ತಮಿಳುನಾಡು: ದಿಂಡಿಗಲ್​ನ ಕಸದ ತೊಟ್ಟಿಯಲ್ಲಿ 2 ಹೆಣ್ಣು ಭ್ರೂಣಗಳು ಪತ್ತೆ

| Updated By: Digi Tech Desk

Updated on: Jul 31, 2023 | 10:45 AM

ತಮಿಳುನಾಡಿನ ದಿಂಡಿಗಲ್ ಜಿಲ್ಲೆಯ ಕಸದ ತೊಟ್ಟಿಯಲ್ಲಿ 2 ಹೆಣ್ಣು ಭ್ರೂಣಗಳು ಪತ್ತೆಯಾಗಿವೆ.

ತಮಿಳುನಾಡು: ದಿಂಡಿಗಲ್​ನ ಕಸದ ತೊಟ್ಟಿಯಲ್ಲಿ 2 ಹೆಣ್ಣು ಭ್ರೂಣಗಳು ಪತ್ತೆ
ಭ್ರೂಣ
Image Credit source: Verywell health
Follow us on

ತಮಿಳುನಾಡಿನ ದಿಂಡಿಗಲ್ ಜಿಲ್ಲೆಯ ಕಸದ ತೊಟ್ಟಿಯಲ್ಲಿ 2 ಹೆಣ್ಣು ಭ್ರೂಣಗಳು ಪತ್ತೆಯಾಗಿವೆ. ಮೆಟ್ಟುಪಟ್ಟಿಯ ಸೇಂಟ್ ಫಿಲೋಮಿನಾ ಶಾಲೆಯ ಬಳಿ ಕಸದ ತೊಟ್ಟಿಗಳಿಂದ ಕಸ ಸಂಗ್ರಹಿಸಲು ನೈರ್ಮಲ್ಯ ಕಾರ್ಯಕರ್ತರು ತೆರಳಿದಾಗ , ಕಸದ ತೊಟ್ಟಿಯೊಳಗೆ ಎರಡು ಶಿಶುಗಳ ಭ್ರೂಣವನ್ನು ನೋಡಿ ಬೆಚ್ಚಿಬಿದ್ದಿದ್ದಾರೆ.

ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ 2 ಹೆಣ್ಣು ಭ್ರೂಣವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ದಿಂಡುಗಲ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಿದ್ದಾರೆ.

ಮತ್ತಷ್ಟು ಓದಿ: ಕೊಪ್ಪಳ ಜಿಲ್ಲಾಸ್ಪತ್ರೆಯ ಶೌಚಾಲಯದಲ್ಲಿ ಭ್ರೂಣ ಪತ್ತೆ! ಡಿಹೆಚ್​ಒ ವಿರುದ್ಧ ಸಚಿವ ತಂಗಡಗಿ ಗರಂ

ಸಿಸಿಟಿವಿ ಕ್ಯಾಮೆರಾಗಳ ಮೂಲಕ ಗುರುತಿಸಲಾದ ವ್ಯಕ್ತಿಗಳ ಆಧಾರದ ಮೇಲೆ ಪೊಲೀಸರು ಶೋಧ ಆರಂಭಿಸಿದ್ದಾರೆ. ಆ ಶಿಶುಗಳು ಒಂದೇ ತಾಯಿಯ ಹೊಟ್ಟೆಯದ್ದೇ ಎಂಬುದು ಇನ್ನೂ ತಿಳಿದುಬಂದಿಲ್ಲ, ಮೃತದೇಹಗಳ ಎಸೆದವರ ಪತ್ತೆಗೆ ಪ್ರಯತ್ನಗಳು ಮುಂದುವರೆದಿವೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:12 am, Mon, 31 July 23