ಈ ವರ್ಷದ ಕೊನೆಯ ಸೂರ್ಯಗ್ರಹಣವು ನಾಳೆ (ಡಿ.14) ನಡೆಯಲಿದೆ. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಹಾದುಹೋಗುವುದರಿಂದ ಈ ಗ್ರಹಣ ಸಂಭವಿಸಲಿದೆ. ವಿಶ್ವದ ಕೆಲವು ಭಾಗಗಗಳಲ್ಲಿ ಕಾಣಲಿರುವ ಭಾಗಶಃ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ.
ಗ್ರಹಣವು ನಾಳೆ 7.30 PM ನಿಂದ 12.23 AM ವರೆಗೆ ಸಂಭವಿಸಲಿದೆ. ಸೂರ್ಯಗ್ರಹಣ ನಡೆಯುವ ಸಮಯಕ್ಕೆ ಭಾರತದಲ್ಲಿ ಸೂರ್ಯಾಸ್ತವಾಗಿರಲಿದೆ. ಈ ಕಾರಣದಿಂದಾಗಿ ಭಾರತಕ್ಕೆ ಗ್ರಹಣದ ದರ್ಶನ ಆಗುವುದಿಲ್ಲ. ಈ ವರ್ಷದ ಕೊನೆಯ ಸೂರ್ಯಗ್ರಹಣವು ದಕ್ಷಿಣ ಅಮೆರಿಕಾ ದೇಶಗಳಲ್ಲಿ ಮತ್ತು ನೈರುತ್ಯ ಆಫ್ರಿಕಾ ಭಾಗದಲ್ಲಿ ಕಾಣಿಸಿಕೊಳ್ಳಲಿದೆ.
ಚಿಲಿ ದೇಶದ ಸ್ಯಾಂಟಿಯಾಗೊ, ಬ್ರೆಜಿಲ್ನ ಸಾವೊ ಪೌಲೊ, ಅರ್ಜೆಂಟೀನಾದ ಬ್ಯುನೊಸ್ ಏರಿಸ್, ಪೆರುವಿನ ಲಿಮಾ ಮುಂತಾದೆಡೆಗಳಲ್ಲಿ ಗ್ರಹಣವು ಸರಿಯಾಗಿ ಕಾಣಿಸಿಕೊಳ್ಳಲಿದೆ. ವಿದೇಶದಲ್ಲಿ ಗೋಚರವಾಗಲಿರುವ ಗ್ರಹಣವನ್ನು ಬರಿಗಣ್ಣಿನಿಂದ ವೀಕ್ಷಿಸದಂತೆ ಸೂಚನೆ ನೀಡಲಾಗಿದೆ. ಈ ವರ್ಷದ ಮೊದಲ ಮತ್ತು ದೊಡ್ಡ ಸೂರ್ಯಗ್ರಹಣವು ಜೂನ್ 21ರ ಭಾನುವಾರ ಗೋಚರವಾಗಿತ್ತು. ನಾಳೆ ನಡೆಯಲಿರುವ ಗ್ರಹಣವು ವರ್ಷದ ಕೊನೆಯ ಸೂರ್ಯಗ್ರಹ ಆಗಿರಲಿದೆ.
Published On - 11:05 am, Sun, 13 December 20