವಾದಿ ನಾಯಕರ ಆಲೋಚನೆಗಳನ್ನು ತೆಗೆದುಹಾಕಿದೆ … ಇದನ್ನು ಸಹಿಸಲಾಗದು. ಸರ್ಕಾರ ತಕ್ಷಣ ಗಮನ ಹರಿಸಬೇಕು ಎಂದಿದ್ದಾರೆ ಲಾಲು ಪ್ರಸಾದ್ ಯಾದವ್.

ಛಾಪ್ರಾ ಜಿಲ್ಲೆಯ ವಿಶ್ವವಿದ್ಯಾನಿಲಯದ ಉಪಕುಲಪತಿ ಮತ್ತು ಅಧಿಕಾರಿಗಳನ್ನು ಇಂದು ಪಟನಾಗೆ ಕರೆದಿದ್ದು ಜಯಪ್ರಕಾಶ್ ನಾರಾಯಣ್ ಅವರ ಹೆಸರಿನ ವಿಶ್ವವಿದ್ಯಾನಿಲಯವು ಅವರ ಜನಪ್ರಿಯ ಚಳುವಳಿಯ ಬಗ್ಗೆ ಹಾಗೂ ರಾಮ್ ಮನೋಹರ್ ಲೋಹಿಯಾ ಅವರ ಪಾಠಗಳನ್ನು ಏಕೆ ಕೈಬಿಟ್ಟಿದೆ ಎಂದು ವಿವರಿಸಲು ಕೇಳಲಾಯಿತು.

ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ ಸ್ಥಳೀಯ ಘಟಕವು ಆಕ್ಷೇಪಗಳನ್ನು ಎತ್ತಿದ ನಂತರ ಈ ವಿಷಯ ಬೆಳಕಿಗೆ ಬಂದಿತು. “ಇದು ಜೆಪಿ ಯುನಿವರ್ಸಿಟಿ ಮತ್ತು ಜಯಪ್ರಕಾಶ್ ನಾರಾಯಣ್ ಮತ್ತು ಲೋಹಿಯಾ ಅವರ ಕುರಿತಾದ ಒಂದು ಅಧ್ಯಾಯವನ್ನು ಕೈಬಿಡಲಾಗಿದೆ …” ಎಂದು ಎಸ್‌ಎಫ್‌ಐ ನಾಯಕ ಶೈಲೇಂದ್ರ ಯಾದವ್ ಪ್ರತಿಕ್ರಿಯಿಸಿದ್ದಾರೆ.

, ಸಿಲಬಸ್ ಅನ್ನು ಹಿಂದಿನ ಗವರ್ನರ್ (ಆಗಸ್ಟ್ 2018 ರಿಂದ ಜುಲೈ 2019 ರವರೆಗೆ ಸೇವೆ ಸಲ್ಲಿಸಿದ ಲಾಲ್ಜಿ ಟಂಡನ್) ಅನುಮೋದಿಸಿದ್ದರು ಮತ್ತು ಸಿಬಿಸಿಎಸ್ (ಆಯ್ಕೆ-ಆಧಾರಿತ ಕ್ರೆಡಿಟ್ ಸಿಸ್ಟಮ್) ಅನ್ನು ವಿಳಂಬಗೊಳಿಸಿದ್ದರಿಂದ ಅದರ ಅನುಷ್ಠಾನವನ್ನು ಸ್ಥಗಿತಗೊಳಿಸಲಾಗಿದೆ ಎಂದು  ಉಪ ಕುಲಪತಿ ಫಾರುಕ್ ಅಲಿ ಹೇಳಿದ್ದಾರೆ.”ಏನೇ ಆಗಲಿ ಪಠ್ಯಕ್ರಮವನ್ನು ಅನುಮೋದಿಸಲಾಗಿದೆ. ಅದು ಈಗ ಜಾರಿಗೆ ಬಂದಿದೆ” ಎಂದು ಅವರು ಹೇಳಿದರು.

ಈ ವಿಷಯವು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ, ಪ್ರತಿಪಕ್ಷ ಆರ್‌ಜೆಡಿಯು ಆರ್‌ಎಸ್‌ಎಸ್ ಮತ್ತು ಬಿಜೆಪಿ-ಜೆಡಿಯು ಸರ್ಕಾರದ ‘ಹಿಡನ್ ಅಜೆಂಡಾ’ ಇದು ಎಂದು ಆರೋಪಿಸಿದೆ.

“ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಅಧ್ಯಾಯದೊಂದಿಗೆ ನಮಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ‘ಲೋಕ ನಾಯಕ್’ ಜಯಪ್ರಕಾಶ್ ನಾರಾಯಣ್ ಅವರ ಅಧ್ಯಾಯವನ್ನು ನೀವು ಹೇಗೆ ತೆಗೆದುಹಾಕಬಹುದು? ಎಂದು ಪಕ್ಷದ ಅಧ್ಯಕ್ಷ ಜಗದಾನಂದ್ ಸಿಂಗ್ ಕೇಳಿದರು. ಈ ಲೋಪದಿಂದ ದಿಗ್ಭ್ರಮೆಗೊಂಡ ನಿತೀಶ್ ಕುಮಾರ್ ಅವರ ಜೆಡಿಯು ಸರಿಪಡಿಸುವ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಒತ್ತಿ ಹೇಳಿದೆ.

“ನಾನು ರಾಜ್ಯಪಾಲರೊಂದಿಗೆ ಮಾತನಾಡಿದ್ದೇನೆ ಮತ್ತು ಅವರು ಹಿಂತಿರುಗಿ ಬಂದ ಮೇಲೆ ಶೀಘ್ರದಲ್ಲೇ ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳಲು ಒಪ್ಪಿಕೊಂಡರು ಎಂದು ಮಾನವ ಸಂಪನ್ಮೂಲ ಸಚಿವರಾಗಿರುವ ಜೆಡಿಯುನ ವಿಜಯ್ ಕುಮಾರ್ ಚೌಧರಿ ಹೇಳಿದರು.

ಇದನ್ನೂ ಓದಿ: ‘ನಿತೀಶ್​ ಕುಮಾರ್ ಪ್ರಧಾನಿ ಅಭ್ಯರ್ಥಿ‘- ಸುಶೀಲ್​ ಮೋದಿ ಮೌನ, ಅಫ್ಘಾನ್​​ನಲ್ಲಿ ವೆಕೆನ್ಸಿ ಇದೆ ಎಂದ ಆರ್​ಜೆಡಿ

ಇದನ್ನೂ ಓದಿ: ಕೇರಳದಲ್ಲಿ ಒಂದೇ ದಿನ 32,097 ಹೊಸ ಕೊವಿಡ್ ಪ್ರಕರಣ ಪತ್ತೆ, 188 ಸಾವು; ಟಿಪಿಆರ್ ಶೇ 18.41

(Changes to the MA Political Science syllabus at Bihar’s Jai Prakash University Improper says Nitish Kumar)

ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ