AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾಹೀರಾತು ನಂಬಿ ಮೋಸಹೋದ ಮಹಿಳೆ; DGF​ ಗೋಲ್ಡ್​ ಆ್ಯಂಡ್ ಡೈಮಂಡ್ಸ್​​ ಕಂಪನಿ ವಿರುದ್ದ ದೂರು

ಎಲ್ಲಿಯವರೆಗೂ ಮೋಸ ಹೋಗುವವರು ಇರುತ್ತಾರೋ, ಅಲ್ಲಿಯವರೆಗೂ ಮೋಸ ಮಾಡುವವರು ಇರುತ್ತಾರೆ. ಈ ಮಾತಿನಂತೆ ನೆಲಮಂಗಲ (Nelamangala)ದ ಮಹಿಳೆಯೊಬ್ಬರು ‘ನೀವು ಗಿರವಿ ಇಟ್ಟು ಬಿಡಿಸಲಾಗದ ಚಿನ್ನವನ್ನು, ನಾವೇ ಹಣ ಕೊಟ್ಟು ಬಿಡಿಸಿ ಉಳಿದ ಹಣವನ್ನು ತಕ್ಷಣವೇ ಕೊಡುತ್ತೇವೆ ಎನ್ನುವ ಜಾಹೀರಾತು ನಂಬಿ ಮೋಸ ಹೋಗಿದ್ದಾರೆ.

ಜಾಹೀರಾತು ನಂಬಿ ಮೋಸಹೋದ ಮಹಿಳೆ; DGF​ ಗೋಲ್ಡ್​ ಆ್ಯಂಡ್ ಡೈಮಂಡ್ಸ್​​ ಕಂಪನಿ ವಿರುದ್ದ ದೂರು
ಮೋಸಹೋದ ಮಹಿಳೆ
ಬಿ ಮೂರ್ತಿ, ನೆಲಮಂಗಲ
| Edited By: ಕಿರಣ್ ಹನುಮಂತ್​ ಮಾದಾರ್|

Updated on:May 08, 2024 | 8:26 PM

Share

ಬೆಂಗಳೂರು ಗ್ರಾಮಾಂತರ, ಮೇ.08: ಮೈಸೂರು ಮೂಲದ ಡಿಜಿಎಫ್​ ಗೋಲ್ಡ್​ ಆ್ಯಂಡ್ ಡೈಮಂಡ್ಸ್(DGF GOLD & DIAMONDS)​​ ಕಂಪನಿಯಿಂದ ವಂಚನೆ ಆರೋಪ ಕೇಳಿಬಂದಿದೆ. ‘ನೀವು ಗಿರವಿ ಇಟ್ಟು ಬಿಡಿಸಲಾಗದ ಚಿನ್ನವನ್ನು, ನಾವೇ ಹಣ ಕೊಟ್ಟು ಬಿಡಿಸಿ ಉಳಿದ ಹಣವನ್ನು ತಕ್ಷಣವೇ ಕೊಡುತ್ತೇವೆ ಎನ್ನುವ ಜಾಹೀರಾತು ನಂಬಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ(Nelamangala)ದಲ್ಲಿ ಪ್ರೇಮಲತಾ ಎಂಬ ಮಹಿಳೆಯೊಬ್ಬರು ಮೋಸಹೋಗಿದ್ದಾಗಿ ದೂರು ಪೊಲೀಸ್​ ಠಾಣೆಗೆ ನೀಡಿದ್ದಾರೆ.

ಹಾಲ್ ಮಾರ್ಕ 91.6ಕ್ಕೆ ಒಂದು ಗ್ರಾಂ ಚಿನ್ನಕ್ಕೆ 7,900 ರೂಪಾಯಿ ನೀಡುವುದಾಗಿ ನಂಬಿಸಿ, 528ಗ್ರಾಂ ಚಿನ್ನ ಪಡೆದುಕೊಂಡು ಏಕಾಏಕೀ ಇಷ್ಟ ಬಂದ ರೀತಿಯಲ್ಲಿ ಕರಗಿಸಿ ತೂಕ ಕಡಿಮೆ ತೋರಿಸಿ, ಬಳಿಕ 41,74,360 ಲಕ್ಷ ರೂಪಾಯಿ ಬರಬೇಕಿದ್ದ ಹಣದ ಬದಲಿಗೆ 29 ಲಕ್ಷ ಹಣವನ್ನ ಮಾತ್ರ ಕೊಟ್ಟಿರುವುದಾಗಿ ಪ್ರೇಮಲತಾ ಎಮಬುವವರು ಅರೋಪಿಸಿದ್ದಾರೆ. ಈ ಕುರಿತು ವಂಚನೆ ಮತ್ತು ಮೋಸ ಮಾಡಿರುವ ಸಂಬಂಧ ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಚಮತ್ಕಾರಿ ಪಾತ್ರೆ ಎಂದು ನಂಬಿಸಿ ಕೋಟಿ ಕೋಟಿ ವಂಚನೆ; ಮೂವರು ಆರೋಪಿಗಳು ಅಂದರ್​

ಕುಡಿಯುವ ನೀರಿಗಾಗಿ ಹೆಚ್ಚಿದ ಅಭಾವ, ರೊಚ್ಚಿಗೆದ್ದ ಗ್ರಾಮಸ್ಥರು

ಉತ್ತರ ಕನ್ನಡ: ಕುಡಿಯುವ ನೀರಿಗಾಗಿ ಅಭಾವ ತಲೆದೂರಿದ್ದು, ರೊಚ್ಚಿಗೆದ್ದ ಗ್ರಾಮಸ್ಥರು ಜಿಲ್ಲೆಯ ಹಲಿಯಾಳ ತಾಲೂಕಿನ ಅರ್ಲವಾಡ ಗ್ರಾಮ ಪಂಚಾಯತಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬರೊಬ್ಬರಿ ಒಂದು ತಿಂಗಳಿನಿಂದ ನಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾದ ಹಿನ್ನಲೆ ಇಂದು ಗ್ರಾಮದ ಮಹಿಳೆಯರು ಸೇರಿಕೊಂಡು ಖಾಲಿ ಕೊಡ ಹಿಡಿದು ಗ್ರಾಮ ಪಂಚಾಯತಿ‌ ಮುತ್ತಿಗೆ ಹಾಕಿದ್ದಾರೆ.

ಇನ್ನು ಈ ವೇಳೆ ಪಿಡಿಓ ಚುನಾವಣೆ ಕರ್ತವ್ಯ ನಿಮಿತ್ತ ಪಂಚಾಯತಿಯಲ್ಲಿ ಇಲ್ಲದ ಹಿನ್ನೆಲೆ ಪಂಚಾಯಿತಿಗೆ ಬೀಗ ಜಡಿದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಗಸ್ತೆ ಸ್ಥಳಕ್ಕೆ ಭೇಟಿ ನೀಡಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಗಲಾಟೆ ಹೆಚ್ಚಾದ ಪರಿಣಾಮ ಸ್ಥಳಕ್ಕೆ ದೌಡಾಯಿಸಿದ ಪಿಎಸ್ಐ ಮಹಾಂತೇಶ ಕುಂಬಾರ ಹಾಗೂ ಪಂಚಾಯತ ಎಇಓ ಗ್ರಾಮಸ್ಥರನ್ನು ಸಮಾಧಾನ ಪಡಿಸಲು ಪರದಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:18 pm, Wed, 8 May 24

Follow Us
ಬಿ ಮೂರ್ತಿ, ನೆಲಮಂಗಲ
ಬಿ ಮೂರ್ತಿ, ನೆಲಮಂಗಲ

ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಹೋಬಳಿಯ ಬೀರಯ್ಯನಪಾಳ್ಯದ ಮೂರ್ತಿ.ಬಿ.ನಾನು ಓದಿದ್ದು ಪಿಯುಸಿ,ಹೆಸರಘಟ್ಟ ಫಿಲ್ಮ್ ಆ್ಯಂಡ್ ಟಿವಿ ಕಾಲೇಜಿನಲ್ಲಿ ಕೆಲಸಗಾರನಾಗಿ ಕ್ಯಾಮರಾ ಕಲಿತು ದಿನಪತ್ರಿಕೆಗಳಿಗೆ ಪೋಟೋ ಕಳಿಸುವ ಕೆಲಸ ಬಳಿಕ 17ವರ್ಷದ ಹಿಂದೆ ನೇರವಾಗಿ ಟಿವಿನೈ ನಲ್ಲಿ ಕ್ಯಾಮರಾಮೆನ್ ಕೆಲಸಕ್ಕೆ ಸೇರಲಾಯಿತು. ಕಳೆದ 6ವರ್ಷದ ಹಿಂದೆ ಇದ್ದಕ್ಕಿದ್ದಂತೆ ಕ್ರೈಂ ಸಿಟಿ,ರಕ್ತಮಂಗಲ ಅಂತೆಲ್ಲ ಖ್ಯಾತಿ ಪಡೆದಿದ್ದ ನೆಲಮಂಗಲಕ್ಕೆ ಕ್ಯಾಮರಾ ಮ್ಯಾನ್ ಹಾಗೂ ವರದಿಗಾರನಾಗಿ ಕೆಲಸ ಮಾಡುವ ಅವಕಾಶ ನಮ್ಮ ಸೀನಿಯರ್ ಗಳಿಂದ ಕೂಡಿ ಬಂತು,ತನಗಿಂತ ಚನ್ನಾಗಿ ಕೆಲಸ ಮಾಡುವ ಕ್ಯಾಮರಾ ಮ್ಯಾನ್ ಗಳು ಇದ್ದರು ನನಗೆ ಅವಕಾಶ ಸಿಕ್ಕಿದ್ದಕ್ಕೆ ನನಗೆ ಹೆಮ್ಮೆ ಇದೆ,ನಾನು ಈ ಭಾಗದಲ್ಲಿ ಬಂದಾಗಿನಿಂದ ರೌಡಿಶೀಟರಗಳ ಉಪಟಳ ಕಂಟ್ರೋಲ್ಗೆ ಬಂದಿದೆ,ಯಾವುದೇ ಒಂದು ಚಿಕ್ಕದಾಗಲಿ ದೊಡ್ಡ ಮಟ್ಟದ ಕ್ರೈಂ ಅದ್ರೂ ಮೊದಲು ನಮ್ಮಲ್ಲಿ ನ್ಯೂಸ್ ಕವರ್ ಆಗಿರುತ್ತೆ,

Read More