ಯುಪಿ ಮದರಸಾ ಕಾಯ್ದೆ ರದ್ದುಗೊಳಿಸಿದ ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ

ಮದರಸಾ ಎಜುಕೇಶನ್ ಆಕ್ಟ್ 2004' ಅಸಂವಿಧಾನಿಕ ಎಂದು ಅಲಹಾಬಾದ್ ಹೈಕೋರ್ಟ್ ಮಾರ್ಚ್ 22 ರಂದು ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಶುಕ್ರವಾರ (ಏಪ್ರಿಲ್ 5) ತಡೆಹಿಡಿದಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಈ ಆದೇಶವನ್ನು ನೀಡಿದೆ. ಹೈಕೋರ್ಟ್ ಈ ಕಾಯ್ದೆಯ ನಿಬಂಧನೆಗಳನ್ನು ತಪ್ಪಾಗಿ ಅರ್ಥಮಾಡಿಕೊಂಡಿದೆ ಎಂದು ಹೇಳಲಾಗಿದೆ.

ಯುಪಿ ಮದರಸಾ ಕಾಯ್ದೆ ರದ್ದುಗೊಳಿಸಿದ ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ
ಸುಪ್ರೀಂ ಕೋರ್ಟ್
Follow us
|

Updated on: Apr 05, 2024 | 2:19 PM

ಉತ್ತರ ಪ್ರದೇಶ ಬೋರ್ಡ್ ಆಫ್ ಮದರಸಾ ಎಜುಕೇಶನ್ ಆಕ್ಟ್ 2004′ ಅಸಂವಿಧಾನಿಕ ಎಂದು ಅಲಹಾಬಾದ್ ಹೈಕೋರ್ಟ್ ಮಾರ್ಚ್ 22 ರಂದು ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಶುಕ್ರವಾರ (ಏಪ್ರಿಲ್ 5) ತಡೆಹಿಡಿದಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಈ ಆದೇಶವನ್ನು ನೀಡಿದೆ. ಹೈಕೋರ್ಟ್ ಈ ಕಾಯ್ದೆಯ ನಿಬಂಧನೆಗಳನ್ನು ತಪ್ಪಾಗಿ ಅರ್ಥಮಾಡಿಕೊಂಡಿದೆ ಎಂದು ಹೇಳಲಾಗಿದೆ.

ಹೈಕೋರ್ಟಿನ ಈ ತೀರ್ಪಿನಿಂದ ಸುಮಾರು 17 ಲಕ್ಷ ವಿದ್ಯಾರ್ಥಿಗಳ ಭವಿಷ್ಯದ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತವೆ ಆದೇಶಕ್ಕೆ ಸುಪ್ರೀಂ ತಡೆಯಾಜ್ಞೆ ನೀಡಿದೆ. ಈ ಕಾಯಿದೆಯು ಯಾವುದೇ ಧಾರ್ಮಿಕ ಸೂಚನೆಗಳನ್ನು ಒದಗಿಸುವುದಿಲ್ಲ. ಮದರಸಾದ ಮಂಡಳಿಯ ಸ್ಥಾಪನೆಯು ಜಾತ್ಯತೀತತೆಯನ್ನು ಉಲ್ಲಂಘಿಸುತ್ತದೆ ಎಂಬ ಹೈಕೋರ್ಟ್‌ನ ಹೇಳಿಕೆ ಬಗ್ಗೆ ಅಲ್ಲಿನ ಅಧಿಕಾರಿಗಳೊಂದಿಗೆ ಮಾತನಾಡುತ್ತೇವೆ ಎಂದು ಹೇಳಿದ್ದಾರೆ.

ಮದರಸದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಮದರಸ ಹೊಡೆದು ಹಾಕುವುದು ಸರಿಯಲ್ಲ, ಗುಣಮಟ್ಟದ ಶಿಕ್ಷಣ ನೀಡುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಎಲ್ಲಾ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣವನ್ನು ಪಡೆಯಲು ರಾಜ್ಯವು ಕಾನೂನುಬದ್ಧ ಸಾರ್ವಜನಿಕ ಹಿತಾಸಕ್ತಿ ತರಬೇಕು. 2004 ರಲ್ಲಿ ಜಾರಿಗೊಳಿಸಲಾದ ಸಂಪೂರ್ಣ ಕಾನೂನನ್ನು ತಿರಸ್ಕರಿಸುವ ಅಗತ್ಯವಿದೆಯೇ ಎಂದು ಸುಪ್ರೀಂ ಹೇಳಿದೆ.

ಈ ಕುರಿತು ಅಂಜುಮ್ ಕಡಾರಿ, ಮ್ಯಾನೇಜರ್ಸ್ ಅಸೋಸಿಯೇಷನ್ ​​ಮದರಿಸ್ ಅರೇಬಿಯಾ (ಯುಪಿ), ಅಖಿಲ ಭಾರತ ಶಿಕ್ಷಕರ ಸಂಘ ಮದರಿಸ್ ಅರೇಬಿಯಾ (ಹೊಸದಿಲ್ಲಿ), ಮ್ಯಾನೇಜರ್ ಅಸೋಸಿಯೇಶನ್ ಅರ್ಬಿ ಮದರ್ಸಾ ನಾಯ್ ಬಜಾರ್ ಮತ್ತು ಶಿಕ್ಷಕರ ಸಂಘ ಮದರಿಸ್ ಅರೇಬಿಯಾ ಕಾನ್ಪುರ್ ಅರ್ಜಿಯನ್ನು ಸಲ್ಲಿಸಿದೆ. ಉತ್ತರ ಪ್ರದೇಶ ರಾಜ್ಯದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ , ರಾಜ್ಯ ಸರ್ಕಾರ ಹೈಕೋರ್ಟ್ ತೀರ್ಪನ್ನು ಒಪ್ಪಿಕೊಳ್ಳುತ್ತಿದೆ. ಹೈಕೋರ್ಟ್‌ನಲ್ಲಿ ರಾಜ್ಯವು ತನ್ನ ಕಾನೂನನ್ನು ಸಮರ್ಥಿಸಿಕೊಂಡರೂ ಏಕೆ ಅದನ್ನು ಸಮರ್ಥಿಸುತ್ತಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನ್ಯಾಯಪತ್ರ: 2024ರ ಲೋಕಸಭಾ ಚುನಾವಣೆಗೆ ಪ್ರಣಾಳಿಕೆ ಬಿಡುಗಡೆ ಮಾಡಿದ ಕಾಂಗ್ರೆಸ್​

ಮ್ಯಾನೇಜರ್ಸ್ ಅಸೋಸಿಯೇಷನ್ ​​ಮದರಿಸ್ ಪರ ವಾದ ಮಂಡಿಸಿದ ಹಿರಿಯ ವಕೀಲ ಡಾ.ಅಭಿಷೇಕ್ ಮನು ಸಿಂಘಿ , ಮದರ್ಸಾ ಆಡಳಿತವು 120 ವರ್ಷಗಳಿಂದ ಇದ್ದ ಯಥಾಸ್ಥಿತಿಯಾಗಿದ್ದು, ಈಗ ಹಠಾತ್ತನೆ ಅಸ್ತವ್ಯಸ್ತವಾಗಿದೆ, 17 ಲಕ್ಷ ವಿದ್ಯಾರ್ಥಿಗಳು ಮತ್ತು 10,000 ಶಿಕ್ಷಕರ ಮೇಲೆ ಪರಿಣಾಮ ಬೀರಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ