ಚೆನ್ನೈ: ತಮಿಳುನಾಡು (Tamil nadu) ಸರ್ಕಾರ ಮತ್ತು ಸಿಎಂ ಸ್ಟಾಲಿನ್ ಚೆಸ್ ಒಲಿಂಪಿಯಾಡ್ನ್ನು (Chess Olympiad) ಹೈಜಾಕ್ ಮಾಡಲು ಯತ್ನಿಸುತ್ತಿದ್ದಾರೆ. ಆದ್ದರಿಂದಲೇ ಚೆಸ್ ಒಲಿಂಪಿಯಾಡ್ ಜಾಹೀರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ( Narendra Modi) ಚಿತ್ರವನ್ನು ಉದ್ದೇಶಪೂರ್ವಕ ಕೈಬಿಡಲಾಗಿದೆ ಎಂದು ತಮಿಳುನಾಡು ಬಿಜೆಪಿ ಆರೋಪಿಸಿದೆ. ಕೊಯಂಬತ್ತೂರ್ ನಲ್ಲಿ ಚೆಸ್ ಒಲಿಂಪಿಯಾಡ್ ಪ್ರಚಾರ ಕಾರ್ಯಕ್ರಮದಿಂದ ಬಿಜೆಪಿ ಪ್ರತಿನಿಧಿಗಳು ಹೊರ ನಡೆದಿದ್ದಾರೆ. ಆನಂತರ ಬಿಜೆಪಿ ಕಾರ್ಯಕರ್ತರು ಜಾಹೀರಾತು ಪೋಸ್ಟರ್ಗಳಲ್ಲಿ ಪ್ರಧಾನಿ ಮೋದಿ ಫೋಟೊವನ್ನು ಅಂಟಿಸಿದ್ದಾರೆ. ವಿವಿಧ ಬಸ್ ನಿಲ್ದಾಣಗಳಲ್ಲಿ ಪ್ರಧಾನಿ ಮೋದಿಯ ಚಿತ್ರವಿರುವ ಹೋರ್ಡಿಂಗ್ ಚಿತ್ರವನ್ನು ಕ್ರೀಡೆ ಮತ್ತು ಕೌಶಲ ಅಭಿವೃದ್ಧಿ ಬಿಜೆಪಿಯ ರಾಜ್ಯ ಅಧ್ಯಕ್ಷ ಅಮರ್ ಪ್ರಸಾದ್ ರೆಡ್ಡಿ ಪೋಸ್ಟ್ ಮಾಡಿದ್ದಾರೆ. ಜಾಹೀರಾತಿನಲ್ಲಿ ಪ್ರಧಾನಿ ಮೋದಿ ಫೋಟೋ ಇಲ್ಲ. ಹೀಗಾಗಿ ಪೋಸ್ಟರ್ ಗಳಲ್ಲಿ ಮೋದಿ ಫೋಟೊ ಅಂಟಿಸಿ ಎಂದು ಅವರು ಬಿಜೆಪಿ ಕಾರ್ಯಕರ್ತರಿಗೆ ಹೇಳಿದ್ದಾರೆ.
Let me remind CM @stalin that our PM Sh. @narendramodi Avl is the sole representative of this Nation??
Here we begin!!!Chess Olympiad 2022.@annamalai_k @blsanthosh @JPNadda pic.twitter.com/eKiMW8GmQ9
— Amar Prasad Reddy (@amarprasadreddy) July 27, 2022
ಕೇಂದ್ರ ಸರ್ಕಾರ ತಮಿಳುನಾಡಿನಲ್ಲಿ ಚೆಸ್ ಒಲಿಂಪಿಯಾಡ್ ಆಯೋಜಿಸಿದೆ. ಡಿಎಂಕೆ ಆತಿಥ್ಯ ವಹಿಸುತ್ತಿದ್ದು ಸಿಎಂ ಸ್ಟಾಲಿನ್ ಅವರು ತಮ್ಮ ಮಿತಿ ಗುಮ್ಮಡಿಪುಂಡಿಯಲ್ಲಿ ಮುಗಿಯುತ್ತದೆ ಎಂದು ಮರೆತಿದ್ದಾರೆ. ಹಾಗಾಗಿ ಅವರು ಪ್ರಧಾನಿ ಮೋದಿಯವರ ಫೋಟೊ ಇಲ್ಲದೆ ಜಾಹೀರಾತು ನೀಡುತ್ತಿದ್ದಾರೆ. ಇದು ಡಿಎಂಕೆಯ ಕಾರ್ಯಕ್ರಮ ಅಲ್ಲ , ಇದು ಕೇಂದ್ರ ಸರ್ಕಾರದ ಕಾರ್ಯಕ್ರಮ. ಹಾಗಾಗಿ ವಿವಿಧ ಜಾಗಗಳಲ್ಲಿ ಸ್ಥಾಪಿಸಲಾದ ಹೋರ್ಡಿಂಗ್ ಗಳಲ್ಲಿ ಮೋದಿಯವರ ಫೋಟೊವನ್ನು ಅಂಟಿಸಿ ಎಂದು ಬಿಜೆಪಿ ಕಾರ್ಯಕರ್ತರಿಗೆ ಅಮರ್ ಪ್ರಸಾದ್ ರೆಡ್ಡಿ ಕರೆ ನೀಡಿದ್ದಾರೆ.
ಜುಲೈ 28ಕ್ಕೆ ಜವಾಹರ್ ಲಾಲ್ ನೆಹರು ಒಳಾಂಗಣ ಸ್ಟೇಡಿಯಂನಲ್ಲಿ ನಡೆಯುವ 44ನೇ ಚೆಸ್ ಒಲಿಂಪಿಯಾಡ್ ನ್ನು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದಾರೆ.
Published On - 2:03 pm, Wed, 27 July 22