ನವದೆಹಲಿ: ದೆಹಲಿಯ ಜನದಟ್ಟಣೆಯ ರಸ್ತೆಯಲ್ಲಿ ತನ್ನ ಕಾರನ್ನು ಕಳವು ಮಾಡಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ (Congress) ನಾಯಕರೊಬ್ಬರು ಟ್ವಿಟ್ಟರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಪೋಸ್ಟ್ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಪಂಕುರಿ ಪಾಠಕ್ ರಾಷ್ಟ್ರ ರಾಜಧಾನಿಯ ತಿಹಾರ್ (Tihar) ಜೈಲಿನ ಬಳಿ ತನ್ನ ಕಾರನ್ನು ನಿಲ್ಲಿಸಿ ಹೋಗಿದ್ದರು. ಅಲ್ಲಿಂದ ಅವರ ಕಾರನ್ನು ಕಳವು ಮಾಡಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಈ ಘಟನೆಯು ತಿಹಾರ್ ಜೈಲಿನ ಮುಂದೆಯೇ ನಡೆದಿರುವುದು ನಾಚಿಕೆಗೇಡಿನ ಸಂಗತಿ. ದೆಹಲಿ ಎಷ್ಟು ಸುರಕ್ಷಿತವಾಗಿದೆ ಎಂದು ನೀವು ಊಹಿಸಬಹುದು ಎಂದು ಪಾಠಕ್ ಫೋಟೋಗಳ ಜೊತೆಗೆ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ನಿನ್ನೆ ರಾತ್ರಿ ನಮ್ಮ ಫಾರ್ಚುನರ್ ಕಾರು ಜನಕಪುರಿಯಲ್ಲಿ ಕಳ್ಳತನವಾಗಿದೆ. ಸುಮಾರು ಅರ್ಧ ಗಂಟೆಯ ಕಾಲ ಕಳ್ಳರ ಗುಂಪು ಆ ಸ್ಥಳಕ್ಕೆ ಬರುತ್ತಲೇ ಇದ್ದುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಂತರ ಅವರು ಎಸ್‌ಯುವಿಯನ್ನು ತೆರೆದು ಕದಿಯಲು ಯತ್ನಿಸಿದ್ದಾರೆ. ಹಲವಾರು ಬ್ಯಾಂಕ್‌ಗಳಿರುವ ಕಡೆ ನನ್ನ ಕಾರು ನಿಲ್ಲಿಸಲಾಗಿತ್ತು. ಆದರೂ ದರೋಡೆಕೋರರು ಅದನ್ನು ಅಲ್ಲಿಂದ ತೆಗೆದುಕೊಂಡು ಹೋಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ಟ್ವೀಟ್ ಮಾಡಿದ್ದಾರೆ.
गाड़ी चोरी होने की खबर लोगों को लगी तो दिल्ली से कई लोगों ने बताया कि दिल्ली में गाड़ियां चोरी होना आम हो गया है।
मेरी गाड़ी ठीक तिहाड़ जेल के सामने से चोरी हुई, तो बाकि शहर का हाल क्या होगा कल्पना कर सकते हैं।
देश की राजधानी में ऐसा खुला अपराध शर्मनाक है ! https://t.co/zS1DhyhVAk— Pankhuri Pathak पंखुड़ी पाठक پنکھڑی (@pankhuripathak) November 24, 2022
ಇದನ್ನೂ ಓದಿ: ಸುರಿಯುತ್ತಿರುವ ಈ ಮಳೆ, ಬೀದಿನಾಯಿಗಳಿಗೆ ಆಶ್ರಯ ನೀಡಿದ ಮಹಿಳೆ, ಮತ್ತೆ ಮತ್ತೆ ನೋಡಬೇಕೆನ್ನಿಸುವ ಈ ವಿಡಿಯೋ
ಈ ಘಟನೆಯ ಬಗ್ಗೆ ಇತರರಿಗೆ ತಿಳಿಸಿದಾಗ ಅವರು ದೆಹಲಿಯಲ್ಲಿ ಕಾರು ಕಳ್ಳತನ ಸಾಮಾನ್ಯವಾಗಿದೆ ಎಂದು ನಮಗೆ ಹೇಳಿದರು. ತಿಹಾರ್ ಜೈಲಿನ ಮುಂಭಾಗದಲ್ಲಿ ನಿಲ್ಲಿಸಿದಾಗ ನಮ್ಮ ಕಾರು ಕಳ್ಳತನವಾಗಿದೆ ಎಂದಮೇಲೆ ದೆಹಲಿಯ ಉಳಿದ ಭಾಗಗಳ ಪರಿಸ್ಥಿತಿಯನ್ನು ನೀವು ಊಹಿಸಬಹುದು. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ರೀತಿಯ ಅಪರಾಧಗಳು ಬಹಿರಂಗವಾಗಿ ನಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಪಂಕುರಿ ಪಾಠಕ್ ಹೇಳಿದ್ದಾರೆ.