ವರ್ಕ್ ಫ್ರಮ್ ಹೋಂ ಆಸೆಯಿಂದ 54 ಲಕ್ಷ ರೂ. ಕಳೆದುಕೊಂಡ ಮಹಿಳೆ

Online Fraud: ಮನೆಯಲ್ಲೇ ಕುಳಿತು ಕೆಲಸ ಮಾಡಿ ಸಾಕಷ್ಟು ಹಣ ಗಳಿಸಬಹುದು ಎಂಬ ಮೆಸೇಜ್​ಗಳು ನಿಮ್ಮ ಮೊಬೈಲ್​ಗೂ ಬಂದಿರಬಹುದು. ಸ್ಮಾರ್ಟ್​ ಫೋನ್ ಇದ್ದರೆ ಕೇವಲ ಕೆಲವು ವೆಬ್​ಸೈಟ್​ಗಳಿಗೆ ರಿವ್ಯೂ ಕೊಡುವ ಮೂಲಕ, ಕೆಲವು ಪೋಸ್ಟ್​ಗಳಿಗೆ ಲೈಕ್ ಕೊಡುವ ಮೂಲಕ ಸಾವಿರಾರು ರೂ. ದುಡಿಯಬಹುದು ಎಂದು ನಂಬಿಸುವವರಿದ್ದಾರೆ. ಆದರೆ, ಅದನ್ನು ನಂಬಿ ಯಾಮಾರಿದ ಮಹಿಳೆಯೊಬ್ಬರ ಕತೆ ಇಲ್ಲಿದೆ.

ವರ್ಕ್ ಫ್ರಮ್ ಹೋಂ ಆಸೆಯಿಂದ 54 ಲಕ್ಷ ರೂ. ಕಳೆದುಕೊಂಡ ಮಹಿಳೆ
ವರ್ಕ್ ಫ್ರಮ್ ಹೋಂ Image Credit source: istock
Follow us
ಸುಷ್ಮಾ ಚಕ್ರೆ
|

Updated on:May 17, 2024 | 6:04 PM

ಮುಂಬೈ: ಮುಂಬೈನಲ್ಲಿ ಗರ್ಭಿಣಿ (Pregnant) ಮಹಿಳೆಯೊಬ್ಬರು ಆನ್‌ಲೈನ್ ವಂಚನೆ ಪ್ರಕರಣದಲ್ಲಿ (Online Fraud Case) 54 ಲಕ್ಷಕ್ಕೂ ಹೆಚ್ಚು ಹಣವನ್ನು ಕಳೆದುಕೊಂಡಿದ್ದಾರೆ. ವರ್ಕ್ ಫ್ರಂ ಹೋಂ (Work From Home) ಮಾಡುವವರಿಗೆ ಆಮಿಷಗಳನ್ನೊಡ್ಡುವ ಹಗರಣಗಳ ಅಪಾಯಗಳನ್ನು ಇದು ಎತ್ತಿ ತೋರಿಸುತ್ತದೆ. ನವ ಮುಂಬೈನಲ್ಲಿ ಇತ್ತೀಚಿನ ಘಟನೆಯೊಂದು ಆನ್‌ಲೈನ್ ವಂಚನೆಯ ಅಪಾಯಗಳನ್ನು ತಿಳಿಸಿದೆ. ವಿಶೇಷವಾಗಿ ಮನೆಯಿಂದ ಕೆಲಸ ಮಾಡುವ ಅವಕಾಶಗಳನ್ನು ಹುಡುಕುವವರಿಗೆ ಏನೆಲ್ಲ ಅಪಾಯಗಳು ಎದುರಾಗಬಹುದು ಎಂಬುದನ್ನು ತಿಳಿಯುವುದು ಅಗತ್ಯ.

ಸುದ್ದಿ ಸಂಸ್ಥೆ ಪಿಟಿಐ ವರದಿಯ ಪ್ರಕಾರ, ಐರೋಲಿಯ 37 ವರ್ಷದ ಗರ್ಭಿಣಿ ಮಹಿಳೆ 54 ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದಾರೆ. ಕಂಪನಿಯಿಂದ ಹೆರಿಗೆ ರಜೆ ಪಡೆದು ಆನ್‌ಲೈನ್‌ನಲ್ಲಿ ಹೆಚ್ಚುವರಿ ಆದಾಯ ಗಳಿಸುವ ಮಾರ್ಗಗಳನ್ನು ಹುಡುಕುತ್ತಿದ್ದ ಮಹಿಳೆಗೆ ಫ್ರೀಲಾನ್ಸ್ ಕೆಲಸದ ಭರವಸೆ ನೀಡಿ ಆಮಿಷ ಒಡ್ಡಲಾಗಿತ್ತು.

ಇದನ್ನೂ ಓದಿ: ಜಾಹೀರಾತು ನಂಬಿ ಮೋಸಹೋದ ಮಹಿಳೆ; DGF​ ಗೋಲ್ಡ್​ ಆ್ಯಂಡ್ ಡೈಮಂಡ್ಸ್​​ ಕಂಪನಿ ವಿರುದ್ದ ದೂರು

ವಂಚಕರು ಆಕೆಗೆ ಬಹಳಸರಳವಾದ ಕೆಲಸವನ್ನು ನೀಡುವುದಾಗಿ ಹೇಳಿದರು. ಕಂಪನಿಗಳಿಗೆ ರೇಟಿಂಗ್ ನೀಡುವುದು ಮತ್ತು ರೆಸ್ಟೋರೆಂಟ್‌ಗಳಿಗೆ ರಿವ್ಯೂ ನೀಡುವ ಕೆಲಸವನ್ನು ಆಕೆಗೆ ನೀಡಲಾಗಿತ್ತು. ಅಂತಹ 5 ಕಾರ್ಯಗಳನ್ನು ಪೂರ್ಣಗೊಳಿಸಿದ ನಂತರ ದುಡ್ಡು ನೀಡುವುದಾಗಿ ಆಕೆಗೆ ತಿಳಿಸಲಾಗಿತ್ತು.

ಅವರ ಮಾತನ್ನು ನಂಬಿದ ಮಹಿಳೆ ಅವರು ನೀಡಿದ ಸೂಚನೆಗಳನ್ನು ಅನುಸರಿಸಿ ಮೇ 7 ಮತ್ತು 10ರ ನಡುವೆ ವಿವಿಧ ಖಾತೆಗಳಿಗೆ ಒಟ್ಟು 54,30,000 ರೂ.ಗಳನ್ನು ಪಾವತಿಸಿದ್ದಾರೆ. ಆದರೆ, ಕಾರ್ಯಗಳನ್ನು ಪೂರ್ಣಗೊಳಿಸಿದ ನಂತರ, ವಂಚಕರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಅವರು ಆಕೆಯ ಫೋನ್​ಗೆ ಉತ್ತರಿಸಲಿಲ್ಲ. ಇದರಿಂದ ಆಕೆಗೆ ತಾನು ಮೋಸ ಹೋಗಿರುವುದು ಅರಿವಾಯಿತು.

ಇದನ್ನೂ ಓದಿ: ಹುಬ್ಬಳ್ಳಿ: ಮಗು ಆಗುತ್ತಿದ್ದಂತೆ ಪತ್ನಿ ಬಿಟ್ಟು ಪರಾರಿಯಾದ ಪತಿ; ಅನೇಕ ಹೆಣ್ಮಕ್ಕಳಿಗೆ ಮೋಸ ಮಾಡಿರುವ ಆರೋಪ

ಆಕೆ ನವ ಮುಂಬೈ ಸೈಬರ್ ಪೊಲೀಸರಿಗೆ ಘಟನೆಯ ಕುರಿತು ದೂರು ನೀಡಿದರು. ಸದ್ಯ ಪೊಲೀಸರು ಅಪರಾಧದ ತನಿಖೆ ನಡೆಸುತ್ತಿದ್ದಾರೆ. ಇದುವರೆಗೂ ತಪ್ಪಿತಸ್ಥರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:04 pm, Fri, 17 May 24

ಮನೆಯಲ್ಲಿ ಸಲಗೆನಾ, ಸ್ಟ್ರೀಕ್ಟಾ? ವಿದ್ಯಾರ್ಥಿನಿ ಪ್ರಶ್ನೆಗೆ ಡಿಕೆಶಿ ಉತ್ತರ
ಮನೆಯಲ್ಲಿ ಸಲಗೆನಾ, ಸ್ಟ್ರೀಕ್ಟಾ? ವಿದ್ಯಾರ್ಥಿನಿ ಪ್ರಶ್ನೆಗೆ ಡಿಕೆಶಿ ಉತ್ತರ
ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ
ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ
ಕೊವಿಡ್ ಹಗರಣದ ತನಿಖೆಗೆ SIT ರಚನೆ: ಡಾ ಸಿಎನ್ ಮಂಜುನಾಥ್​ಗೂ ಸಂಕಷ್ಟ?
ಕೊವಿಡ್ ಹಗರಣದ ತನಿಖೆಗೆ SIT ರಚನೆ: ಡಾ ಸಿಎನ್ ಮಂಜುನಾಥ್​ಗೂ ಸಂಕಷ್ಟ?
ಫಲಿತಾಂಶಕ್ಕೆ ಮೊದಲೇ ಗೂಬೆ ಕೂರಿಸುವ ಕೆಲಸ ಶುರುಮಾಡಿದ ಯೋಗೇಶ್ವರ್
ಫಲಿತಾಂಶಕ್ಕೆ ಮೊದಲೇ ಗೂಬೆ ಕೂರಿಸುವ ಕೆಲಸ ಶುರುಮಾಡಿದ ಯೋಗೇಶ್ವರ್