AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ್ಯಪ್​​ಗಳ​​​ ಮೂಲಕ ಹೂಡಿಕೆ ಹೆಸರಿನಲ್ಲಿ ವಂಚನೆ ಪ್ರಕರಣ: ಕರ್ನಾಟಕ ಸೇರಿ 30 ಕಡೆಗಳಲ್ಲಿ ಸಿಬಿಐ ದಾಳಿ

ಎಚ್​​​ಪಿಝಡ್ ಟೋಕನ್ ಆ್ಯಪ್‌ ಹಾಗೂ ಅದೇ ಮಾದರಿಯ ಹೂಡಿಕೆ ವಂಚನೆಯಲ್ಲಿ ಶಾಮೀಲಾಗಿದ್ದಾರೆ ಎಂಬ ಆರೋಪದ ಮೇಲೆ ಎರಡು ಖಾಸಗಿ ಕಂಪನಿಗಳು ಮತ್ತು ಅದರ ನಿರ್ದೇಶಕರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು. ಈ ಪ್ರಕರಣದ ತನಿಖೆಗ ಭಾಗವಾಗಿ ಇಂದು ದಾಳಿ ನಡೆಸಿದೆ.

ಆ್ಯಪ್​​ಗಳ​​​ ಮೂಲಕ ಹೂಡಿಕೆ ಹೆಸರಿನಲ್ಲಿ ವಂಚನೆ ಪ್ರಕರಣ: ಕರ್ನಾಟಕ ಸೇರಿ 30 ಕಡೆಗಳಲ್ಲಿ ಸಿಬಿಐ ದಾಳಿ
ಸಾಂದರ್ಭಿಕ ಚಿತ್ರ
Ganapathi Sharma
|

Updated on: May 01, 2024 | 2:23 PM

Share

ನವದೆಹಲಿ, ಮೇ 1: ಆ್ಯಪ್​ಗಳ​​​ ಮೂಲಕ ಹೂಡಿಕೆ ಹೆಸರಿನಲ್ಲಿ ಜನರಿಗೆ ವಂಚನೆ ಎಸಗಿದ ಪ್ರಕರಣಕ್ಕೆ (Online Fraud case) ಸಂಬಂಧಿಸಿ ತನಿಖೆ ನಡೆಸುತ್ತಿರುವ ಸಿಬಿಐ (CBI) ಬುಧವಾರ ಕರ್ನಾಟಕದ (Karnataka) ಕೆಲವು ಪ್ರದೇಶಗಳೂ ಸೇರಿದಂತೆ ದೇಶದ 30 ಕಡೆಗಳಲ್ಲಿ ದಾಳಿ ನಡೆಸಿದೆ. ಕರ್ನಾಟಕ, ದೆಹಲಿ, ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಕರ್ನಾಟಕ ಸೇರಿದಂತೆ 10 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ 30 ಸ್ಥಳಗಳಲ್ಲಿ ದಾಳಿ ನಡೆಸಿ ಶೋಧ ಕಾರ್ಯ ನಡೆಸಲಾಗಿದೆ. ದಾಳಿ ವೇಳೆ ಮೊಬೈಲ್​ ಫೋನ್​ಗಳು, ಕಂಪ್ಯೂಟರ್​​​ ಹಾರ್ಡ್​ ಡಿಸ್ಕ್​​ಗಳು, ಸಿಮ್​​ ಕಾರ್ಡ್​ಗಳು, ಎಟಿಎಂ ಕಾರ್ಡ್, ಇ-ಮೇಲ್​ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಎಚ್​​​ಪಿಝಡ್ (HPZ) ಟೋಕನ್ ಆ್ಯಪ್‌ ಹಾಗೂ ಅದೇ ಮಾದರಿಯ ಹೂಡಿಕೆ ವಂಚನೆಯಲ್ಲಿ ಶಾಮೀಲಾಗಿದ್ದಾರೆ ಎಂಬ ಆರೋಪದ ಮೇಲೆ ಎರಡು ಖಾಸಗಿ ಕಂಪನಿಗಳು ಮತ್ತು ಅದರ ನಿರ್ದೇಶಕರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು. ಈ ಪ್ರಕರಣದ ತನಿಖೆಗ ಭಾಗವಾಗಿ ಇಂದು ದಾಳಿ ನಡೆಸಿದೆ.

ಸಿಬಿಐ ಪ್ರಕಾರ, ಆರೋಪಿಗಳ ಹೆಸರುಗಳು ಶಿಗೂ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಮತ್ತು ಲಿಲಿಯನ್ ಟೆಕ್ನೋಕ್ಯಾಬ್ ಪ್ರೈವೇಟ್ ಲಿಮಿಟೆಡ್ (ಎರಡೂ ಖಾಸಗಿ ಕಂಪನಿಗಳು) ಹಾಗೂ ಅವುಗಳ ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ವಂಚನೆಯ ಹೂಡಿಕೆ ಯೋಜನೆಯಲ್ಲಿ, ನಿಷೇಧಿತ ಕ್ರಿಪ್ಟೋ-ಕರೆನ್ಸಿಯಲ್ಲಿ ಹೂಡಿಕೆ ಮಾಡಲು ಸಾರ್ವಜನಿಕರನ್ನು ತಪ್ಪುದಾರಿಗೆಳೆದಿರುವುದು ಕೂಡ ಸೇರಿದೆ. ಎಚ್​​​ಪಿಝಡ್ ಎಂಬುದು ಅಪ್ಲಿಕೇಶನ್-ಆಧಾರಿತ ಟೋಕನ್ ಆಗಿದೆ. ಇದು ಬಿಟ್‌ಕಾಯಿನ್ ಮತ್ತು ಇತರ ಕ್ರಿಪ್ಟೋ ಕರೆನ್ಸಿಗಳಿಗೆ ಹೂಡಿಕೆ ಮಾಡುವ ಮೂಲಕ ಬಳಕೆದಾರರಿಗೆ ದೊಡ್ಡ ಲಾಭವನ್ನು ನೀಡುವ ಆಮಿಷವೊಡ್ಡುತ್ತದೆ.

ಇದನ್ನೂ ಓದಿ: ಕೋವಿಶೀಲ್ಡ್​​ ಕೊರೊನಾ ಲಸಿಕೆಯಿಂದ ಅಡ್ಡಪರಿಣಾಮವಿದೆ ಎಂದು ಒಪ್ಪಿಕೊಂಡ ಅಸ್ಟ್ರಾಜೆನೆಕಾ, ಟಿಟಿಎಸ್​ಗೂ ಕಾರಣವಾಗಬಹುದು

ಸಿಬಿಐ ಪ್ರಕಾರ, ಹೂಡಿಕೆದಾರರಿಂದ ಹಣ ಸಂಗ್ರಹಿಸಲು ಬಳಸಲಾಗಿರುವ ಸುಮಾರು 150 ಬ್ಯಾಂಕ್ ಖಾತೆಗಳನ್ನು ಈವರೆಗಿನ ತನಿಖೆಯಲ್ಲಿ ಪತ್ತೆ ಮಾಡಲಾಗಿದೆ. ಈ ಖಾತೆಗಳಲ್ಲಿ ಸಂಗ್ರಹಿಸಿದ ಹಣವನ್ನು ಆರಂಭದಲ್ಲಿ ಜನರ ನಂಬಿಕೆ ಗಳಿಸಲು ಪಾವತಿಗಳಿಗೆ ಬಳಸಲಾಗುತ್ತಿತ್ತು ಎನ್ನಲಾಗಿದೆ. ಅಂತಿಮವಾಗಿ ಹಣ ಭಾರತದಿಂದ ಅಕ್ರಮವಾಗಿ ವರ್ಗಾವಣೆಯಾಗುವ ಮೊದಲು, ಆಗಾಗ್ಗೆ ಕ್ರಿಪ್ಟೋಕರೆನ್ಸಿಯಾಗಿ ಪರಿವರ್ತಿಸಲಾಗಿತ್ತು. ಹವಾಲಾ ವಹಿವಾಟುಗಳ ಮೂಲಕ ವರ್ಗಾಯಿಸಲಾಯಿತು ಎನ್ನಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ