ನಾಯಿಗೆ ಹೆದರಿ 3ನೇ ಮಹಡಿಯಿಂದ ಕೆಳಗೆ ಬಿದ್ದಿದ್ದ ಸ್ವಿಗ್ಗಿ ಡೆಲಿವರಿ ಬಾಯ್ ಸಾವು

| Updated By: ಸುಷ್ಮಾ ಚಕ್ರೆ

Updated on: Jan 16, 2023 | 1:47 PM

ರಿಜ್ವಾನ್ ಗ್ರಾಹಕರ ಮನೆ ಬಾಗಿಲಿಗೆ ಬಂದಾಗ ನಾಯಿ ಅವರತ್ತ ನುಗ್ಗಿತು. ಅದನ್ನು ನೋಡಿ ಹೆದರಿ ಓಡಿಹೋಗುವಾಗ ರಿಜ್ವಾನ್ ಕೆಳಗೆ ಬಿದ್ದಿದ್ದರು. ಇದರಿಂದ ಅವರ ತಲೆಗೆ ಗಂಭೀರವಾದ ಗಾಯಗಳಾಗಿತ್ತು.

ನಾಯಿಗೆ ಹೆದರಿ 3ನೇ ಮಹಡಿಯಿಂದ ಕೆಳಗೆ ಬಿದ್ದಿದ್ದ ಸ್ವಿಗ್ಗಿ ಡೆಲಿವರಿ ಬಾಯ್ ಸಾವು
ಸಾಂದರ್ಭಿಕ ಚಿತ್ರ
Follow us on

ಹೈದರಾಬಾದ್: ಫುಡ್ ಡೆಲಿವರಿಗೆ (Food Delivery) ಹೋದಾಗ ನಾಯಿಗೆ ಹೆದರಿ ಸ್ವಿಗ್ಗಿ ಡೆಲಿವರಿ ಬಾಯ್ (Swiggy Delivery Agent) ಹೈದರಾಬಾದ್​ನ ಅಪಾರ್ಟ್​ಮೆಂಟ್​ನ 3ನೇ ಮಹಡಿಯಿಂದ ಜಿಗಿದ ಘಟನೆ ನಡೆದಿತ್ತು. ಇದೀಗ ಆ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಸ್ವಿಗ್ಗಿ ಡೆಲಿವರಿ ಬಾಯ್ ಫುಡ್ ಆರ್ಡರ್ ಮಾಡಿದವರ ಮನೆಯ ಕಾಲಿಂಗ್ ಬೆಲ್ ಒತ್ತಿದಾಗ ಮನೆಯೊಳಗಿದ್ದ ನಾಯಿ ಜೋರಾಗಿ ಬೊಗಳುತ್ತಾ ಹೊರಗೆ ಬಂದಿತ್ತು. ಆಗ ಹೆದರಿದ ಡೆಲಿವರಿ ಬಾಯ್ ಭಯದಿಂದ ತಪ್ಪಿಸಿಕೊಳ್ಳಲು ಹೋಗಿ ಮಹಡಿಯಿಂದ ಕೆಳಗೆ ಹಾರಿದ್ದರು.

23 ವರ್ಷದ ಮೊಹಮ್ಮದ್ ರಿಜ್ವಾನ್ ಜನವರಿ 11ರಂದು ಬಂಜಾರಾ ಹಿಲ್ಸ್‌ನ ಲುಂಬಿನಿ ರಾಕ್ ಕ್ಯಾಸಲ್ ಅಪಾರ್ಟ್‌ಮೆಂಟ್‌ನ ಮೂರನೇ ಮಹಡಿಯಿಂದ ಗ್ರಾಹಕರ ಮುದ್ದಿನ ಜರ್ಮನ್ ಶೆಫರ್ಡ್‌ನಿಂದ ತಪ್ಪಿಸಿಕೊಂಡು ಓಡುತ್ತಿದ್ದಾಗ ಕೆಳಗೆ ಬಿದ್ದಿದ್ದರು. ಅವರು ಭಾನುವಾರ ಮೃತಪಟ್ಟಿದ್ದಾರೆ.

ಇದನ್ನೂ ಓದಿ: Shocking News: ಹೊಸ ವರ್ಷದ ರಾತ್ರಿ ಸ್ವಿಗ್ಗಿ ಡೆಲಿವರಿ ಬಾಯ್​​ಗೆ ಕಾರು ಡಿಕ್ಕಿ; 500 ಮೀಟರ್ ಎಳೆದೊಯ್ದ ಬಳಿಕ ಯುವಕ ಸಾವು!

ಪೊಲೀಸರ ಪ್ರಕಾರ, ರಿಜ್ವಾನ್ ಗ್ರಾಹಕರ ಮನೆ ಬಾಗಿಲಿಗೆ ಬಂದಾಗ, ನಾಯಿ ಅವರತ್ತ ನುಗ್ಗಿತು. ಅದನ್ನು ನೋಡಿ ಹೆದರಿ ಓಡಿಹೋಗುವಾಗ ರಿಜ್ವಾನ್ ಕೆಳಗೆ ಬಿದ್ದಿದ್ದರು. ಇದರಿಂದ ಅವರ ತಲೆಗೆ ಗಂಭೀರವಾದ ಗಾಯಗಳಾಗಿತ್ತು. ತಕ್ಷಣ ನಾಯಿಯ ಮಾಲೀಕರು ಅವರನ್ನು ನಿಜಾಮ್ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಸೇರಿಸಿದ್ದರು.

ಸ್ವಿಗ್ಗಿ ಡೆಲಿವರಿ ಏಜೆಂಟ್ 25 ವರ್ಷದ ರಿಜ್ವಾನ್ ಕಳೆದ 3 ವರ್ಷಗಳಿಂದ ಸ್ವಿಗ್ಗಿಯೊಂದಿಗೆ ಕೆಲಸ ಮಾಡುತ್ತಿದ್ದರು. ಫ್ಲಾಟ್ ಮಾಲೀಕರ ನಿರ್ಲಕ್ಷ್ಯದ ವಿರುದ್ಧ ರಿಜ್ವಾನ್​ನ ಸಹೋದರ ಬಂಜಾರಾ ಹಿಲ್ಸ್ ಪೊಲೀಸರಿಗೆ ದೂರು ನೀಡಿದ್ದರು. ನಾಯಿಯ ಮಾಲೀಕರ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ