Nimisha Priya: ಸುಪ್ರೀಂಕೋರ್ಟ್ನಲ್ಲಿ ಇಂದು ನಿಮಿಷಾ ಪ್ರಿಯಾ ಪ್ರಕರಣದ ವಿಚಾರಣೆ
ಯೆಮೆನ್‌ನಲ್ಲಿ ಮರಣದಂಡನೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರನ್ನು ರಕ್ಷಿಸಲು ರಾಜತಾಂತ್ರಿಕ ಮಾರ್ಗಗಳನ್ನು ಬಳಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಕೆಯಾದ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಗೆ ಸೂಚಿಸಿತ್ತು. ನಿಮಿಷಾ ಅವರನ್ನು ಜುಲೈ 16ರಂದು ಗಲ್ಲಿಗೇರಿಸಲು ನಿರ್ಧರಿಸಲಾಗಿತ್ತು ಬಳಿಕ ಗಲ್ಲು ಶಿಕ್ಷೆಯನ್ನು ಮುಂದೂಡಲಾಗಿತ್ತು.

ನವದೆಹಲಿ, ಜುಲೈ 18: ಯೆಮೆನ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ(Nimisha Priya) ಪ್ರಕರಣದ ಕುರಿತು ಸುಪ್ರೀಂಕೋರ್ಟ್ ಇಂದು ವಿಚಾರಣೆ ನಡೆಸಲಿದೆ. ನಿಮಿಷಾ ಪ್ರಿಯಾರಿಗೆ ಕ್ಷಮಾದಾನ ನೀಡುವುದು, ಸಂತ್ರಸ್ತರ ಕುಟುಂಬದೊಂದಿಗೆ ಮಾತುಕತೆ ನಡೆಸಲು ರಾಜತಾಂತ್ರಿಕ-ಮಧ್ಯಸ್ಥಿಕೆ ತಂಡವನ್ನು ನೇಮಿಸಲು ಸೇವ್ ನಿಮಿಷಾ ಪ್ರಿಯಾ ಇಂಟರ್ನ್ಯಾಷನಲ್ ಆಕ್ಷ್ಯನ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಪೀಠ ಇಂದು ಕೈಗೆತ್ತಿಕೊಳ್ಳಲಿದೆ.
ಸೇವ್ ನಿಮಿಷಾ ಪ್ರಿಯಾ ಇಂಟರ್ನ್ಯಾಷನಲ್ ಆಕ್ಷನ್ ಕೌನ್ಸಿಲ್‌ನ ಕೋರ್ ಕಮಿಟಿ ಸದಸ್ಯ ದಿನೇಶ್ ನಾಯರ್, ಕೇರಳದಲ್ಲಿರುವ ನಿಮಿಷಾ ಪ್ರಿಯಾ ಅವರ ಮಗಳು ಮತ್ತು ಅವರ ವಯಸ್ಸಾದ ತಾಯಿಯ ಸ್ಥಿತಿಯನ್ನು ಪರಿಗಣಿಸಿ, ಅವರ ಜೀವವನ್ನು ಉಳಿಸಲು ಎಲ್ಲರೂ ಕೈಜೋಡಿಸಿ ಎಂದು ಮನವಿ ಮಾಡುತ್ತೇವೆ ಎಂದರು.
ಪ್ರಕರಣದ ಹಿನ್ನೆಲೆ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರು 2017 ರಲ್ಲಿ ತಮ್ಮ ಯೆಮೆನ್ ಬಿಜಿನೆಸ್ ಪಾರ್ಟ್ನರ್ ತಲಾಲ್ ಅಬ್ದೋ ಮೆಹ್ದಿ ಅವರನ್ನು ಕೊಲೆ ಮಾಡಿದ ಆರೋಪದಲ್ಲಿ ಶಿಕ್ಷೆಗೊಳಗಾಗದ್ದರು. ಅವರಿಗೆ ಮರಣದಂಡನೆ ವಿಧಿಸಲಾಯಿತು ಮತ್ತು ಮೇಲ್ಮನವಿ ಸಲ್ಲಿಸುವ ಪ್ರಯತ್ನಗಳ ಹೊರತಾಗಿಯೂ, ಯೆಮೆನ್‌ನ ಉನ್ನತ ನ್ಯಾಯಾಲಯಗಳು ಅವರ ಶಿಕ್ಷೆಯನ್ನು ಎತ್ತಿಹಿಡಿದವು.
ಈಗ ಅವರ ಬಿಡುಗಡೆಗೆ ಇರುವ ಏಕೈಕ ಆಶಯವೆಂದರೆ ಯೆಮೆನ್‌ನ ಶರಿಯಾ ಕಾನೂನಿನಡಿಯಲ್ಲಿ ಅನುಮತಿಸಲಾದ ಬ್ಲಡ್ ಮನಿ ಒಪ್ಪಂದದ ಮೂಲಕ ಮೆಹ್ದಿಯ ಕುಟುಂಬದಿಂದ ಕ್ಷಮಾದಾನ ಪಡೆಯುವುದು. ಆದರೆ ಈ ಬ್ಲಡ್ ಮನಿ ಪಡೆಯಲು ನಿರಾಕರಿಸಿದೆ. ನಿಮಿಷಾರ ಗಲ್ಲು ಶಿಕ್ಷೆ ಬಹುತೇಕ ಖಚಿತವಾಗಿದೆ.
ಮತ್ತಷ್ಟು ಓದಿ: ಬ್ಲಡ್ ಮನಿ ನಿರಾಕರಿಸಿದ ಮೃತನ ಸೋದರ; ಯೆಮೆನ್‌ನಲ್ಲಿ ಕೇರಳದ ನರ್ಸ್ ನಿಮಿಷಾ ಪ್ರಿಯಾ ಗಲ್ಲು ಬಹುತೇಕ ಖಚಿತ
ಮೆಹ್ದಿಯ ಕುಟುಂಬದೊಂದಿಗೆ ಮಾತುಕತೆ ನಡೆಸಲು 6 ಸದಸ್ಯರ ರಾಜತಾಂತ್ರಿಕ-ಮಧ್ಯಸ್ಥಿಕೆ ತಂಡವನ್ನು ಸೇವ್ ನಿಮಿಷಾ ಪ್ರಿಯಾ ಅಂತಾರಾಷ್ಟ್ರೀಯ ಕ್ರಿಯಾ ಮಂಡಳಿ ಪ್ರಸ್ತಾಪಿಸಿದೆ. ತಂಡವು ಈ ಕೆಳಗಿನವರನ್ನು ಒಳಗೊಂಡಿರುತ್ತದೆ.
– ಕ್ರಿಯಾ ಮಂಡಳಿಯ ಇಬ್ಬರು ಪ್ರತಿನಿಧಿಗಳು – ಸುಭಾಷ್ ಚಂದ್ರನ್ ಕೆ ಆರ್: ಸುಪ್ರೀಂ ಕೋರ್ಟ್ ವಕೀಲ ಮತ್ತು ಪರಿಷತ್ತಿನ ಕಾನೂನು ಸಲಹೆಗಾರ – ಕುಂಜಮ್ಮದ್ ಕೂರಾಚುಂಡ್: ಪರಿಷತ್ತಿನ ಖಜಾಂಚಿ – ಮರ್ಕಜ್‌ನಿಂದ ಇಬ್ಬರು ಪ್ರತಿನಿಧಿಗಳು: – ಹುಸೇನ್ ಸಖಾಫಿ: ಮುಸ್ಲಿಂ ವಿದ್ವಾಂಸ – ಹಮೀದ್: ಯೆಮೆನ್‌ನಲ್ಲಿ ಸಂಪರ್ಕ ಹೊಂದಿರುವ ವ್ಯಕ್ತಿ – ಕೇಂದ್ರ ಸರ್ಕಾರದಿಂದ ನಾಮನಿರ್ದೇಶನಗೊಂಡ ಇಬ್ಬರು ಅಧಿಕಾರಿಗಳು: ಮಾತುಕತೆಗಳನ್ನು ಬೆಂಬಲಿಸಲು ಸರ್ಕಾರದಿಂದ ನೇಮಕಗೊಳ್ಳಲಿದ್ದಾರೆ
ಇಂದು, ಸುಪ್ರೀಂ ಕೋರ್ಟ್ ಅನುಕೂಲಕರ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂದು ನಾವು ಭಾವಿಸುತ್ತೇವೆ, ಇದು ಮೃತರ ಕುಟುಂಬದೊಂದಿಗೆ ಮಾತುಕತೆ ನಡೆಸಲು ಮತ್ತು ನಿಮಿಷಾ ಪ್ರಿಯಾಗೆ ಕ್ಷಮಾದಾನವನ್ನು ಪಡೆಯಲು ರಾಜತಾಂತ್ರಿಕ ತಂಡವನ್ನು ನೇಮಿಸಲು ದಾರಿ ಮಾಡಿಕೊಡುತ್ತದೆ ಎಂದು ನಾಯರ್ ಹೇಳಿದರು.
ಮಿತ್ರದೇಶಗಳೊಂದಿಗೆ ಸಂಪರ್ಕ
ಯೆಮೆನ್ ನಲ್ಲಿ ಮರಣ ದಂಡನೆಗೆ ಗುರಿಯಾಗಿರುವ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಪ್ರಕರಣದಲ್ಲಿ ಪರಸ್ಪರ ಸಹಮತದ ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನಗಳ ಭಾಗವಾಗಿ ತಾನು ಯೆಮೆನ್ ಅಧಿಕಾರಿಗಳು ಮತ್ತು ಕೆಲವು ಮಿತ್ರದೇಶಗಳೊಂದಿಗೆ ಸಂಪರ್ಕದಲ್ಲಿದ್ದೇನೆ ಎಂದು ಕೇಂದ್ರ ಸರ್ಕಾರವು ಗುರುವಾರ ತಿಳಿಸಿತ್ತು.
ಇದೊಂದು ಸೂಕ್ಷ್ಮ ವಿಷಯವಾಗಿದ್ದು,ಭಾರತ ಸರಕಾರವು ಪ್ರಕರಣದಲ್ಲಿ ಸಾಧ್ಯವಿರುವ ಎಲ್ಲ ನೆರವನ್ನೂ ಒದಗಿಸುತ್ತಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು. ಯೆಮೆನ್ ಪ್ರಜೆಯೊಬ್ಬರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಕೇರಳದ ಪಾಲಕ್ಕಾಡ್ ಜಿಲ್ಲೆಯವರಾದ ನಿಮಿಷಾ ಅವರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. 2017ರಿಂದ ನಿಮಿಷ ಅವರು ಯೆಮನ್‌ನ ರಾಜಧಾನಿ ಸನಾದ ಜೈಲಿನಲ್ಲಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




