ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ನೂತನ ಸಂಸತ್ ಭವನ (New Parliament Building) ಉದ್ಘಾಟನೆ ಯಾಗುವುದನ್ನು (inauguration) ವಿರೋಧಿಸಿ ಕಾರ್ಯಕ್ರಮ ಬಹಿಷ್ಕರಿಸಲು ನಿರ್ಧರಿಸಿದ್ದ ವಿಪಕ್ಷ ನಾಯಕರಿಗೆ ಭಾರೀ ಮುಖಭಂಗವಾಗಿದೆ. ರಾಷ್ಟ್ರಪತಿಯವರಿಂದಲೇ ಉದ್ಘಾಟನೆಯಾಗಬೇಕು ಎಂದು ಲೋಕಸಭೆ ಕಾರ್ಯಾಲಯಕ್ಕೆ ನಿರ್ದೇಶನ ನೀಡಲು ಸುಪ್ರೀಂ ಕೋರ್ಟ್ (Supreme Court) ನಿರಾಕರಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಸುಪ್ರೀಂ ಕೋರ್ಟ್ ನ ಈ ನಿರ್ಧಾರ ವಿಪಕ್ಷಗಳಿಗೆ ಮಾಡಿದ ಕಪಾಳಮೋಕ್ಷದಂತಿದೆ ಎಂದಿದ್ದಾರೆ. ಸುಪ್ರೀಂ ಕೋರ್ಟ್ ನ ತೀರ್ಪಿನ ಬೆನ್ನಲ್ಲೇ ಟ್ವೀಟರ್ ಮೂಲಕ ವಿಪಕ್ಷ ನಾಯಕರಿಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi), ಸಂಸತ್ ಭವನದ ಉದ್ಘಾಟನೆ ವಿಚಾರದಲ್ಲಿ ರಾಜಕೀಯ ಮಾಡಿದ ವಿಪಕ್ಷಗಳಿಗೆ ನ್ಯಾಯಾಲಯ ಪಾಳಮೋಕ್ಷ ಮಾಡಿದೆ ಎಂದಿದ್ದಾರೆ.
ನೂತನ ಸಂಸತ್ ಕಟ್ಟಡ ರಾಷ್ಟ್ರಪತಿಗಳಿಂದ ಉದ್ಘಾಟಿಸುವಂತೆ ನಿರ್ದೇಶನ ಕೋರಿ ಅಡ್ವೋಕೇಟ್ ಜಯಾ ಅವರು ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಕುರಿತಂತೆ ಲೋಕಸಭೆ ಕಾರ್ಯಾಲಯಕ್ಕೆ ನಿರ್ದೇಶನ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಆರ್ಟಿಕಲ್ 79ಕ್ಕೂ, ಪಾರ್ಲಿಮೆಂಟ್ ಮತ್ತು ರಾಷ್ಟ್ರಪತಿಗಳ ಕುರಿತು ಹೇಳಿರುವ ಅಂಶಕ್ಕೂ, ಪಾರ್ಲಿಮೆಂಟ್ ಉದ್ಘಾಟನೆಗೂ ಏನು ಸಂಬಂಧ ಅಂತಾ ಪ್ರಶ್ನಿಸಿದ ಸುಪ್ರೀಂ ಕೋರ್ಟ್, ಇದೇ ವೇಳೆ ಈ ಅರ್ಜಿ ಸಲ್ಲಿಕೆಯ ಉದ್ದೇಶ ನಮಗೆ ಅರ್ಥವಾಗುತ್ತದೆ ಎಂದು ಸೂಕ್ಷ್ಮವಾಗಿ, ತೀಕ್ಷ್ಣವಾಗಿ ಹೇಳಿದೆ.
Truth Prevails: Hon’ble Supreme Court’s decision is a tight slap on the face of hate-mongers and those with divisive agenda. Will the Congress & it’s friends now end their antics and theatrics once and for all? https://t.co/tNFKUZ7tpr
— Pralhad Joshi (@JoshiPralhad) May 26, 2023
ಸಂಸತ್ ಭವನ ದೇಶದ ಹೆಮ್ಮೆಯ ಪ್ರತೀಕ ಎಂಬುದು ಎಲ್ಲರ ಗಮನದಲ್ಲಿರಲಿ. ನ್ಯಾಯಾಲಯ ಛೀಮಾರಿ ಹಾಕಿದ ಮೇಲಾದರೂ ಇಂತಹ ಕಾರ್ಯಕ್ರಮಗಳಲ್ಲಿ ರಾಜಕೀಯ ಬೆರೆಸುವುದನ್ನ ವಿಪಕ್ಷಗಳು ಬಿಡಲಿ ಎಂದು ಜೋಶಿ ಅವರು ವಿಪಕ್ಷ ನಾಯಕರಿಗೆ ಕಿವಿಮಾತು ಹೇಳಿದ್ದಾರೆ. ಬಹಿಷ್ಕಾರದ ನಡೆಯಿಂದ ಹಿಂದೆ ಸರಿದು, ವಿಪಕ್ಷ ನಾಯಕರು ಇನ್ನಾದರೂ ನೂತನ ಸಂಸತ್ ಭವನ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿಯವರು ಮನವಿ ಮಾಡಿದ್ದಾರೆ.
Published On - 6:15 pm, Fri, 26 May 23