ಈಗ ಬಿಜೆಪಿಯೊಂದಿಗೆ ಮೈತ್ರಿ ಇಲ್ಲ, ಚುನಾವಣೆಗೆ ಮುನ್ನ ಅದನ್ನು ನಿರ್ಧರಿಸುತ್ತೇವೆ: ಎಐಎಡಿಎಂಕೆ

ರಾಜ್ಯ ಬಿಜೆಪಿ ಮುಖ್ಯಸ್ಥರು ಆಡಳಿತಾರೂಢ ಡಿಎಂಕೆ ಮತ್ತು ಮಿತ್ರಪಕ್ಷ ಎಐಎಡಿಎಂಕೆ ವಿರುದ್ಧವೂ ಟೀಕಾ ಪ್ರಹಾರ ಮಾಡುತ್ತಿದ್ದು, ಇದು ಹಿರಿಯ ನಾಯಕರಿಗೆ ಇರಿಸುಮುರಿಸು ಉಂಟು ಮಾಡುತ್ತಿದೆ. ರಾಜ್ಯದಲ್ಲಿ ಬಿಜೆಪಿಯ  ಏಕೈಕ ಮಿತ್ರ ಪಕ್ಷ ಎಐಎಡಿಎಂಕೆ. ಲೋಕಸಭೆ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಸ್ಥಾನ ಪಡೆದುಕೊಳ್ಳಲು ಹವಣಿಸುತ್ತಿರುವ ಬಿಜೆಪಿ ಕೇಂದ್ರ ನಾಯಕತ್ವದ ಮುಖವಾಣಿಯಂತೆ ಮಾಜಿ ಐಪಿಎಸ್ ಅಧಿಕಾರಿ ಕಾರ್ಯನಿರ್ವಹಿಸುತ್ತಿದ್ದಾರೆಯೇ ಎಂಬ ಅನುಮಾನ ಎಐಎಡಿಎಂಕೆ ಪಾಳಯದಲ್ಲಿ ಮೂಡಿದೆ.

ಈಗ ಬಿಜೆಪಿಯೊಂದಿಗೆ ಮೈತ್ರಿ ಇಲ್ಲ, ಚುನಾವಣೆಗೆ ಮುನ್ನ ಅದನ್ನು ನಿರ್ಧರಿಸುತ್ತೇವೆ: ಎಐಎಡಿಎಂಕೆ
ಬಿಜೆಪಿ-ಎಐಎಡಿಎಂಕೆ
Follow us
|

Updated on: Sep 18, 2023 | 8:29 PM

ಚೆನ್ನೈ ಸೆಪ್ಟೆಂಬರ್ 18: ಬಿಜೆಪಿ (BJP) ಜತೆ ಈಗ ಮೈತ್ರಿ ಈಗ ಇಲ್ಲ ಎಂದು ಎಐಎಡಿಎಂಕೆ (AIADMK) ಹೇಳಿದೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ (K Annamalai) ಅವರು ಹಿಂದೂ ಧಾರ್ಮಿಕ ಮತ್ತು ಧರ್ಮ ದತ್ತಿ ಸಚಿವ ಪಿ.ಕೆ ಸೇಕರ್ ಬಾಬು ವಿರುದ್ಧ ಪ್ರತಿಭಟನಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ‘ಸನಾತನ ಧರ್ಮ’ದ ವಿರುದ್ಧದ ಹೇಳಿಕೆಗೆ ಅಣ್ಣಾದೊರೈ ವಿರುದ್ಧವೂ ಹೇಳಿಕೆ ನೀಡಿದ್ದರು. 1950 ರ ದಶಕದಲ್ಲಿ ಮಧುರೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಣ್ಣಾದೊರೈ ಅವರು ಹಿಂದೂ ಧರ್ಮದ ವಿರುದ್ಧ ಟೀಕಾಪ್ರಹಾರ ಮಾಡಿದ್ದರು. ಇದನ್ನು ಸ್ವಾತಂತ್ರ್ಯ ಹೋರಾಟಗಾರ ಪಸುಂಪನ್ ಮುತ್ತುಮಾರ್ಲಿಂಗ ಥೇವರ್ ಅವರು ಕಟುವಾಗಿ ವಿರೋಧಿಸಿದ್ದರು ಎಂದು ಅವರು ಹೇಳಿದ್ದರು. ಅಣ್ಣಾಮಲೈ ಹೇಳಿಕೆಯ ಬೆನ್ನಲ್ಲೇ ಎಐಎಡಿಎಂಕೆ ನಾಯಕರು ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಹರಿಹಾಯ್ದಿದ್ದಾರೆ.

ಸದ್ಯ ಮೈತ್ರಿ ಇಲ್ಲ ಆದರೆ ಚುನಾವಣೆಗೂ ಮುನ್ನವೇ ಮೈತ್ರಿ ಬಗ್ಗೆ ನಿರ್ಧರಿಸುತ್ತೇವೆ ಎಂದು ಎಐಎಡಿಎಂಕೆ ನಾಯಕ ಡಿ.ಜಯಕುಮಾರ್ ಹೇಳಿದ್ದಾರೆ. ಅಣ್ಣಾಮಲೈ ಅವರು ಬಿಜೆಪಿಯ ರಾಜ್ಯಾಧ್ಯಕ್ಷರಾಗಲು ಅನರ್ಹರು. ಅವರು ತಮ್ಮನ್ನು ತಾವು ಬಿಂಬಿಸಿಕೊಳ್ಳಲು ಮಾತ್ರ ದಿವಂಗತ ನಾಯಕರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ ಎಂದು ಜಯಕುಮಾರ್ ಹೇಳಿದ್ದಾರೆ.

ಆ ಸಮಯದಲ್ಲಿ, ರಾಜ್ಯ ಬಿಜೆಪಿ ಮುಖ್ಯಸ್ಥರನ್ನು ಸಂಯಮ ಪಾಲಿಸಬೇಕು ಎಂದ ಅವರು ದಿವಂಗತ ಮುಖ್ಯಮಂತ್ರಿಗೆ ಅವಮಾನ ಮಾಡಿದರೆ ಪಕ್ಷದ ಕಾರ್ಯಕರ್ತರು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.

ರಾಜ್ಯ ಬಿಜೆಪಿ ಮುಖ್ಯಸ್ಥರು ಆಡಳಿತಾರೂಢ ಡಿಎಂಕೆ ಮತ್ತು ಮಿತ್ರಪಕ್ಷ ಎಐಎಡಿಎಂಕೆ ವಿರುದ್ಧವೂ ಟೀಕಾ ಪ್ರಹಾರ ಮಾಡುತ್ತಿದ್ದು, ಇದು ಹಿರಿಯ ನಾಯಕರಿಗೆ ಇರಿಸುಮುರಿಸು ಉಂಟು ಮಾಡುತ್ತಿದೆ. ರಾಜ್ಯದಲ್ಲಿ ಬಿಜೆಪಿಯ  ಏಕೈಕ ಮಿತ್ರ ಪಕ್ಷ ಎಐಎಡಿಎಂಕೆ. ಲೋಕಸಭೆ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಸ್ಥಾನ ಪಡೆದುಕೊಳ್ಳಲು ಹವಣಿಸುತ್ತಿರುವ ಬಿಜೆಪಿ ಕೇಂದ್ರ ನಾಯಕತ್ವದ ಮುಖವಾಣಿಯಂತೆ ಮಾಜಿ ಐಪಿಎಸ್ ಅಧಿಕಾರಿ ಕಾರ್ಯನಿರ್ವಹಿಸುತ್ತಿದ್ದಾರೆಯೇ ಎಂಬ ಅನುಮಾನ ಎಐಎಡಿಎಂಕೆ ಪಾಳಯದಲ್ಲಿ ಮೂಡಿದೆ.

ತಮಿಳುನಾಡಿನಲ್ಲಿ ಅಸ್ತಿತ್ವವನ್ನೇ ಹೊಂದಿರದ ಬಿಜೆಪಿ – ಎಐಎಡಿಎಂಕೆಯೊಳಗಿನ ಗುಂಪುಗಾರಿಕೆಯನ್ನೇ ಬಂಡವಾಳವಾಗಿಟ್ಟುಕೊಂಡು ಮೈತ್ರಿಯಲ್ಲಿ ತನ್ನನ್ನು ದೊಡ್ಡಣ್ಣ ಎಂದು ಬಿಂಬಿಸುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆಗೆ ಅಧಿಕಾರ ಕಳೆದುಕೊಂಡ ನಂತರ ಎಐಎಡಿಎಂಕೆಯ ಓ ಪನ್ನೀರಸೆಲ್ವಂ ಮತ್ತು ಮೈತ್ರಿಗೆ ಗ್ರೀನ್ ಸಿಗ್ನಲ್ ನೀಡಿದ್ದ ಇ ಪಳನಿಸ್ವಾಮಿ ನಡುವಿನ ಜಟಾಪಟಿ ಮತ್ತೆ ಶುರುವಾಗಿತ್ತು.

ಮಾರ್ಚ್‌ನಲ್ಲಿ, ಅಣ್ಣಾಮಲೈ ಅವರು 2024 ರ ಚುನಾವಣೆಗೆ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಳ್ಳುವುದರ ವಿರುದ್ಧ ಮಾತನಾಡಿದ್ದರು. ಸ್ನೇಹ ಸಂಬಂಧಗಳ ಹೊರತಾಗಿಯೂ, ಜಯಲಲಿತಾ ದೀರ್ಘಕಾಲದವರೆಗೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರಲಿಲ್ಲ.

ಬಿಜೆಪಿ ಕಾರ್ಯಕರ್ತರು ಬಯಸಿದ್ದರೂ ಅಣ್ಣಾಮಲೈ ಅವರು ಎಐಎಡಿಎಂಕೆ ಜೊತೆ ಮೈತ್ರಿ ಬಯಸುವುದಿಲ್ಲ. ನಮ್ಮ ನಾಯಕರ ಈ ಟೀಕೆಗಳನ್ನೆಲ್ಲಾ ನಾವು ಸಹಿಸಬೇಕೇ? ನಾವು ನಿಮ್ಮನ್ನು ಯಾಕೆ ಜತೆಗೂಡಿಸಬೇಕು? ಬಿಜೆಪಿ ಇಲ್ಲಿಗೆ ಕಾಲಿಡಲು ಸಾಧ್ಯವಿಲ್ಲ. ನಿಮ್ಮ ಮತ ಬ್ಯಾಂಕ್ ತಿಳಿದಿದೆ. ನೀವು ನಮ್ಮಿಂದಾಗಿಯೇ ಇರುವುದು” ಎಂದು ಮಾಜಿ ಸಚಿವರು ಸುದ್ದಿಗಾರರಿಗೆ ತಿಳಿಸಿದರು.

ಇದನ್ನೂ ಓದಿ: ಬೇರೆ ರಾಜ್ಯಗಳಿಗಿಂತ ತಮಿಳುನಾಡಿನಲ್ಲಿ ಸಾಮಾಜಿಕ ತಾರತಮ್ಯ ಹೆಚ್ಚು: ರಾಜ್ಯಪಾಲ ಆರ್‌ಎನ್ ರವಿ

ನಾಯಕರ ಟೀಕೆಗಳನ್ನು ನಾವು ಇನ್ನು ಮುಂದೆ ಸಹಿಸುವುದಿಲ್ಲ ಎಂದು ಜಯಕುಮಾರ್ ಹೇಳಿದ್ದಾರೆ. ಇದು ಅವರ ವೈಯಕ್ತಿಕ ಅಭಿಪ್ರಾಯವೇ ಎಂಬ ಪ್ರಶ್ನೆಗೆ ಉತ್ತರಿಸಿದ ಜಯಕುಮಾರ್, “ನಾನು ನಿಮ್ಮೊಂದಿಗೆ ಎಂದಾದರೂ ಆ ಸಾಮರ್ಥ್ಯದಲ್ಲಿ ಮಾತನಾಡಿದ್ದೇನೆಯೇ? ಪಕ್ಷ ಏನು ನಿರ್ಧರಿಸುತ್ತದೆಯೋ ಅದನ್ನು ಮಾತ್ರ ಮಾತನಾಡುತ್ತೇನೆ” ಎಂದು ಹೇಳಿದರು.

ಎಐಎಡಿಎಂಕೆ 2019 ರ ಲೋಕಸಭೆ ಚುನಾವಣೆ ಮತ್ತು 2021 ರ ವಿಧಾನಸಭಾ ಚುನಾವಣೆ ಸೇರಿದಂತೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದ ಎಲ್ಲಾ ಚುನಾವಣೆಗಳಲ್ಲಿ ಸೋತಿದೆ. ಈ ಸೋಲಿಗೆ ಬಿಜೆಪಿಯೇ ಕಾರಣ ಎಂದು ಎಐಎಡಿಎಂಕೆ ನಾಯಕರು ಅಂದುಕೊಂಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ