ಚೀನಾದಲ್ಲಿ ಹೊಸ ರೂಲ್ಸ್: ವಾರಕ್ಕೆ 3 ಗಂಟೆ ಮಾತ್ರ ಆನ್ಲೈನ್ ಗೇಮ್ ಆಡುವ ಅವಕಾಶ
ಇಂದಿನ ಹದಿಹರೆಯದವರು ನಮ್ಮ ದೇಶದ ಭಾವಿ ಪ್ರಜೆಗಳು. ದೇಶದ ಭವಿಷ್ಯದ ದೃಷ್ಟಿಯಿಂದ ವಿಡಿಯೋ ಗೇಮ್‌ಗಳಿಗೆ ನಿಯಂತ್ರಣ ಹೇರಲಾಗಿದೆ ಎಂದು ಚೀನಾದ ನ್ಯಾಷನಲ್ ಪ್ರೆಸ್ ಮತ್ತು ಪಬ್ಲಿಕೇಶನ್ ಅಡ್ಮಿನಿಸ್ಟ್ರೇಷನ್ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.
ಈಗಿನ ಯುವ ಪೀಳಿಗೆಯು ಆನ್ಲೈನ್ ವಿಡಿಯೋ ಗೇಮ್‌ಗಳಿಗೆ (Online Game) ಆಡಿಕ್ಟ್ ಆಗಿರುವುದನ್ನು ಕಂಡು ಚೀನಾ (China) ಸರ್ಕಾರ ಹೊಸ ನಿಯಮವನ್ನು ಜಾರಿಗೆ ತಂದಿದೆ. ಅದರ ಪ್ರಕಾರ, ಚೀನಾದಲ್ಲಿ ವಾರದಲ್ಲಿ ಕೇವಲ ಮೂರು ಗಂಟೆಗಳ ಕಾಲ ಮಾತ್ರ ಆನ್ಲೈನ್ ವಿಡಿಯೋ ಗೇಮ್ ಆಡಬೇಕು. ಮೂರು ಗಂಟೆ ಮೀರಿದ ಆಟಕ್ಕೆ ಅನುಮತಿಯಿಲ್ಲ ಎಂಬ ಆದೇಶ ಹೊರಡಿಸಿದೆ.
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮತ್ತು ಹದಿ ಹರೆಯದವರು ವಾರದಲ್ಲಿ ಮೂರು ಗಂಟೆಗಳವರೆಗೆ ಮಾತ್ರ ಆನ್ಲೈನ್ ವಿಡಿಯೋ ಗೇಮ್ ಆಡಲು ಅವಕಾಶ ನೀಡಿದೆ. ಪ್ರತಿ ಭಾನುವಾರ, ಶುಕ್ರವಾರ, ಶನಿವಾರಗಳಂದು ರಾತ್ರಿ 8 ರಿಂದ 9ರವರೆಗೆ ಮಾತ್ರ ವಿಡಿಯೋ ಗೇಮ್‌ಗಳನ್ನು ಆಡಬಹುದು. ಸಾರ್ವತ್ರಿಕ ರಜಾದಿನಗಳಲ್ಲಿ ಹೆಚ್ಚುವರಿಯಾಗಿ ಒಂದು ಗಂಟೆ ಆಡಲು ಸಿಗಲಿದೆ.
ಇಂದಿನ ಹದಿಹರೆಯದವರು ನಮ್ಮ ದೇಶದ ಭಾವಿ ಪ್ರಜೆಗಳು. ದೇಶದ ಭವಿಷ್ಯದ ದೃಷ್ಟಿಯಿಂದ ವಿಡಿಯೋ ಗೇಮ್‌ಗಳಿಗೆ ನಿಯಂತ್ರಣ ಹೇರಲಾಗಿದೆ ಎಂದು ಚೀನಾದ ನ್ಯಾಷನಲ್ ಪ್ರೆಸ್ ಮತ್ತು ಪಬ್ಲಿಕೇಶನ್ ಅಡ್ಮಿನಿಸ್ಟ್ರೇಷನ್ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.
ಚೀನಾ ಜಾರಿಗೆ ತಂದಿರುವ ಈ ಹೊಸ ನಿಯಮದಿಂದಾಗಿ ಗೇಮಿಂಗ್ ಸಂಸ್ಥೆಗಳ ಮೇಲೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಅದರಲ್ಲೂ ಟೆನ್ಸೆಂಟ್ (Tencent), ನೆಟ್ಈಸ್ (NetEase) ಕಂಪನಿಗಳು ತಲೆಕೆಡಿಸಿಕೊಳ್ಳುವಂತಾಗಿದೆ.
ಆನ್ಲೈನ್ ಗೇಮ್ ಸೇವೆಯನ್ನು ಒದಗಿಸುವ ಕಂಪನಿಗಳಿಗೆ ಈ ನಿಯಮ ಅನ್ವಯವಾಗಲಿದ್ದು, ನಿಗದಿತ ಸಮಯವರೆಗೆ ಮಾತ್ರ ಆಡಲು ಅವಕಾಶ ನೀಡಬೇಕಿದೆ ಎಂದು ಹೇಳಿದೆ. ಜುಲೈನಲ್ಲಿ, ಟೆನ್ಸೆಂಟ್ (Tencent) ಸಂಸ್ಥೆಗೆ ಗೇಮರುಗಳು ವಯಸ್ಕರಾಗಿದ್ದಾರೆಯೇ ಎಂದು ಪರಿಶೀಲಿಸಲು ಅವರ ಫೋನ್ನಲ್ಲಿ ಮುಖ ಸ್ಕ್ಯಾನ್ ಮಾಡುವ ಆಯ್ಕೆಯನ್ನು ಪರಿಚಯಿಸಲಾಗಿತ್ತು.
ನಿಕೊ ಪಾರ್ಟ್ನರ್ಸ್ನ ಹಿರಿಯ ವಿಶ್ಲೇಷಕ ಡೇನಿಯಲ್ ಅಹ್ಮದ್, ಮಕ್ಕಳು ಆನ್ಲೈನ್ ಗೇಮಿಂಗ್ನಲ್ಲಿ ತೊಡಗಿಸಿಕೊಳ್ಳುವುದನ್ನು ಕಂಡು, “ಇಂದು ಚೀನಾದಲ್ಲಿ 110 ಮಿಲಿಯನ್ ಅಪ್ರಾಪ್ತರು ವಿಡಿಯೋ ಗೇಮ್‌ಗಳನ್ನು ಆಡುತ್ತಾರೆ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಆಟಕ್ಕಾಗಿ ಖರ್ಚು ಮಾಡುತ್ತಿರುವುದಲ್ಲದೆ, ಸಮಯವನ್ನು ವ್ಯರ್ಥಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇನ್ನು ಚೀನಾದ ಗೇಮಿಂಗ್ ದೈತ್ಯ ನೆಟ್‌ಇಸ್ (NetEase) ಮಕ್ಕಳ ಆನ್ಲೈನ್ ಗೇಮಿಂಗ್ ನಿಯಮದಿಂದಾಗಿ ಈಗಾಗಲೇ ಶೇ. 4ರಷ್ಟು ಷೇರು ಕುಸಿದಿದೆ.
Vivo X70: ಬಹುನಿರೀಕ್ಷಿತ ವಿವೋ X70 ಸರಣಿ ಸ್ಮಾರ್ಟ್ಫೋನ್ ಅನಾವರಣಕ್ಕೆ ದಿನಾಂಕ ಫಿಕ್ಸ್: ಭರ್ಜರಿ ಫೀಚರ್ಸ್
ರಿಯಲ್ ಮಿಯ ಬರೋಬ್ಬರಿ 5 ಸ್ಮಾರ್ಟ್ಫೋನ್ ಬೆಲೆಯಲ್ಲಿ ದಿಢೀರ್ ಏರಿಕೆ: ನೂತನ ದರ ಇಲ್ಲಿದೆ
(China limits childrens online gaming to three hours a week)