ದೆಹಲಿ ಮೇ 17: ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಸಹಾಯಕ ಬಿಭವ್ ಕುಮಾರ್ (Bibhav Kumar) ಅವರು ನಗರದ ಸಿವಿಲ್ ಲೈನ್ಸ್‌ನಲ್ಲಿರುವ ದೆಹಲಿ ಮುಖ್ಯಮಂತ್ರಿಯ ಮನೆಯೊಳಗೆ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿರುವ ಎಎಪಿ ನಾಯಕಿ ಸ್ವಾತಿ ಮಲಿವಾಲ್ (Swati Maliwal) ಶುಕ್ರವಾರ ಮಧ್ಯಾಹ್ನ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ 52 ಸೆಕೆಂಡುಗಳ ವಿಡಿಯೊಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಈ ವಿಡಿಯೊದಲ್ಲಿ ಆಕೆಯನ್ನು ಅಸ್ಪಷ್ಟವಾಗಿ ಕಾಣಬಹುದು. ಈಕೆ ಕಟ್ಟಡದಿಂದ ಹೊರಹೋಗುವಂತೆ ಹೇಳಿದ ಭದ್ರತಾ ಅಧಿಕಾರಿಗಳೊಂದಿಗೆ ವಾದ ಮಾಡಿ ಬೈದಾಡುತ್ತಿರುವುದನ್ನೂ ಕಾಣಬಹುದು. ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಮಲಿವಾಲ್ ಅವರು “ಪೊಲಿಟಿಕಲ್ ಹಿಟ್‌ಮ್ಯಾನ್” ಎಂದು ಉಲ್ಲೇಖಿಸಿದ್ದಾರೆ. ಇದು ಕೇಜ್ರಿವಾಲ್ ಎಂದು ಹಲವರು ಊಹಿಸಿದ್ದಾರೆ. ಪಕ್ಷವನ್ನು ರಕ್ಷಿಸಲು ಮತ್ತು “ಈ ಅಪರಾಧವನ್ನು ಮಾಡಿದ ನಂತರ ತನ್ನನ್ನು ಉಳಿಸಿಕೊಳ್ಳಲು” ಒಂದು ನಿರೂಪಣೆಯನ್ನು ನಿರ್ಮಿಸಲು “ಹಿಟ್‌ಮ್ಯಾನ್” ಈ ವಿಡಿಯೊವನ್ನು ಹಂಚಿಕೊಳ್ಳಲು “ತನ್ನ ಜನರಿಗೆ” ನಿರ್ದೇಶಿಸಿದ್ದಾರೆ ಎಂದು ಹೇಳಿದ್ದಾರೆ.
“ಪ್ರತಿ ಬಾರಿಯಂತೆ ಈ ರಾಜಕೀಯ ಹಿಟ್‌ಮ್ಯಾನ್ ತನ್ನನ್ನು ತಾನು ಉಳಿಸಿಕೊಳ್ಳಲು ಪ್ರಯತ್ನಗಳನ್ನು ಪ್ರಾರಂಭಿಸಿದ್ದಾರೆ. ತನ್ನ ಜನರಲ್ಲಿ ಟ್ವೀಟ್ ಮಾಡಲು ಮತ್ತು ವಿಡಿಯೊಗಳನ್ನು ಪ್ಲೇ ಮಾಡುವಂತೆ ಮಾಡುವ ಮೂಲಕ, ಈ ಅಪರಾಧವನ್ನು ಮಾಡಿದ ನಂತರ ತನ್ನನ್ನು ತಾನು ಉಳಿಸಿಕೊಳ್ಳಬಹುದು ಎಂದು ಅವರು ಭಾವಿಸಿದ್ದಾರೆ. ಯಾರನ್ನಾದರೂ ಥಳಿಸುತ್ತಿರುವ ವಿಡಿಯೊ ಮಾಡುವವರು ಯಾರು? ಮನೆ ಮತ್ತು ಕೊಠಡಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಸತ್ಯಾಂಶ ಬಹಿರಂಗಗೊಳ್ಳಲಿದೆ ಎಂದು ಮಲಿವಾಲ್ ಹೇಳಿದ್ದಾರೆ.
हर बार की तरह इस बार भी इस राजनीतिक हिटमैन ने ख़ुद को बचाने की कोशिशें शुरू कर दी हैं।
अपने लोगों से ट्वीट्स करवाके, आधि बिना संदर्भ की वीडियो चलाके इसे लगता है ये इस अपराध को अंजाम देके ख़ुद को बचा लेगा। कोई किसी को पीटते हुए वीडियो बनाता है भला? घर के अंदर की और कमरे की CCTV…
— Swati Maliwal (@SwatiJaiHind) May 17, 2024
ಯಾವ ಮಟ್ಟಕ್ಕೆ ಬೇಕಾದರೂ ಇಳಿಯಿರಿ, ದೇವರು ನೋಡುತ್ತಿದ್ದಾನೆ. ಒಂದಲ್ಲ ಒಂದು ದಿನ ಸತ್ಯ ಬಯಲಾಗುತ್ತದೆ ಎಂದು ಮಲಿವಾಲ್ ಹೇಳಿದ್ದಾರೆ.
ವಿಡಿಯೊದಲ್ಲಿ ಮಂಚದ ಮೇಲೆ ಕುಳಿತಿರುವ ಮಲಿವಾಲ್ ಅವರನ್ನು ಅಸ್ಪಷ್ಟವಾಗಿ ತೋರಿಸುತ್ತದೆ. ಭದ್ರತಾ ಅಧಿಕಾರಿಗಳು ಅವರಲ್ಲಿ ಅಲ್ಲಿಂದ ಎದ್ದೇಳಿ, ಆವರಣದಿಂದ ಹೊರಹೋಗಿ ಎಂದು ಹೇಳುತ್ತಾರೆ. ಇದಕ್ಕೆ ಮಲಿವಾಲ್ ಕೋಪದಿಂದ, ನಾನು ಹೋಗಲಾರೆ. ನಾನು ಅದನ್ನು ಮಾಡುತ್ತೇನೆ. ಇಂದು ನಾನು ಈ ಜನರಿಗೆ ಎಲ್ಲವನ್ನೂ ಹೇಳುತ್ತೇನೆ ಅಂತಾರೆ.
ಒಬ್ಬ ಗಾರ್ಡ್ “ಹೌದು, ನೀವು ಮಾಡಿ, ಅದು ನಿಮ್ಮ ತಲೆನೋವು…” ಎಂದು ಪ್ರತಿಕ್ರಿಯಿಸುತ್ತಾರೆ. ಆಗ ಮಲಿವಾಲ್, ನೀವು ಇದೀಗ ನನಗೆ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ (DCP) ಜೊತೆ ಮಾತನಾಡಲು ಅವಕಾಶ ನೀಡಿ ಎಂದು ಹೇಳುತ್ತಾರೆ. “ಹೌದು… ನಾವು ತಕ್ಷಣ ಡಿಸಿಪಿಗೆ ತಿಳಿಸುತ್ತೇವೆ. ಅಲ್ಲಿಯವರೆಗೆ ನೀವು ನಮ್ಮೊಂದಿಗೆ ಬನ್ನಿ” ಎಂದು ಗಾರ್ಡ್ ಹೇಳುತ್ತಾನೆ.
ಕೇಜ್ರಿವಾಲ್ ವಾಸಿಸುವ ಪ್ರದೇಶದ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ತಾನು ಪೊಲೀಸರಿಗೆ ದೂರು ನೀಡುವುದಾಗಿ ಮಲಿವಾಲ್ ಹೇಳುತ್ತಾರೆ. “ಅದು ಇಲ್ಲಿ ಆಗುವುದಿಲ್ಲ… ನೀವು ದಯವಿಟ್ಟು ನಮ್ಮೊಂದಿಗೆ ಬನ್ನಿ” ಎಂದು ಗಾರ್ಡ್ ಮತ್ತೆ ಹೇಳುತ್ತಾನೆ. ಅದಕ್ಕೆ ಮಲಿವಾಲ್ “ಇಲ್ಲ. ಈಗ ಇಲ್ಲಿ ಅದು ಆಗಬೇಕು” ಎಂದು ಖಡಾಖಂಡಿತವಾಗಿ ಹೇಳುತ್ತಾರೆ.
“ಇದು ಇಲ್ಲಿ ಈಗ ಆಗಲೇ ಬೇಕು. ನೀವು ನನ್ನನ್ನು ಮುಟ್ಟಿದರೆ ನಿಮ್ಮ ಕೆಲಸ ಕಳೆದುಕೊಳ್ಳುತ್ತೀರಿ ಎಂದು ಮಲಿವಾಲ್ ಹೇಳಿದ್ದಾರೆ. ಈ ಸಮಯದಲ್ಲಿ ವಿಡಿಯೊ ನೆಲವನ್ನು ತೋರಿಸುತ್ತಿದ್ದು ಅಧಿಕಾರಿ ನಂತರ ಮಲಿವಾಲ್ ಅವರನ್ನು ತೋರಿಸುತ್ತದೆ. ಆಕೆ ಗುಲಾಬಿ ಬಣ್ಣದ ಟಾಪ್ ಧರಿಸಿದ್ದು ಮಂಚದ ಮೇಲೆ ಕುಳಿತಿರುವುದು ಕಾಣುತ್ತದೆ. ನಾವು ದಯವಿಟ್ಟು ಇಲ್ಲಿಂದ ಹೋಗಿ ಎಂದು ಎಂದು ಭದ್ರತಾ ಸಿಬ್ಬಂದಿ ಹೇಳುತ್ತಿರುವುದು ವಿಡಿಯೊದಲ್ಲಿದೆ.
ಈ ಹಂತದಲ್ಲಿ ಮಲಿವಾಲ್ ಅವರು ಪೊಲೀಸರಿಗೆ ತುರ್ತು ಕರೆ ಮಾಡಿರುವುದಾಗಿ ಹೇಳಿದ್ದು, “ಪೊಲೀಸರು ಬರಲಿ…” ಎಂದು ಮತ್ತೆ ಸಿಬ್ಬಂದಿಯೊಂದಿಗೆ ವಾದಿಸಿದ್ದಾರೆ.
ಸೋಮವಾರ ದೆಹಲಿ ಪೊಲೀಸರು ಮಲಿವಾಲ್ ನೀಡಿದ ಹೇಳಿಕೆಯ ಆಧಾರದ ಮೇಲೆ ಬಿಭವ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕೇಜ್ರಿವಾಲ್ ಅವರ ನಿವಾಸದಿಂದ ಎರಡು ಕರೆಗಳು ಬಂದಿವೆ ಎಂದು ಹೇಳಿದರು. ಫೋನ್ ಸಂಖ್ಯೆಯನ್ನು ಮಲಿವಾಲ್ ಅವರುಹೆಸರಿನಿಂದ ನೋಂದಾಯಿಸಲಾಗಿದೆ ಆದರೆ ಕರೆ ಮಾಡಿದವರು ತಮ್ಮನ್ನು ಗುರುತಿಸಲಿಲ್ಲ ಎಂದು ಪೊಲೀಸರು ಹೇಳಿದರು. ವಿಡಿಯೊದ ಕೊನೆಯ ಸೆಕೆಂಡ್‌ಗಳಲ್ಲಿ ಮಲಿವಾಲ್, ಆಕೆಯ ಹೇಳಿಕೆಯನ್ನು ದಾಖಲಿಸಲು ಆಕೆಯ ನಿವಾಸದಲ್ಲಿ ಪೊಲೀಸ್ ತಂಡವನ್ನು ಭೇಟಿಯಾದಾಗ ಧೈರ್ಯವಿದ್ದರೆ ನನ್ನನ್ನು ಹೊರಹಾಕಿ ಎಂದು ಗಾರ್ಡ್ ಗಳಿಗೆ ಸವಾಲು ಹಾಕಿದ್ದಾರೆ.
ಅವಳು ಒಬ್ಬ ಅಧಿಕಾರಿಗೆ ಶಾಪ ಹಾಕುತ್ತಿದ್ದಾಗ “ಮೇಡಂ, ನೀವು ಈ ರೀತಿ ಮಾತನಾಡಬಾರದು ಎಂದು ಗಾರ್ಡ್ ಪ್ರತಿಕ್ರಿಯಿಸುತ್ತಾನೆ, ಅದಕ್ಕೆ ಮಲಿವಾಲ್, ಓಹೋ, ನಿಮ್ಮ ಬಳಿ ಸಿಸಿಟಿವಿ ಕ್ಯಾಮೆರಾ ಇರುವುದರಿಂದಲೇ ಎಂದು ಪ್ರತಿಕ್ರಿಯಿಸಿದ್ದು ಇಲ್ಲಿ ವಿಡಿಯೊ ಕೊನೆಗೊಳ್ಳುತ್ತದೆ.
ಆದಾಗ್ಯೂ, ಈ ವಿಡಿಯೊ ಮತ್ತು ಮಲಿವಾಲ್ ಅವರ ಟ್ವೀಟ್ ಗೆ ಎಎಪಿ ಇನ್ನೂ ಪ್ರತಿಕ್ರಿಯಿಸಿಲ್ಲ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ