Bilkis Bano case ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳ ಬಿಡುಗಡೆ ಪ್ರಶ್ನಿಸಿ ಎನ್​​ಜಿಒ ಸಲ್ಲಿಸಿದ ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ

| Updated By: ರಶ್ಮಿ ಕಲ್ಲಕಟ್ಟ

Updated on: Oct 21, 2022 | 6:04 PM

ಈ ಪ್ರಕರಣದಲ್ಲಿ ಅಪರಾಧಿಗಳ ಶಿಕ್ಷೆ ಮತ್ತು ಬಿಡುಗಡೆಯನ್ನು ಪ್ರಶ್ನಿಸಿ ನ್ಯಾಷನಲ್ ಫೆಡರೇಶನ್ ಆಫ್ ಇಂಡಿಯನ್ ವುಮೆನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ

Bilkis Bano case ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳ ಬಿಡುಗಡೆ  ಪ್ರಶ್ನಿಸಿ ಎನ್​​ಜಿಒ ಸಲ್ಲಿಸಿದ ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ
ಬಿಲ್ಕಿಸ್ ಬಾನು
Follow us on

2002ರ ಬಿಲ್ಕಿಸ್ ಬಾನು (Bilkis Bano case) ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಯ ಹಿಂಪಡೆಯುವಿಕೆ ಮತ್ತು ಅಪರಾಧಿಗಳ ಬಿಡುಗಡೆಯನ್ನು ಪ್ರಶ್ನಿಸಿ ಮಹಿಳಾ ಸಂಘಟನೆಯೊಂದು ಸಲ್ಲಿಸಿದ ಹೊಸ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ (Supreme Court) ಶುಕ್ರವಾರ ಸಮ್ಮತಿಸಿದೆ. ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ಸಿ ಟಿ ರವಿಕುಮಾರ್ ಅವರ ಪೀಠವು ಈ ವಿಷಯವನ್ನು ಮುಖ್ಯ ಅರ್ಜಿಯೊಂದಿಗೆ ಸೇರಿಸಿದ್ದು ಅದರೊಂದಿಗೆ ವಿಚಾರಣೆ ನಡೆಸಲಾಗುವುದು ಎಂದು ಹೇಳಿರುವುದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಪ್ರಕರಣದಲ್ಲಿ ಅಪರಾಧಿಗಳ ಶಿಕ್ಷೆ ಮತ್ತು ಬಿಡುಗಡೆಯನ್ನು ಪ್ರಶ್ನಿಸಿ ನ್ಯಾಷನಲ್ ಫೆಡರೇಶನ್ ಆಫ್ ಇಂಡಿಯನ್ ವುಮೆನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ.  ಅಕ್ಟೋಬರ್ 18 ರಂದು, ನ್ಯಾಯಾಲಯವು ಪರಿಹಾರವನ್ನು ಪ್ರಶ್ನಿಸುವ ಅರ್ಜಿಗಳಿಗೆ ಗುಜರಾತ್ ಸರ್ಕಾರದ ಉತ್ತರವು ತುಂಬಾ ದೊಡ್ಡದಾಗಿದೆ.ಇದರಲ್ಲಿ ಸರಣಿ ತೀರ್ಪುಗಳನ್ನು ಉಲ್ಲೇಖಿಸಲಾಗಿದೆ ಆದರೆ ವಾಸ್ತವಿಕ ಹೇಳಿಕೆಗಳು ಕಾಣೆಯಾಗಿವೆ. ಗುಜರಾತ್ ಸರ್ಕಾರದ ಅಫಿಡವಿಟ್‌ಗೆ ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸಲು ಅರ್ಜಿದಾರರಿಗೆ ಸಮಯ ನೀಡಿದ್ದು ನವೆಂಬರ್ 29 ರಂದು ಈ ವಿಷಯವನ್ನು ವಿಚಾರಣೆ ನಡೆಸುವುದಾಗಿ ಹೇಳಿದೆ.

ಬಿಲ್ಕಿಸ್ ಬಾನು ಪ್ರಕರಣ

ಗೋಧ್ರಾ ರೈಲು ದಹನ ಘಟನೆಯ ನಂತರ ಭುಗಿಲೆದ್ದ ಗಲಭೆಯಿಂದ ಓಡಿಹೋಗುವಾಗ 21ರ ಹರೆಯದ ಬಿಲ್ಕಿಸ್ ಬಾನೋ ಆಗ ಐದು ತಿಂಗಳ ಗರ್ಭಿಣಿಯಾಗಿದ್ದಳು.ಆಕೆಯ ಮೇಲೆ ಸಾಮೂಹಿಕ ಅತ್ಯಾಚರ ನಡೆದಿದ್ದು ಆಕೆಯ ಕುಟುಂಬದ ಏಳು ಮಂದಿಯನ್ನು ಹತ್ಯೆ ಮಾಡಲಾಗಿತ್ತು. ಕೊಲೆಯಾದ ಸದಸ್ಯರಲ್ಲಿ ಆಕೆಯ ಮೂರು ವರ್ಷದ ಮಗಳೂ ಸೇರಿದ್ದಳು. ಈ ಪ್ರಕರಣದಲ್ಲಿ ಶಿಕ್ಷೆಗೊಳಗಾದ 11 ಮಂದಿಯನ್ನುಆಗಸ್ಟ್ 15 ರಂದು ಗೋಧ್ರಾ ಉಪ-ಜೈಲಿನಿಂದ ಸನ್ನಡತೆ ಆಧಾರ ಮೇಲೆ ಬಂಧಮುಕ್ತಗೊಳಿಸಲಾಗಿತ್ತು. ಅವರು 15 ವರ್ಷಗಳಿಗೂ ಹೆಚ್ಚು ಜೈಲು ವಾಸವನ್ನು ಪೂರ್ಣಗೊಳಿಸಿದ್ದರು.