ಚಿಕನ್​ಗಾಗಿ ಪತ್ನಿಯನ್ನು ಕೋಲಿನಿಂದ ಹೊಡೆದು ಕೊಂದ ಪತಿ; ರಾತ್ರಿ ಆಗಿದ್ದೇನು?

TV9kannada Web Team

TV9kannada Web Team | Edited By: Lakshmi Hegde

Updated on: Sep 02, 2021 | 7:15 PM

ಆರೋಪಿಯನ್ನು ಕಮಲೇಶ್​ ಕೋಲ್​ ಎಂದು ಗುರುತಿಸಲಾಗಿದ್ದು, ಮೃತ ಮಹಿಳೆಯರ ಹೆಸರು ರಮಾಂಬೈ ಕೋಲ್​. ಆಗಸ್ಟ್​ 23ರಂದು ರಾತ್ರಿ ದುರ್ಘಟನೆ ನಡೆದಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಚಿಕನ್​ಗಾಗಿ ಪತ್ನಿಯನ್ನು ಕೋಲಿನಿಂದ ಹೊಡೆದು ಕೊಂದ ಪತಿ; ರಾತ್ರಿ ಆಗಿದ್ದೇನು?
ಚಿಕನ್​ ಚಿತ್ರ

ಪತಿ-ಪತ್ನಿಯ ಮಧ್ಯೆ ಜಗಳ, ಮನಸ್ತಾಪಗಳು ಸಹಜ. ಆದರೆ ಕೆಲವು ದಂಪತಿ ಚಿಕ್ಕಚಿಕ್ಕ ವಿಚಾರಗಳಿಗೂ ಆತ್ಮಹತ್ಯೆ, ಕೊಲೆಯಂಥ ಕೃತ್ಯಕ್ಕೆ ಮುಂದಾಗುತ್ತಾರೆ. ಇದೀಗ ಮಧ್ಯಪ್ರದೇಶದ ಶಾದೋಲ್​ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಇಂಥದ್ದೇ ಸಣ್ಣ ವಿಚಾರಕ್ಕೆ ಹತ್ಯೆ ಮಾಡಿದ್ದಾನೆ. ಪತ್ನಿ ಚಿಕನ್​ ಮಾಡಲು ಒಪ್ಪಲಿಲ್ಲ ಎಂಬ ಕಾರಣಕ್ಕೆ ಕೋಲಿನಿಂದ ಹೊಡೆದೇ ಕೊಂದಿದ್ದಾನೆ. ಘಟನೆ ನಡೆದಿದ್ದು ಆಗಸ್ಟ್​ 23ರಂದಾದರೂ ಇದೀಗ ಬೆಳಕಿಗೆ ಬಂದಿದೆ.

ಮಧ್ಯಪ್ರದೇಶದ ಶಾದೋಲ್​​ ಜಿಲ್ಲೆಯ ಸಮರಟೋಲ ಎಂಬ ಗ್ರಾಮದಲ್ಲಿ ಘಟನೆ ನಡೆದಿದ್ದು, ಪಪೌಂಧ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ತನಿಖೆ ಪ್ರಾರಂಭವಾಗಿದೆ. ಆರೋಪಿಯನ್ನು ಕಮಲೇಶ್​ ಕೋಲ್​ ಎಂದು ಗುರುತಿಸಲಾಗಿದ್ದು, ಮೃತ ಮಹಿಳೆಯರ ಹೆಸರು ರಮಾಂಬೈ ಕೋಲ್​. ಆಗಸ್ಟ್​ 23ರಂದು ರಾತ್ರಿ ಚಿಕನ್​ ಮಾಡು ಎಂದು ಪತ್ನಿಗೆ ಹೇಳುತ್ತಾನೆ. ಆದರೆ ಆಕೆ ಒಪ್ಪಲಿಲ್ಲ. ಇದೇ ವಿಚಾರಕ್ಕೆ ಅವರಿಬ್ಬರ ಮಧ್ಯೆ ಜಗಳ ಶುರುವಾಗಿ, ಕಮಲೇಶ್​ ಕೋಲಿನಲ್ಲಿ ಪತ್ನಿಗೆ ಹೊಡೆಯುತ್ತಾನೆ. ತಲೆಗೆ ಹೊಡೆದಿದ್ದರಿಂದಲೇ ಜೀವ ಹೋಗಿದೆ ಎಂದು ಪೋಸ್ಟ್​ಮಾರ್ಟಮ್​​ನಿಂದ ದೃಢಪಟ್ಟಿದೆ ಸಿಬ್ಬಂದಿ ತಿಳಿಸಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಶತಮಾನಗಳಿಂದ ಅಮೆರಿಕಾವನ್ನು ಚಂಡಮಾರುತ ಮತ್ತು ಬಿರುಗಾಳಿಗಳು ಅಪ್ಪಳಿಸುತ್ತಿವೆ, ಇಡಾ ಚಂಡಮಾರುತ ಲೇಟೆಸ್ಟ್!

Business Success Story: ಕಂಪೆನಿಯ ಷೇರಿನ ಪಾಲು ಮಾರಿ ತಲಾ 3500 ಕೋಟಿ ರೂಪಾಯಿ ಪಡೆದ ಮೂವರ ಯಶೋಗಾಥೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada