ಬೇರೆ ರಾಜ್ಯಗಳಿಗಿಂತ ತಮಿಳುನಾಡಿನಲ್ಲಿ ಸಾಮಾಜಿಕ ತಾರತಮ್ಯ ಹೆಚ್ಚು: ರಾಜ್ಯಪಾಲ ಆರ್‌ಎನ್ ರವಿ
ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಜಾತಿ ಪಟ್ಟಿ ಧರಿಸಿರುವುದು, ದಲಿತರು ಬಳಸುವ ನೀರಿನ ತೊಟ್ಟಿಯಲ್ಲಿ ಮಾನವ ಮಲವಿಸರ್ಜನೆ, ದೇವಸ್ಥಾನಗಳಿಗೆ ಒಂದು ವರ್ಗದವರಿಗೆ ಅನುಮತಿ ನಿರಾಕರಿಸುವುದು ಮುಂತಾದ ವರದಿಗಳನ್ನು ಓದಿದ್ದೇನೆ, ಅಂಥಾ ವರದಿಗಳು ನನಗೆ ಸಿಕ್ಕಿದೆ. ಇದೆಲ್ಲವೂ ರಾಜ್ಯದಲ್ಲಿ ಅಸ್ಪೃಶ್ಯತೆ ಆಚರಣೆಯನ್ನು ಪ್ರತಿಬಿಂಬಿಸುತ್ತದೆ. ಈ ಅನಿಷ್ಟ ಪದ್ಧತಿಯನ್ನು ಸಮಾಜ ಸುಧಾರಣೆಯಿಂದ ಮಾತ್ರ ನಿರ್ಮೂಲನೆ ಮಾಡಲು ಸಾಧ್ಯವೇ ಹೊರತು ಮತ ಬ್ಯಾಂಕ್ ರಾಜಕಾರಣದಿಂದಲ್ಲ ಎಂದ ತಮಿಳುನಾಡು ರಾಜ್ಯಪಾಲ.
ತಂಜಾವೂರು: ಸಾಮಾಜಿಕ ತಾರತಮ್ಯದ ಕುರಿತು ತಮಿಳುನಾಡು (Tamil Nadu) ರಾಜ್ಯಪಾಲ ಆರ್‌ಎನ್ ರವಿ (Governor RN Ravi) ಸೋಮವಾರ ನೀಡಿರುವ ಹೇಳಿಕೆ ಡಿಎಂಕೆ (DMK) ನೇತೃತ್ವದ ರಾಜ್ಯ ಸರ್ಕಾರದೊಂದಿಗೆ ಹೊಸ ವಾಗ್ವಾದಕ್ಕೆ ಕಾರಣವಾಗಿದೆ.ರಾಜ್ಯದ ವಿವಿಧೆಡೆ ಸಾಮಾಜಿಕ ತಾರತಮ್ಯ ಇನ್ನೂ ಚಾಲ್ತಿಯಲ್ಲಿದೆ ಎಂದು ರಾಜ್ಯಪಾಲರು ಹೇಳಿದ್ದಾರೆ. ಜಾತಿ ತಾರತಮ್ಯವು ದೇಶದ ಎಲ್ಲಕ್ಕಿಂತ ಹೆಚ್ಚಾಗಿ ತಮಿಳುನಾಡಿನಲ್ಲಿ ಅತಿರೇಕವಾಗಿದೆ ಎಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರ ವಿರುದ್ಧ ರವಿ ಹೇಳಿಕೆ ನೀಡಿದ್ದಾರೆ
ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಜಾತಿ ಪಟ್ಟಿ ಧರಿಸಿರುವುದು, ದಲಿತರು ಬಳಸುವ ನೀರಿನ ತೊಟ್ಟಿಯಲ್ಲಿ ಮಾನವ ಮಲವಿಸರ್ಜನೆ, ದೇವಸ್ಥಾನಗಳಿಗೆ ಒಂದು ವರ್ಗದವರಿಗೆ ಅನುಮತಿ ನಿರಾಕರಿಸುವುದು ಮುಂತಾದ ವರದಿಗಳನ್ನು ಓದಿದ್ದೇನೆ, ಅಂಥಾ ವರದಿಗಳು ನನಗೆ ಸಿಕ್ಕಿದೆ. ಇದೆಲ್ಲವೂ ರಾಜ್ಯದಲ್ಲಿ ಅಸ್ಪೃಶ್ಯತೆ ಆಚರಣೆಯನ್ನು ಪ್ರತಿಬಿಂಬಿಸುತ್ತದೆ. ಈ ಅನಿಷ್ಟ ಪದ್ಧತಿಯನ್ನು ಸಮಾಜ ಸುಧಾರಣೆಯಿಂದ ಮಾತ್ರ ನಿರ್ಮೂಲನೆ ಮಾಡಲು ಸಾಧ್ಯವೇ ಹೊರತು ಮತ ಬ್ಯಾಂಕ್ ರಾಜಕಾರಣದಿಂದಲ್ಲ ಎಂದು ಅವರು ಹೇಳಿದ್ದಾರೆ.
ರವಿ ಅವರು ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್ ಅವರ ಸನಾತನ ಧರ್ಮದ ನಿರ್ಮೂಲನದ ಕರೆಯನ್ನು ಪರೋಕ್ಷವಾಗಿ ಟೀಕಿಸಿದ್ದಾರೆ. ಹಿಂದೂ ಧರ್ಮ, ಅಸಮಾನತೆಯ ಬಗ್ಗೆ ಮಾತನಾಡುವುದಿಲ್ಲ. ನಾವೆಲ್ಲರೂ ಒಂದೇ ದೈವಿಕತೆಯ ಅಭಿವ್ಯಕ್ತಿಗಳು, ಸಾಮಾಜಿಕ ಅನಿಷ್ಟಗಳನ್ನು ನಿರ್ಮೂಲನೆ ಮಾಡಲು ಅದರೊಳಗೆ ಹಲವಾರು ಚಳುವಳಿಗಳನ್ನು ಹೊಂದಿದ್ದೇವೆ. ಆದರೆ ಸನಾತನ ಧರ್ಮದ ನಿರ್ಮೂಲನೆಗೆ ಕೆಲವು ವರ್ಗದ ಜನರು ಕರೆ ನೀಡುತ್ತಾರೆ ಮತ್ತು ಅವರು ವಿದೇಶಿ ಶಕ್ತಿಗಳು ಮತ್ತು ಜಿಹಾದಿಗಳ ಸಹಯೋಗದೊಂದಿಗೆ ದೇಶವನ್ನು ಒಡೆಯುವ ಉದ್ದೇಶವನ್ನು ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಸೋನಿಯಾ ಗಾಂಧಿ ಅವರನ್ನು ತೆಲಂಗಾಣ ತಲ್ಲಿ ಎಂದು ಬಿಂಬಿಸಿದ್ದಕ್ಕೆ ಕಿಶನ್ ರೆಡ್ಡಿ ಆಕ್ಷೇಪ
ತಮಿಳುನಾಡು ರಾಜ್ಯಪಾಲರ ಸಾಮಾಜಿಕ ತಾರತಮ್ಯದ ಟೀಕೆಗಳಿಗೆ ಪ್ರತಿಕ್ರಿಯಿಸಿದ ಡಿಎಂಕೆ ಸಂಸದೆ ಕನಿಮೊಳಿ ಅವರು ಇತಿಹಾಸವನ್ನು ಓದಬೇಕು ಏಕೆಂದರೆ ಮೀಸಲಾತಿಗಾಗಿ ಮೊದಲ ತಿದ್ದುಪಡಿಯನ್ನು ಮೊದಲು ತಂದಿದ್ದೇ ತಮಿಳುನಾಡು. ಸಾಮಾಜಿಕ ನ್ಯಾಯ ಎಂದರೆ ಅದು ಪ್ರತಿಯೊಬ್ಬರಿಗೂ ಸಮಾನವಾದ ವೇದಿಕೆಯನ್ನು ನೀಡುತ್ತದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ