ಹುಬ್ಬಳ್ಳಿ: ಮಗು ಆಗುತ್ತಿದ್ದಂತೆ ಪತ್ನಿ ಬಿಟ್ಟು ಪರಾರಿಯಾದ ಪತಿ; ಅನೇಕ ಹೆಣ್ಮಕ್ಕಳಿಗೆ ಮೋಸ ಮಾಡಿರುವ ಆರೋಪ

ಮೊಹಮ್ಮದ್ ಗೌಸ್ ಎಂಬ ವ್ಯಕ್ತಿ ತಾನೊಬ್ಬ ಇಂಜಿನಿಯರ್ ಎಂದು ನಂಬಿಸಿ ಮದುವೆಯಾಗಿ ಸಂಸಾರ ನಡೆಸಿ ಇದೀಗ ಹೆಣ್ಣು ಮಗು ಜನಿಸುತ್ತಿದ್ದಂತೆ ಪತ್ನಿ ಬಿಟ್ಟು ಪರಾರಿಯಾಗಿದ್ದಾನೆ. ಮಹಿಳೆ ತನ್ನ ಮಗು ಜೊತೆ ಹುಬ್ಬಳ್ಳಿಗೆ ಬಂದು ಪತಿಗಾಗಿ ಹುಡುಕಾಟ ನಡೆಸುತ್ತಿದ್ದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹುಬ್ಬಳ್ಳಿ: ಮಗು ಆಗುತ್ತಿದ್ದಂತೆ ಪತ್ನಿ ಬಿಟ್ಟು ಪರಾರಿಯಾದ ಪತಿ; ಅನೇಕ ಹೆಣ್ಮಕ್ಕಳಿಗೆ ಮೋಸ ಮಾಡಿರುವ ಆರೋಪ
ಪತಿಗಾಗಿ ಆತನ ಮನೆ ಮುಂದೆ ಕಾಯುತ್ತಿರುವ ಪತ್ನಿ
Follow us
ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ಆಯೇಷಾ ಬಾನು

Updated on: May 14, 2024 | 8:54 AM

ಹುಬ್ಬಳ್ಳಿ, ಮೇ.14: ಮದುವೆಯಾಗಿ ಜೀವನ ನಡೆಸುತ್ತಿದ್ದ ಗಂಡ ತನ್ನ ಪತ್ನಿಗೆ ಹೆಣ್ಣು ಮಗು (Baby) ಜನಿಸುತ್ತಿದ್ದಂತೆ ಮನೆ ಬಿಟ್ಟು ಹೋಗಿದ್ದಾನೆ. ಗಂಡ ಬೇಕೆಂದು ಮಹಿಳೆ ಮಗುವಿನ ಜೊತೆಗೆ ರಾತ್ರಿ ಪೂರ್ತಿ ಗಂಡ ಮನೆ ಮುಂದೆ ಕೂತು ಕಣ್ಣೀರು ಹಾಕಿದ ಘಟನೆ ಹುಬ್ಬಳ್ಳಿಯಲ್ಲಿ (Hubballi) ನಡೆದಿದೆ. ಪತಿ ಮೊಹಮ್ಮದ್ ಗೌಸ್​ಗಾಗಿ ಪತ್ನಿ ರುಕ್ಸಾನಾ ಮಗುವಿನ ಜೊತೆ ಧರಣಿ ನಡೆಸುತ್ತಿದ್ದಾರೆ.

ಸಾಫ್ಟವೇರ್ ಇಂಜಿನಿಯರ್ ಎಂದು ಹೇಳಿಕೊಂಡಿದ್ದ ಮೊಹಮ್ಮದ್ ಗೌಸ್​ಗೆ ಈ ಮೊದಲೇ ಮದುವೆ ಆಗಿತ್ತು. ಆದರೂ ಆತ ಸುಳ್ಳು ಹೇಳಿ ಮತ್ತೊಂದು ಮದುವೆಯಾಗಿದ್ದ. ನಾನು ಇಂಜಿನಿಯರ್ ಎಂದು ನಂಬಿಸಿ ಮದುವೆಯಾಗಿದ್ದ. ಮದುವೆಯಾದ ಬಳಿಕ ಹೆಂಡತಿಯೊಂದಿಗೆ ಸ್ವಲ್ಪ ದಿನ ಚೆನ್ನಾಗಿಯೇ ಇದ್ದ. ಸ್ವಂತಕ್ಕೆ ಪಿಜಿ ಇದೆ ಎಂದು ಇಲ್ಲ ಸಲ್ಲದ ಕಥೆ ಕಟ್ಟಿದ್ದ. ಹೆಂಡತಿ ನಂಬಿ ಗಂಡ ಚೆನ್ನಾಗಿದಾನೆ ಅಂದುಕೊಂಡಿದ್ಲು. ಮೊದಲು ಚೆನ್ನಾಗಿದ್ದ ಗಂಡ, ಇದೀಗ ಒಂದು ಮಗು ಆಗುತ್ತಲೇ ಹೆಂಡತಿಯನ್ನ ಬಿಟ್ಟು ಹೋಗಿದ್ದಾನೆ. ಇತ್ತ ಗಂಡ ಬೇಕೆಂದು ಹೆಂಡತಿ ಮನೆ ಮುಂದೆ ಧರಣಿ ಕುತಿದ್ದಾರೆ.

ಮೂಲತಃ ಯಲ್ಲಾಪೂರ ನಿವಾಸಿಯಾಗಿರುವ ರುಕ್ಸಾನಾ ಕಳೆದ ಮೂರು ವರ್ಷಗಳ ಹಿಂದೆ ಹುಬ್ಬಳ್ಳಿಯ ಮೊಹಮ್ಮದ್ ಗೌಸ್ ಜೊತೆ ಮದುವೆಯಾಗಿದ್ರು. ಮೊಹಮ್ಮದ್ ಗೌಸ್ ಗೆ ಮೊದಲು ಮದುವೆಯಾಗಿದ್ದರೂ, ಹೆಂಡತಿ ಹುಚ್ಚಿಯಾಗಿದ್ದಾಳೆಂದು ನಂಬಿಸಿ ರುಕ್ಸಾನಾ ಜೊತೆ ಮದುವೆಯಾಗಿದ್ದ. ನಾನು ಸಾಫ್ಟ್‌ವೇರ್ ಇಂಜಿನಿಯರ್ ಎಂದು ಹೇಳಿಕೊಂಡಿದ್ದ. ಹುಬ್ಬಳ್ಳಿಯಲ್ಲಿ ಬೇಕಾದಷ್ಟು ಆಸ್ತಿ ಇದೆ, ಸ್ವಂತ ಪಿಜಿ ಇದೆ ಎಂದು ನಂಬಿಸಿ ಮದುವೆಯಾಗಿದ್ದ. ಮೊಹಮ್ಮದ್ ಗೌಸ್ ಮದುವೆಯಾದ ಹೊಸತರಲ್ಲಿ ಚೆನ್ನಾಗಿದ್ದ‌. ರುಕ್ಸಾನಾ ಜೊತೆ ಸಂಸಾರ ಕೂಡಾ ಮಾಡಿದ್ದಾನೆ. ರುಕ್ಸಾನಾಗೆ ಯಾವಾಗ ಒಂದು ಮಗು ಆಯ್ತು, ಮೊಹಮ್ಮದ್ ಗೌಸ್ ಇದೀಗ ಪರಾರಿಯಾಗಿದ್ದಾನೆ. ಇತ್ತ ರುಕ್ಸಾನಾ ದಿಕ್ಕು ತೋಚದಂತೆ ಯಲ್ಲಾಪುರದಿಂದ ಹುಬ್ಬಳ್ಳಿಗೆ ಬಂದು ಮೊಹಮ್ಮದ್ ಗೌಸ್ ಗಾಗಿ ಹುಡುಕಾಡುತ್ತಿದ್ದಾಳೆ. ಮಗು ಸಮೇತ ಮೊಹಮ್ಮದ್ ಗೌಸ್ ವಾಸ ಮಾಡ್ತಿದ್ದ ಮನೆ ಮುಂದೆ ಧರಣಿ ಕುಳಿತಿದ್ದಾಳೆ. ನನಗೆ ನನ್ನ ಗಂಡ ಬೇಕು ಎಂದು ರುಕ್ಸಾನಾ ಅಂಗಲಾಚುತ್ತಿದ್ದಾಳೆ.

ಇದನ್ನೂ ಓದಿ: ಚಾರ್ಮಾಡಿ ಘಾಟ್​ನಲ್ಲಿ ಸಲಗನ ಆರ್ಭಟ, ನೀವು ಮಾತ್ರ ಅವನ ಅಡ್ಡ ನಿಲ್ಲೋಕೆ ಹೋಗ್ಬೇಡಿ ಸರ್​​​​​ ಎಂದ ನೆಟ್ಟಿಗರು

ಮಹಮ್ಮದ್ ಗೌಸ್ ಮೂಲತಃ ಹುಬ್ಬಳ್ಳಿ ನಿವಾಸಿ. ಆದ್ರೆ ಮದುವೆಗೆ ಮುಂಚೆ ಇಲ್ಲ ಸಲ್ಲದ ಸುಳ್ಳು ಹೇಳಿ ವಂಚನೆ ಮಾಡಿದ್ದಾನೆ. ಮೊದಲ ಮದುವೆ ಆಗಿ ಹೆಂಡತಿ ಚೆನ್ನಾಗಿದ್ರು, ಹುಚ್ಚಿ ಇದಾಳೇ ಎಂದು ಸುಳ್ಳು ಹೇಳಿ ನಂಬಿಸಿದ್ದಾನೆ. ಬಣ್ಣದ ಮಾತಿಗೆ ಮರುಳಾಗಿ ರುಕ್ಸಾನಾ ಮೊಹಮ್ಮದ್ ಗೌಸ್ ಜೊತೆ ಮದುವೆಯಾಗಿದ್ದಾಳೆ. ಹುಬ್ಬಳ್ಳಿಯಲ್ಲಿ ಏಳು ಮನೆಗಳನ್ನು ಬದಲಾವಣೆ ಮಾಡಿರೋ‌ ಮೊಹಮ್ಮದ್ ಗೌಸ್, ಸದ್ಯ ವಿದ್ಯಾನಗರದ ಫೆಸಿಪಿಕ್ ಪರ್ಲ್ ಅಪಾರ್ಟ್ಮೆಂಟ್ ನಲ್ಲಿ ವಾಸ ಮಾಡ್ತೀದಾನೆ. ರುಕ್ಸಾನಾ ಕುಟುಂಬ ಮನೆ ಮುಂದೆ ಬಂದು ಮೊಹಮ್ಮದ್ ಗೌಸ್ ಗೆ ಹುಡುಕಾಡುತ್ತಿದ್ದಾರೆ. ಆದ್ರೆ ಮೊಹಮ್ಮದ್ ಗೌಸ್ ಎಸ್ಕೇಪ್ ಆಗಿದ್ದಾನೆ. ರುಕ್ಸಾನಾ ಎಲ್ಲ ನಂಬರ್ ಗಳನ್ನ ಬ್ಲಾಕ್ ಮಾಡಿ ಮನೆ ಬಿಟ್ಟು ಹೋಗಿದ್ದಾನೆ. ಕೇವಲ ರುಕ್ಸಾನಾ ಅಲ್ಲ, ಅನೇಕ ಹೆಣ್ಣು ಮಕ್ಕಳಿಗೆ ಮೊಹಮ್ಮದ್ ಗೌಸ್ ಮೋಸ ಮಾಡಿದ್ದಾನೆ ಅನ್ನೋ ಆರೋಪವೂ ಇದೆ. ಇದಲ್ಲದೆ ರುಕ್ಸಾನಾ ಬಳಿ ಇದ್ದ ಹಣ ಬಂಗಾರ ಕೂಡಾ ದೋಚಿಕೊಂಡು ಹೋಗಿದ್ದಾನೆ.

ಸದ್ಯ ರುಕ್ಸಾನಾ ಕುಟುಂಬಸ್ಥರು ಹುಬ್ಬಳ್ಳಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಮೊಹಮದ್ ‌ಗೌಸ್ ವಿರುದ್ದ ದೂರು ನೀಡಿದ್ದಾರೆ. ಮಗು ಕೊಟ್ಟು ಹೆಂಡತಿ ಬಿಟ್ಟು ಪರಾರಿಯಾದ ಗೋಸುಂಬೆ ಮೊಹಮ್ಮದ್ ಗೌಸ್ ಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ