AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿಯಾಗುವ ಎಲ್ಲ ಗುಣಗಳು ನಿತೀಶ್ ಕುಮಾರ್ ಅವರಲ್ಲಿದೆ ಎಂದ ಜೆಡಿಯು; ಇದು ಅಸಂಬದ್ಧ ಎಂದ ಬಿಹಾರ ಸಿಎಂ

ಸಭೆಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಹಿರಿಯ ಜೆಡಿಯು ನಾಯಕ ಕೆ.ಸಿ ತ್ಯಾಗಿ "ನಿತೀಶ್ ಕುಮಾರ್ ಅವರು ಪ್ರಧಾನಿ ಹುದ್ದೆಗೆ ಹಕ್ಕುದಾರರಲ್ಲ. ನಾವು ಎನ್ ಡಿಎಯಲ್ಲಿದ್ದೇವೆ ಮತ್ತು ಪ್ರಧಾನಿ ಹುದ್ದೆಗೆ ನಮ್ಮ ಅಭ್ಯರ್ಥಿ ನರೇಂದ್ರ ಮೋದಿಯವರೇ.ಆದರೂ ನಿತೀಶ್ ಕುಮಾರ್ ಅವರು ಪ್ರಧಾನ ಮಂತ್ರಿಯಲ್ಲಿ ಅಗತ್ಯವಿರುವ ಎಲ್ಲಾ ಗುಣಗಳನ್ನು ಹೊಂದಿದ್ದಾರೆ

ಪ್ರಧಾನಿಯಾಗುವ ಎಲ್ಲ ಗುಣಗಳು ನಿತೀಶ್ ಕುಮಾರ್ ಅವರಲ್ಲಿದೆ ಎಂದ ಜೆಡಿಯು; ಇದು ಅಸಂಬದ್ಧ ಎಂದ ಬಿಹಾರ ಸಿಎಂ
ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Aug 30, 2021 | 12:41 PM

Share

ಪಟನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರು ಪ್ರಧಾನಿಯಾಗುವ ಎಲ್ಲಾ ಗುಣಗಳನ್ನು ಹೊಂದಿದ್ದಾರೆ ಆದರೆ ಅವರು ಆ ಹುದ್ದೆಯ ರೇಸ್​ನಲ್ಲಿಲ್ಲ ಎಂದು ಅವರ ಪಕ್ಷ ಜನತಾ ದಳ (ಯುನೈಟೆಡ್) ಭಾನುವಾರ ಸಂಜೆ ಪಾಟ್ನಾದಲ್ಲಿ ನಡೆದ ರಾಷ್ಟ್ರೀಯ ಕೌನ್ಸಿಲ್ ಸಭೆಯ ನಂತರ ಹೇಳಿದೆ. ಈ ವಿಷಯದ ಬಗ್ಗೆ ಕೇಳಿದಾಗ ಕುಮಾರ್ ಇದನ್ನು “ಅಸಂಬದ್ಧ” ಎಂದು ಕರೆದರು. “ನಾನು ಇದನ್ನು ಬಯಸುವುದಿಲ್ಲ ಅಥವಾ ನಿರೀಕ್ಷಿಸುವುದಿಲ್ಲ” ಎಂದು ಅವರು ಹೇಳಿದರು.

ಸಭೆಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಹಿರಿಯ ಜೆಡಿಯು ನಾಯಕ ಕೆ.ಸಿ ತ್ಯಾಗಿ “ನಿತೀಶ್ ಕುಮಾರ್ ಅವರು ಪ್ರಧಾನಿ ಹುದ್ದೆಗೆ ಹಕ್ಕುದಾರರಲ್ಲ. ನಾವು ಎನ್ ಡಿಎಯಲ್ಲಿದ್ದೇವೆ ಮತ್ತು ಪ್ರಧಾನಿ ಹುದ್ದೆಗೆ ನಮ್ಮ ಅಭ್ಯರ್ಥಿ ನರೇಂದ್ರ ಮೋದಿಯವರೇ.ಆದರೂ ನಿತೀಶ್ ಕುಮಾರ್ ಅವರು ಪ್ರಧಾನ ಮಂತ್ರಿಯಲ್ಲಿ ಅಗತ್ಯವಿರುವ ಎಲ್ಲಾ ಗುಣಗಳನ್ನು ಹೊಂದಿದ್ದಾರೆ” ಎಂದು ಹೇಳಿರುವುದಾಗಿ ಎನ್​​ಡಿಟಿವಿ ವರದಿ ಮಾಡಿದೆ.

ಈ ತಿಂಗಳ ಆರಂಭದಲ್ಲಿ ಹಿರಿಯ ಜೆಡಿಯು ನಾಯಕ ಉಪೇಂದ್ರ ಕುಶ್ವಾಹ ಅವರು ಜೆಡಿಯು ಸಂಸದೀಯ ಪಕ್ಷದ ನಾಯಕರಾಗಿ ನೇಮಕವಾದ ನಂತರ ನಿತೀಶ್ ಕುಮಾರ್ ಅವರನ್ನು ಪ್ರಧಾನಿಯಾಗಲು ಯೋಗ್ಯರಾದವರು ಎಂದು ಹೇಳಿದ್ದರು.

“ಜನರು ಇಂದು ನರೇಂದ್ರ ಮೋದಿಯವರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಿದರು ಮತ್ತು ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಆದರೆ ದೇಶದಲ್ಲಿ ಇತರರು ಪ್ರಧಾನಿಯಾಗುವ ಸಾಮರ್ಥ್ಯ ಹೊಂದಿದ್ದಾರೆ. ಅವರಲ್ಲಿ ನಿತೀಶ್ ಕುಮಾರ್ ಇದ್ದಾರೆ. ಅವರನ್ನು ಪಿಎಂ ಮೆಟೀರಿಯಲ್ ಎಂದು ಕರೆಯಬೇಕು ಮತ್ತು ಇದು ಪ್ರಧಾನಿ ಮೋದಿಗೆ ಸವಾಲು ಹಾಕುವ ವಿಷಯವಲ್ಲ,” ಕುಶ್ವಾಹ ಹೇಳಿದ್ದಾರೆ.

ಆದಾಗ್ಯೂ, ನಿತೀಶ್ ಕುಮಾರ್ ಅವರು ಇದನ್ನು ತಳ್ಳಿಹಾಕಿದ್ದು “ಈ ರೀತಿ ಏನೂ ಇಲ್ಲ. ನಾನು ಯಾಕೆ ಪಿಎಂ ಮೆಟೀರಿಯಲ್ ಆಗಿರಬೇಕು? ನನಗೆ ಈ ಎಲ್ಲ ವಿಷಯಗಳಲ್ಲಿ ಆಸಕ್ತಿಯಿಲ್ಲ”.

ನಿತೀಶ್ ಕುಮಾರ್ ಪಿಎಂ ಮೆಟೀರಿಯಲ್ ಎಂದು ಕೆಲವು ನಾಯಕರು ಹೇಳಿದರು. ಆದರೆ ಯಾವುದೇ ಸ್ಥಾನ ಖಾಲಿ ಇಲ್ಲ. ಪಿಎಂ ಮೆಟೀರಿಯಲ್ ಮತ್ತು ಹಕ್ಕು ಸಾಧಿಸುವುದು ಬೇರೆ ಬೇರೆ ವಿಷಯಗಳು.ಅಲ್ಲಿ ಸ್ವರ್ಗ ಮತ್ತು ನರಕದ ಅಂತವಿದೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಲಲ್ಲನ್ ಸಿಂಗ್ ಹೇಳಿದರು.

ಜೆಡಿಯು ಇತರ ಹಲವು ನಿರ್ಣಯಗಳನ್ನು ಅಂಗೀಕರಿಸಿದೆ. ಇದು ಬಿಜೆಪಿಯನ್ನು ಮೆಚ್ಚಿಸುವ ನಿರೀಕ್ಷೆಯಿಲ್ಲ. ಇವುಗಳಲ್ಲಿ ಜಾತಿ ಆಧಾರಿತ ಜನಗಣತಿಯನ್ನು ಖಾತ್ರಿಪಡಿಸುವುದು ಮತ್ತು ರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಹಿಂದುಳಿದ ಜಾತಿಗಳನ್ನು ಗುರುತಿಸಲು ಕೇಂದ್ರ ಸರ್ಕಾರವು ರಚಿಸಿದ ರೋಹಿಣಿ ಆಯೋಗದ ಸಂಶೋಧನೆಗಳನ್ನು ಸಾರ್ವಜನಿಕಗೊಳಿಸುವ ನಿರ್ಣಯ ಅಂಗೀಕರಿಸಿದೆ.

ಜನಸಂಖ್ಯಾ ನಿಯಂತ್ರಣದ ವಿಷಯದಲ್ಲಿ ಪಕ್ಷವು ಬಿಜೆಪಿಯೊಂದಿಗೆ ಭಿನ್ನವಾಗಿದೆ ಮತ್ತು ಇನ್ನೊಂದು ನಿರ್ಣಯದಲ್ಲಿ ಕಾನೂನನ್ನು ರೂಪಿಸುವ ಬದಲು ಸಾರ್ವಜನಿಕ ಜಾಗೃತಿ ಮತ್ತು ಹೆಣ್ಣು ಮಕ್ಕಳಲ್ಲಿ ಶಿಕ್ಷಣವು ಜನಸಂಖ್ಯೆಯ ಬೆಳವಣಿಗೆಯನ್ನು ಪರೀಕ್ಷಿಸುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ಹೇಳಿದೆ. ನಿತೀಶ್ ಕುಮಾರ್ ಅವರು ಮುಂದಿನ ವರ್ಷ ಬಿಜೆಪಿಯಿಂದ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸೀಟುಗಳ ಹಕ್ಕನ್ನು ಪಡೆಯುವುದನ್ನು ಖಾತ್ರಿಪಡಿಸಿಕೊಂಡರು.ಇಲ್ಲದಿದ್ದರೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಕ್ತವಾಗಿರುತ್ತದೆ. ಆದರೆ ಮೊದಲ ಆದ್ಯತೆ ಎನ್‌ಡಿಎ ಮೈತ್ರಿಕೂಟದ ಭಾಗವಾಗಿ ಸ್ಪರ್ಧಿಸುವುದು ಎಂದು ತ್ಯಾಗಿ ಹೇಳಿದರು.

ಇದನ್ನೂ ಓದಿ:  Mann ki Baat: ದೇಶದ ಯುವ ಜನರು ಬದಲಾಗುತ್ತಿದ್ದಾರೆ, ರಿಸ್ಕ್​ ತೆಗೆದುಕೊಳ್ಳಲು ಮುಂದಡಿ ಇಡುತ್ತಿದ್ದಾರೆ: ಪ್ರಧಾನಿ ಮೋದಿ

(Bihar CM Nitish Kumar Has All Qualities Of A PM says JDU he called it nonsense)

ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ