Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶತಮಾನಗಳಿಂದ ಅಮೆರಿಕಾವನ್ನು ಚಂಡಮಾರುತ ಮತ್ತು ಬಿರುಗಾಳಿಗಳು ಅಪ್ಪಳಿಸುತ್ತಿವೆ, ಇಡಾ ಚಂಡಮಾರುತ ಲೇಟೆಸ್ಟ್!

ಶತಮಾನಗಳಿಂದ ಅಮೆರಿಕಾವನ್ನು ಚಂಡಮಾರುತ ಮತ್ತು ಬಿರುಗಾಳಿಗಳು ಅಪ್ಪಳಿಸುತ್ತಿವೆ, ಇಡಾ ಚಂಡಮಾರುತ ಲೇಟೆಸ್ಟ್!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 02, 2021 | 6:54 PM

ಅಮೆರಿಕವನ್ನು ಅಪ್ಪಳಿಸಿದ ಎಲ್ಲಕ್ಕಿಂತ ದೊಡ್ಡ ಮತ್ತು ಅತ್ಯಂತ ವಿಧ್ವಂಸಕಾರಿ ಚಂಡಮಾರುತವೆಂದರೆ, 1900 ರ ಗಾಲ್ವೆಸ್ಟನ್ ಹರಿಕೇನ್. ಅದು ಸುಮಾರು 12,000 ಜನರನ್ನು ಬಲಿತೆಗೆದುಕೊಂಡಿತ್ತಂತೆ.

ಅಮೆರಿಕ ನಿಸ್ಸಂದೇಹವಾಗಿ ಒಂದು ಅತ್ಯಂತ ಮುಂದುವರಿದ ಮತ್ತು ಆಗರ್ಭ ಶ್ರೀಮಂತ ರಾಷ್ಟ್ರ. ಜಗತ್ತಿನ ಸೂಪರ್ ಪವರ್ ಮತ್ತು ವಿಶ್ವದ ಎಲ್ಲ ರಾಷ್ಟ್ರಗಳಿಗೆ ದೊಡ್ಡಣ್ಣ. ವೈಜ್ಞಾನಿಕ, ತಂತ್ರಜ್ಞಾನ ಎಲ್ಲದರಲ್ಲೂ ಈ ದೇಶ ಮುಂದಿದೆ. ಇದರ ಪ್ರಾಬಲ್ಯಕ್ಕೆ ಚೀನಾ ದೊಡ್ಡ ಸವಾಲು ಎಸೆಯತ್ತಿದೆಯಾದರೂ ದೊಡ್ಡಣ್ಣನನ್ನು ಮೀರಿಸಲು ಅದಕ್ಕೆ ಇನ್ನೂ ಸಮಯ ಬೇಕು. ಅಮೆರಿಕದಲ್ಲಿ ನೈಸರ್ಗಿಕ ಸಂಪನ್ಮೂಲಗಳು ಹೇರಳವಾಗಿರುವಂತೆ, ನೈಸರ್ಗಿಕ ವಿಕೋಪಗಳು ಈ ದೇಶವನ್ನು ಆಗಿಂದಾಗ್ಗೆ ಕಾಡುತ್ತಲೇ ಇರುತ್ತವೆ. ಈಗ ನೋಡಿ, ಇಡಾ ಚಂಡಮಾರುತ ಪೂರ್ತಿ ಅಮೇರಿಕ ಅಥವಾ ಆ ದೇಶದ ಬಹಭಾಗದ ಮೇಲೆ ಪ್ರಭಾವ ಬೀರಿಲ್ಲವಾದರೂ ಭಾರಿ ಮಳೆಗಳಿಗೆ ಕಾರಣವಾಗಿ ನ್ಯೂ ಯಾರ್ಕ್, ನ್ಯೂಜೆರ್ಸಿ ನಗರಗಳನ್ನು ತೇಲುದೀಪಗಳಾಗಿ ಪರಿವರ್ತಿಸಿದೆ.

ಸರಿ, ಚಂಡಮಾರುತಗಳು ಅಮೇರಿಕಾವನ್ನು ಅಪ್ಪಳಿಸಿ, ರಾಷ್ಟ್ರೀಯ ಸಂಪತ್ತು, ಜೀವ ಮತ್ತು ಆಸ್ತಿ-ಪಾಸ್ತಿಗಳಿಗೆ ಅಪಾರ ಹಾನಿಮಾಡಿರುವ ನಿದರ್ಶನಗಳು 1900 ರಿಂದ ನಮಗೆ ಸಿಗುತ್ತವೆ, ಅಸಲಿಗೆ ಅದಕ್ಕೆ ಮೊದಲು ಸಹ ಚಂಡಮಾರುತಗಳು ಅಮೇರಿಕಾವನ್ನು ಅಪ್ಪಳಿಸಿವೆ. ಆದರೆ, 1900 ರಿಂದೀಚಿನ ಅನಾಹುತಗಳ ಬಗ್ಗೆ ನೋಡೋಣ.

ಅಮೆರಿಕವನ್ನು ಅಪ್ಪಳಿಸಿದ ಎಲ್ಲಕ್ಕಿಂತ ದೊಡ್ಡ ಮತ್ತು ಅತ್ಯಂತ ವಿಧ್ವಂಸಕಾರಿ ಚಂಡಮಾರುತವೆಂದರೆ, 1900 ರ ಗಾಲ್ವೆಸ್ಟನ್ ಹರಿಕೇನ್. ಅದು ಸುಮಾರು 12,000 ಜನರನ್ನು ಬಲಿತೆಗೆದುಕೊಂಡಿತ್ತಂತೆ.

1928 ರಲ್ಲಿ ಅಪ್ಪಳಿಸಿದ ಒಕೀಚೊಬೀ ಚಂಡಮಾರುತ ಸುಮಾರು 2,300 ಜನರನ್ನು ಬಲಿ ತೆಗೆದುಕೊಂಡಿತ್ತು ಮತ್ತು ಅಮೆರಿಕ 26.5 ಬಿಲಿಯನ್ ಹಾನಿ ಅನುಭವಿಸುವಂತೆ ಮಾಡಿತ್ತು.

ಓಕೆ, ನಡುವಿನ ಕೆಲ ಚಂಡಮಾರುತಗಳನ್ನು ಬಿಟ್ಟು 2005 ರಲ್ಲಿ ಬೀಸಿದ ಕತ್ರೀನಾ ಚಂಡಮಾರುತ ಮಾಡಿದ ಹಾನಿಯ ಬಗ್ಗೆ ನೋಡೋಣ. ಇದು ಏನಿಲ್ಲವೆಂದರೂ 1,800 ಜನರನ್ನು ಬಲಿ ತೆಗೆದುಕೊಂಡಿತು. 2012 ರ ಸ್ಯಾಂಡಿ ಹರಿಕೇನ್ 285 ಜನರನ್ನು ಬಲಿ ತೆಗೆದುಕೊಂಡಿತ್ತು ಮತ್ತು 70 ಬಿಲಿಯನ್ ಡಾಲರ್ಗಷ್ಟು ಹಾನಿಯನ್ನುಂಟು ಮಾಡಿತ್ತು.
2017ರಲ್ಲಿ ಹಾರ್ವೀ ಚಂಡಮಾರುತ ಹೌಸ್ಟನ್ನಲ್ಲಿ 125 ಬಿಲಿಯನ್ ಡಾಲರ್ ಗಳಷ್ಟು ಹಾನಿಯನ್ನುಂಟು ಮಾಡಿತ್ತು. 2017ರಲ್ಲಿ ಆಮೆರಿಕದ ಆಡಳಿತಕ್ಕೊಳಪಟ್ಟ ಪ್ರದೇಶವಾಗಿರುವ ಪೊರ್ಟೊ ರಿಕೋನಲ್ಲಿ ಮಾರಿಯಾ ಹೆಸರಿನ ಚಂಡಮರುತವು ಭಾರಿ ಪ್ರಮಾಣದ ಪ್ರವಾಹವನ್ನು ಸೃಷ್ಟಿಸಿತ್ತು.

ಇದನ್ನೂ ಓದಿ: ಅಪ್ಪನ ಸಮಾಧಿ ಬಳಿ ಕೇಕ್ ಕಟ್; ಸಮಾಧಿಗೆ ಕೇಕ್ ಅರ್ಪಿಸಿ, ಜನ್ಮ ದಿನ ಆಚರಿಸಿಕೊಂಡ ಬಾಲಕಿ, ಮನ ಮಿಡಿಯುವ ವಿಡಿಯೋ ವೈರಲ್