‘ನಿತೀಶ್ ಕುಮಾರ್ ಪ್ರಧಾನಿ ಅಭ್ಯರ್ಥಿ‘- ಸುಶೀಲ್ ಮೋದಿ ಮೌನ, ಅಫ್ಘಾನ್ನಲ್ಲಿ ವೆಕೆನ್ಸಿ ಇದೆ ಎಂದ ಆರ್ಜೆಡಿ
ಇನ್ನು ಎಂಎಲ್ಸಿ ಹೇಳಿಕೆಯನ್ನು ಜೆಡಿಯು ಪ್ರಧಾನ ಕಾರ್ಯದರ್ಶಿ ಕೆ.ಸಿ.ತ್ಯಾಗಿಯೇ ಒಪ್ಪಲಿಲ್ಲ. ಎನ್ಡಿಎ ಒಕ್ಕೂಟಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ನಾಯಕರು ಎಂದು ಹೇಳಿದ್ದಾರೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar)ಗೆ ಪ್ರಧಾನಿಯಾಗುವ ಎಲ್ಲ ಅರ್ಹತೆಯೂ ಇದೆ ಎಂದು ನಿನ್ನೆ ಅವರದ್ದೇ ಪಕ್ಷ ಜನತಾದಳ (ಸಂಯುಕ್ತ) ಹೇಳಿತ್ತು. ಆ ಬಗ್ಗೆ ಇದೀಗ ಆಳವಾಗಿ ಚರ್ಚೆ ನಡೆಯುತ್ತಿದೆ. ಸ್ವತಃ ನಿತೀಶ್ ಕುಮಾರ್ ಅವರೇ ಇದೊಂದು ಅಸಂಬದ್ಧವಾದ ಹೇಳಿಕೆ. ನಾನ್ಯಾವತ್ತೂ ಪ್ರಧಾನಿ ಹುದ್ದೆಯ ಆಕಾಂಕ್ಷಿಯಲ್ಲ ಎಂದುಬಿಟ್ಟಿದ್ದಾರೆ. ಹಾಗೇ, ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಮೋದಿ (Sushil Modi) ಕೂಡ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಜೆಡಿ-ಯು ಎಂಎಲ್ಸಿ ಉಪೇಂದ್ರ ಕುಶ್ವಾಹ ಹೀಗೊಂದು ಹೇಳಿಕೆ ನೀಡಿದ್ದರು. ನಿನ್ನೆ ಪಾಟ್ನಾದಲ್ಲಿ ನಡೆದ ಕೌನ್ಸಿಲ್ ಸಭೆ ಬಳಿಕ ಮಾತನಾಡಿದ್ದ ಅವರು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಪ್ರಧಾನಿಯಾಗುವ ಎಲ್ಲ ಅರ್ಹತೆಗಳೂ ಇವೆ. ಆದರೆ ಅವರು ಹುದ್ದೆಯ ರೇಸ್ನಲ್ಲಿ ಇಲ್ಲ. ನಮ್ಮ ಪಕ್ಷದಿಂದ ದೇಶದಲ್ಲಿ ‘ಮಿಷನ್ ನಿತೀಶ್’ ಅಭಿಯಾನ ಶುರು ಮಾಡುತ್ತೇವೆ ಎಂದಿದ್ದರು. ಈ ಬಗ್ಗೆ ಬಿಜೆಪಿ ರಾಜ್ಯಸಭಾ ಸದಸ್ಯ ಸುಶೀಲ್ ಮೋದಿ ಬಳಿ ಪ್ರಶ್ನೆ ಮಾಡಿದಾಗ ಅವರು ಮೌನವಹಿಸಿದ್ದಾರೆ.
ಪಕ್ಷದ ಪ್ರಧಾನ ಕಾರ್ಯದರ್ಶಿಯಿಂದಲೇ ವಿರೋಧ ಇನ್ನು ಎಂಎಲ್ಸಿ ಹೇಳಿಕೆಯನ್ನು ಜೆಡಿಯು ಪ್ರಧಾನ ಕಾರ್ಯದರ್ಶಿ ಕೆ.ಸಿ.ತ್ಯಾಗಿಯೇ ಒಪ್ಪಲಿಲ್ಲ. ಎನ್ಡಿಎ ಒಕ್ಕೂಟಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ನಾಯಕರು. 2024ರ ಲೋಕಸಭೆ ಚುನಾವಣೆಯಲ್ಲೂ ನರೇಂದ್ರ ಮೋದಿಯವರೇ ಪ್ರಧಾನಿ ಅಭ್ಯರ್ಥಿಯಾಗಿರುತ್ತಾರೆ. ನಮ್ಮ ಜೆಡಿ-ಯು ಪಕ್ಷವನ್ನು ಉಳಿದ ರಾಜ್ಯಗಳಿಗೂ ವಿಸ್ತರಿಸುವ ವಿಚಾರ ಇದೆ. ಬಿಹಾರದಲ್ಲಿ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಅನೇಕ ಒಳ್ಳೆಯ, ಮಾದರಿಯ ಕಾರ್ಯಗಳನ್ನು ಮಾಡಿದ್ದಾರೆ. ಅದನ್ನು ಇಡೀ ದೇಶಕ್ಕೆ ತಿಳಿಸಬೇಕು. ಅದನ್ನು ಇನ್ನಷ್ಟು ರಾಜ್ಯಗಳು ಅನುಸರಿಸಬೇಕು ಎಂದಿದ್ದಾರೆ.
ಅಫ್ಘಾನ್ನಲ್ಲಿ ವೆಕೆನ್ಸಿ ಇದೆ ! ನಿತೀಶ್ ಕುಮಾರ್ಗೆ ಪ್ರಧಾನಿಯಾಗುವ ಎಲ್ಲ ಅರ್ಹತೆಗಳೂ ಇವೆ ಎಂಬ ಹೇಳಿಕೆಗೆ ರಾಷ್ಟ್ರೀಯ ಜನತಾ ದಳ (RJD) ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ಆರ್ಜೆಡಿ ಶಾಸಕ ಭಾಯ್ ಬೀರೇಂದ್ರ, ನಮ್ಮ ದೇಶದಲ್ಲಿ ಪ್ರಧಾನಿ ಹುದ್ದೆಗೆ ವೆಕೆನ್ಸಿ ಇಲ್ಲ. ಸದ್ಯಕ್ಕೆ ಅಫ್ಘಾನಿಸ್ತಾನದಲ್ಲಿ ಖಾಲಿ ಇದೆ. ನಿತೀಶ್ ಕುಮಾರ್ ಇಚ್ಛಿಸಿದರೆ ಅಲ್ಲಿಗೆ ಅರ್ಜಿ ಸಲ್ಲಿಸಬಹುದು ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ಪ್ರಧಾನಿಯಾಗುವ ಎಲ್ಲ ಗುಣಗಳು ನಿತೀಶ್ ಕುಮಾರ್ ಅವರಲ್ಲಿದೆ ಎಂದ ಜೆಡಿಯು; ಇದು ಅಸಂಬದ್ಧ ಎಂದ ಬಿಹಾರ ಸಿಎಂ
ಚೀನಾದಲ್ಲಿ ಹೊಸ ರೂಲ್ಸ್: ವಾರಕ್ಕೆ 3 ಗಂಟೆ ಮಾತ್ರ ಆನ್ಲೈನ್ ಗೇಮ್ ಆಡುವ ಅವಕಾಶ
Sushil Modi refuses to comment on statement Nitish Kumar a PM Material)