ಚೆನ್ನೈ: ನೀವರ್ ಚಂಡಮಾರುತ ತಮಿಳುನಾಡಿಗೆ ಅಪ್ಪಳಿಸಿದ್ದೇ ತಡ ಎಲ್ಲೆಡೆ ಧಾರಾಕಾರ ಮಳೆ, ಪ್ರವಾಹದಂಥ ಪರಿಸ್ಥಿತಿ. ಇತ್ತ, ಜನಸಾಮಾನ್ಯರಿಗೆ ಇದರಿಂದ ಸಂಕಷ್ಟ ಎದುರಾಗಿದೆ. ಆದರೆ, ಕೆಲ ತಮಿಳು ನಟರು ಮಳೆರಾಯನ ಅವಾಂತರವನ್ನು ಪಾಸಿಟಿವ್ ಆಗಿ ತೆಗೆದುಕೊಂಡು ಬಿಂದಾಸ್ ಆಗಿ ಮಸ್ತಿ ಮಾಡಿದ್ದಾರೆ.
ಇದಕ್ಕೆ ಬೆಸ್ಟ್ ಉದಾಹರಣೆ ಖಳನಾಯಕನ ಪಾತ್ರದಲ್ಲಿ ತೆರೆ ಮೇಲೆ ಮಿಂಚಿರುವ ನಟ ಮನ್ಸೂರ್ ಅಲಿ ಖಾನ್. ಹೌದು, ತಮಿಳುನಾಡಿನ ಹೆಸರಾಂತ ನಟ ಮಳೆಯಿಂದ ತಮ್ಮ ನಿವಾಸದ ಮುಂದೆ ನಿಂತ ನೀರಿನಲ್ಲಿ ಬಿಂದಾಸ್ ಆಗಿ ಬೋಟಿಂಗ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ಚೆನ್ನೈನಲ್ಲಿರುವ ತನ್ನ ಮನೆ ಮುಂಭಾಗದಲ್ಲಿ ಬೋಟಿಂಗ್ ಮಾಡಿರುವ ಖಾನ್ ಹಾಡು ಹಾಡುತ್ತಾ ಬೋಟಿಂಗ್ ಮಾಡಿ ಫುಲ್ ಎಂಜಾಯ್ ಮಾಡಿದರು. ತಮಿಳು ಚಿತ್ರರಂಗದ ಈ ರೀಲ್ ವಿಲನ್ನ ರಿಯಲ್ ಹಾಗೂ ಡಿಫರೆಂಟ್ ಅವತಾರ ವಿಡಿಯೋದಲ್ಲಿ ಸೆರೆಯಾಗಿದ್ದು ಇದೀಗ ಎಲ್ಲೆಡೆ ಸಿಕ್ಕಾಪಟ್ಟೆ ರೌಂಡ್ಸ್ ಹೊಡೀತಾಯಿದೆ.
Published On - 11:26 am, Thu, 26 November 20