ಎನ್‌ಡಿಎಯಿಂದ ಹೊರನಡೆದ ನಂತರ ಎಐಎಡಿಎಂಕೆ ಮುಖ್ಯಸ್ಥ ಇಪಿಎಸ್​​ನ್ನು ಮೂರ್ಖ ರಾಜನಾಗಿ ಚಿತ್ರಿಸಿದ ಬಿಜೆಪಿ

|

Updated on: Sep 26, 2023 | 6:14 PM

ಸನಾತನ ರಕ್ಷಣೆಗೆ ಕೇಸರಿ ಪಡೆಗಳು ಸಿದ್ಧವಾಗಿವೆ!! ಹುಲಿಗಳಂತಹ ನಾಯಕರಿರುವ ನಮಗೆ ಪುಲಿಕೇಶಿಯ ಬೆಂಬಲ ಏಕೆ ಬೇಕು? ಎಂದು ಪೋಸ್ಟರ್​​​ನಲ್ಲಿ ಬರೆದಿದೆ. ಬಿಜೆಪಿಯ ಮಧುರೈ ಘಟಕ ಹಾಗೂ ಜಿಲ್ಲಾ ಕಾರ್ಯದರ್ಶಿ ರಾಜ್‌ಕುಮಾರ್‌ ಅವರ ಪರವಾಗಿ ಈ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಎಡಪ್ಪಾಡಿ ಪಳನಿಸ್ವಾಮಿ ಅವರನ್ನು ‘ಕಿಂಗ್ ಮೇಕರ್’ ಎಂದು ಬಿಂಬಿಸಿ ಎಐಎಡಿಎಂಕೆ ಹಾಕಿರುವ ಪೋಸ್ಟರ್‌ಗಳ ಪಕ್ಕದಲ್ಲಿ ಈ ಪೋಸ್ಟರ್‌ಗಳನ್ನು ಅಂಟಿಸಿ ಟಾಂಗ್ ನೀಡಲಾಗಿದೆ.

ಎನ್‌ಡಿಎಯಿಂದ ಹೊರನಡೆದ ನಂತರ ಎಐಎಡಿಎಂಕೆ ಮುಖ್ಯಸ್ಥ ಇಪಿಎಸ್​​ನ್ನು ಮೂರ್ಖ ರಾಜನಾಗಿ ಚಿತ್ರಿಸಿದ ಬಿಜೆಪಿ
ಬಿಜೆಪಿ ಪೋಸ್ಟರ್
Image Credit source: News9
Follow us on

ಮಧುರೈ ಸೆಪ್ಟೆಂಬರ್ 26: ಎಐಎಡಿಎಂಕೆ (AIADMK) ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್​​​ನಿಂದ (NDA) ಹೊರನಡೆದ ಒಂದು ದಿನದ ನಂತರ ಮಂಗಳವಾರ ತಮಿಳುನಾಡಿನ ಮಧುರೈನಲ್ಲಿ ಎಡಪ್ಪಾಡಿ ಕೆ ಪಳನಿಸ್ವಾಮಿ (EPS) ಅವರನ್ನು ಟೀಕಿಸುವ ವಾಲ್ ಪೋಸ್ಟರ್‌ಗಳನ್ನು ಬಿಜೆಪಿ ಹಾಕಿದೆ. ಪೋಸ್ಟರ್‌ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಜ್ಯ ಮುಖ್ಯಸ್ಥ ಕೆ ಅಣ್ಣಾಮಲೈ ಮತ್ತು ಬಿಜೆಪಿ ಸ್ಥಳೀಯ ನಾಯಕರು ಇದ್ದು, ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರನ್ನು 23 ನೇ ಪುಲಿಕೇಸಿ (ತಮಿಳಿನ ಜನಪ್ರಿಯ ನಟ ವಡಿವೇಲು ಪಾತ್ರ ನಿರ್ವಹಿಸಿದ ಇಮಸೈ ಅರಸನ್ ಇರುಪತ್ತಿಮೂನಾಂ ಪುಲಿಕೇಸಿ ಎಂಬ ತಮಿಳು ಚಲನಚಿತ್ರದ ಮೂರ್ಖ ರಾಜ) ಎಂದು ಚಿತ್ರಿಸಿದ್ದಾರೆ.

ಸನಾತನ ರಕ್ಷಣೆಗೆ ಕೇಸರಿ ಪಡೆಗಳು ಸಿದ್ಧವಾಗಿವೆ!! ಹುಲಿಗಳಂತಹ ನಾಯಕರಿರುವ ನಮಗೆ ಪುಲಿಕೇಶಿಯ ಬೆಂಬಲ ಏಕೆ ಬೇಕು? ಎಂದು ಪೋಸ್ಟರ್​​​ನಲ್ಲಿ ಬರೆದಿದೆ. ಬಿಜೆಪಿಯ ಮಧುರೈ ಘಟಕ ಹಾಗೂ ಜಿಲ್ಲಾ ಕಾರ್ಯದರ್ಶಿ ರಾಜ್‌ಕುಮಾರ್‌ ಅವರ ಪರವಾಗಿ ಈ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ.

ಎಡಪ್ಪಾಡಿ ಪಳನಿಸ್ವಾಮಿ ಅವರನ್ನು ‘ಕಿಂಗ್ ಮೇಕರ್’ ಎಂದು ಬಿಂಬಿಸಿ ಎಐಎಡಿಎಂಕೆ ಹಾಕಿರುವ ಪೋಸ್ಟರ್‌ಗಳ ಪಕ್ಕದಲ್ಲಿ ಈ ಪೋಸ್ಟರ್‌ಗಳನ್ನು ಅಂಟಿಸಿ ಟಾಂಗ್ ನೀಡಲಾಗಿದೆ.

2024 ರ ಲೋಕಸಭೆ ಚುನಾವಣೆಗಾಗಿ ಸೋಮವಾರ ಬಿಜೆಪಿ ಜತೆಗಿನ ಸಂಬಂಧವನ್ನು ಎಐಎಡಿಎಂಕೆ ರದ್ದುಗೊಳಿಸಿದೆ. ಬಿಜೆಪಿಯೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುವ ಪಕ್ಷದ ನಿರ್ಧಾರದ ನಂತರ ಚೆನ್ನೈನಲ್ಲಿರುವ ಎಐಎಡಿಎಂಕೆ ಪ್ರಧಾನ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆಯಿತು. ಪಕ್ಷದ ಉನ್ನತ ಮಟ್ಟದ ಸಭೆಯು ಎಐಎಡಿಎಂಕೆ ನಾಯಕರು ಮತ್ತು ಸಿದ್ಧಾಂತದ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ನಡೆಸುತ್ತಿರುವ ಬಿಜೆಪಿ ತಮಿಳುನಾಡು ಘಟಕವನ್ನು ಟೀಕಿಸುವ ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿತು.

ಇದನ್ನೂ ಓದಿ: AIADMK: ಬಿಜೆಪಿ ಜೊತೆಗಿಲ್ಲ ಎಐಎಡಿಎಂಕೆ; ಎನ್​​ಡಿಎ ಮೈತ್ರಿಯಿಂದ ಹೊರಬರಲು ನಿರ್ಧಾರ

ಈ ಎಲ್ಲ ಬೆಳವಣಿಗೆಗಳ ಮಧ್ಯೆ. ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಪ್ರತಿಕ್ರಿಯಿಸಿದ್ದು, ಎನ್‌ಡಿಎಯಿಂದ ಹೊರಬರುವ ಎಐಎಡಿಎಂಕೆ ನಿರ್ಧಾರದ ಬಗ್ಗೆ ಬಿಜೆಪಿ ರಾಷ್ಟ್ರೀಯ ನಾಯಕತ್ವವು ಪ್ರತಿಕ್ರಿಯಿಸುತ್ತದೆ ಎಂದು ಹೇಳಿದ್ದಾರೆ. ಇದೊಂದು ಕಾರ್ಯವಿಧಾನ, ಈ ಬಗ್ಗೆ ನಾನು ಆಮೇಲೆ ಮಾತಾನಾಡುವೆ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:08 pm, Tue, 26 September 23